Advertisement

ಅಕ್ಷರ ಯೋಗ ವ್ಹೀಲ್‌ ಬಿಡುಗಡೆ

12:06 PM Jan 17, 2018 | Team Udayavani |

ಬೆಂಗಳೂರು: ವೈಜ್ಞಾನಿಕ ಹಾಗೂ ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಿರುವ “ಯೋಗ ವ್ಹೀಲ್‌’ (ಯೋಗ ಚಕ್ರ) ಉಪಯೋಗಿಸಿ 200ಕ್ಕೂ ಹೆಚ್ಚು ಯೋಗಾಸನಗಳನ್ನು ಮಾಡಬಹುದು. ಜತೆಗೆ ಇಂತಹ ವಿಶಿಷ್ಟ ಯೋಗ ಚಕ್ರವನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ವಿನ್ಯಾಸಗೊಳಿಸಲಾಗಿದ್ದು, ಇದು ಅತ್ಯಂತ ಬಳಕೆ ಸ್ನೇಹಿಯಾಗಿದೆ.

Advertisement

ಯೋಗಾಭ್ಯಾಸದಲ್ಲಿ ಪ್ರಸಿದ್ಧಿ ಪಡೆದಿರುವ ಹಿಮಾಲಯ ಪರ್ವತದ ಯೋಗಿ ಅಕ್ಷರ್‌ ಅವರ “ಅಕ್ಷರ ಯೋಗ’ ಸಂಸ್ಥೆಯು ಈ ಹೊಸ ಯೋಗ ಚಕ್ರ ಸಿದ್ಧಪಡಿಸಿದ್ದು, ನಗರದ ಸದಾಶಿವ ನಗರದಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಕನ್ನಡ ಚಲನಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ಅವರು “ಯೋಗ ವ್ಹೀಲ್‌’ ಅನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅಕ್ಷರ ಯೋಗ ಸಂಸ್ಥೆಯ ಅಧ್ಯಕ್ಷ ಹಾಗೂ ಯೋಗ ಗುರು ಅಕ್ಷರ್‌ ಮಾತನಾಡಿ,

ಇಂತಹ ಯೋಗ ಚಕ್ರವನ್ನು ಭಾರತದಲ್ಲೇ ಮೊದಲ ಬಾರಿ ನಮ್ಮ ಸಂಸ್ಥೆ ತಯಾರಿಸಿದೆ. ಐಎಸ್‌ಒ ಮಾನ್ಯತೆ ಪಡೆದಿರುವ ಈ ಯೋಗ ವ್ಹೀಲ್‌, ವ್ಯಾಯಾಮಕ್ಕೆ ಹೊಸ ಆಯಾಮ ನೀಡುತ್ತದೆ. ಉನ್ನತ ಗುಣಮಟ್ಟದ ಕೃತಕ ರಬ್ಬರ್‌ ಫೋಮ್‌ನಿಂದ ತಯಾರಿಸಲಾದ ಈ ಚಕ್ರ, ಬೆನ್ನು ಮತ್ತು ಕೀಲುಗಳಿಗೆ ಮೃದು ಅನುಭವ ನೀಡಲಿದೆ. ಈ ವ್ಹೀಲ್‌ಗ‌ಳು ಅಕ್ಷರ ಯೋಗ ಆನ್‌ಲೈನ್‌, ಅಮೇಜಾನ್‌ಡಾಟ್‌ಇನ್‌ ಮತ್ತು ಎಲ್ಲ ಅಕ್ಷರ ಯೋಗ ಕೇಂದ್ರಗಳಲ್ಲಿ ಲಭ್ಯವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next