Advertisement

ಚನ್ನಪಟ್ಟಣ ಬೊಂಬೆ, ಕಿನ್ನಾಳ ಆಟಿಕೆ ವಿದೇಶಕ್ಕೆ ರಫ್ತು

12:58 AM Jan 18, 2021 | Team Udayavani |

ಬೆಂಗಳೂರು: ಚನ್ನಪಟ್ಟಣದ ಬೊಂಬೆ, ಕಿನ್ನಾಳ ಆಟಿಕೆಗಳು ಹಾಗೂ ಮೈಸೂರು ಸಿಲ್ಕ್ ಉತ್ಪನ್ನಗಳಿಗೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ  ಹೆಜ್ಜೆ ಇರಿಸಲು ಅಂಚೆ ಇಲಾಖೆ ಮುಂದಾಗಿದೆ.

Advertisement

ದೇಶೀಯ ಉತ್ಪನ್ನಗಳನ್ನು ರಫ್ತು ಮಾಡುವ ಕುರಿತಂತೆ ಭಾರತೀಯ ಅಂಚೆ ಇಲಾಖೆಯು  ರಾಜ್ಯ ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಿದೆ.

ಅಂಚೆ ಇಲಾಖೆಯು ಈ ಹಿಂದೆ ರಾಜ್ಯದ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ಜತೆಗೂ ಒಡಂಬಡಿಕೆ ಮಾಡಿ ಕೊಂಡಿತ್ತು. ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ರಾಮನಗರ ಸಹಿತ ಬೆಂಗಳೂರು ಸುತ್ತಮುತ್ತಲಿನ  ಬೆಳೆಗಾರರ ಮಾವುಗಳನ್ನು ಪಾರ್ಸೆಲ್‌ ಸೇವೆಯ ಮೂಲಕ ಗ್ರಾಹಕರ ಮನೆಬಾಗಿಲಿಗೆ ತಲುಪಿಸಿತ್ತು.  ಇದು ಯಶಸ್ಸು ಪಡೆದ ಬಳಿಕ ಈಗ ಹೊಸ ಪ್ರಯತ್ನಕ್ಕೆ ಅಂಚೆ ಇಲಾಖೆ ಹೆಜ್ಜೆಯಿರಿಸಿದೆ.

ಚನ್ನಪಟ್ಟಣದ ಗೊಂಬೆ, ಕಿನ್ನಾಳ ಆಟಿಕೆ ಮತ್ತು ಮೈಸೂರು ಸಿಲ್ಕ್ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ  ಬೇಡಿಕೆಯಿದೆ. ಅವುಗಳನ್ನು ಅಂಚೆ ಸೇವೆ ಮೂಲಕ ರಫ್ತು ಮಾಡುವ ಕುರಿತು ಶೀಘ್ರದಲ್ಲೇ ಸರಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಂಗೈಯಲ್ಲೇ ಅಂಚೆ ಸೇವೆ :

Advertisement

ಈಗಾಗಲೇ ಕೇಂದ್ರ ಸರಕಾರದ ಎಲ್ಲ ಇಲಾಖೆಗಳು ಡಿಜಿಟಲೀಕರಣವಾಗಿದ್ದರೂ ಅಂಚೆ ಇಲಾಖೆ ಆ ನಿಟ್ಟಿನಲ್ಲಿ ನಿಧಾನಗತಿಯಲ್ಲಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿಬಂದಿತ್ತು. ಈಗ ಅಂಚೆ ಇಲಾಖೆಯೂ   ಕಂಪ್ಯೂಟರೀಕರಣಗೊಂಡಿದ್ದು, ಕರ್ನಾಟಕ ವೃತ್ತದ ಅಂಚೆ ವಿಭಾಗವು ರಾಷ್ಟ್ರಪತಿಗಳಿಂದ ಬಂಗಾರದ ಪದಕದ ಪುರಸ್ಕಾರ ಪಡೆದುಕೊಂಡಿದೆ ಎಂದು ಚೀಫ್ ಪೋಸ್ಟ್‌ ಮಾಸ್ಟರ್‌ ಜನರಲ್‌ ಶಾರದಾ ಸಂಪತ್‌ ಹೇಳಿದ್ದಾರೆ.

ಚನ್ನಪಟ್ಟಣದ ಬೊಂಬೆ, ಕಿನ್ನಾಳ ಆಟಿಕೆಗಳು ಮತ್ತು ಮೈಸೂರು ಸಿಲ್ಕ್ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಕುರಿತು ಸರಕಾರದೊಂದಿಗೆ ಶೀಘ್ರದಲ್ಲೇ ಒಡಂಬಡಿಕೆ ಮಾಡಿಕೊಳ್ಳಲಾಗುವುದು.  ಶಾರದಾ ಸಂಪತ್‌, ಚೀಫ್ ಪೋಸ್ಟ್‌ ಮಾಸ್ಟರ್‌ ಜನರಲ್‌

 

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next