Advertisement

ರಾಷ್ಟ್ರಪತಿ ಆಗಮನದಿಂದಾಗಿ ವಾಹನ ಸಂಚಾರ, ನಿಲುಗಡೆಯಲ್ಲಿ ಬದಲಾವಣೆ

12:41 PM Jun 17, 2017 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಉದ್ಘಾಟನೆ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತ ಹಾಗೂ ಗಣ್ಯರು ಆಗಮಿಸುವ ಮಾರ್ಗದಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ನಿರ್ಬಂಧಿಸಲಾಗಿದೆ. 

Advertisement

ಎಲ್ಲೆಲ್ಲಿ ನಿಲುಗಡೆ ಇಲ್ಲ?: ಹಳೆಯ ವಿಮಾನ ನಿಲ್ದಾಣ ರಸ್ತೆಯ ಸುರಂಜನ್‌ದಾಸ್‌ ರಸ್ತೆ ಜಂಕ್ಷನ್‌ನಿಂದ ಎಎಸ್‌ಸಿ ಸೆಂಟರ್‌-ಟ್ರಿನಿಟಿ ಚರ್ಚ್‌- ಟ್ರಿನಿಟಿ ವೃತ್ತ-ವೆಬ್ಸ್ ಜಂಕ್ಷನ್‌-ಡಿಕೆನ್ಸನ್‌ ರಸ್ತೆ-ಮಣಿಪಾಲ್‌ ಸೆಂಟರ್‌-ಟಿಸಿಒ ವೃತ್ತ-ರಾಜಭವನ ಹಾಗೂ ಸಿಟಿಒ ವೃತ್ತದಿಂದ ರಾಜಭವನ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ. 

ರಾಜಭವನ ಜಂಕ್ಷನ್‌-ಇನ್‌ಫ್ಯಾಂಟ್ರಿ ರಸ್ತೆ ಜಂಕ್ಷನ್‌-ಟ್ರಾಫಿಕ್‌ ಹೆಡ್‌ಕಾÌರ್ಟರ್‌-ಸಿಟಿಒ ವೃತ್ತದವರೆಗೆ, ಕಾಫಿ ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌. ವೃತ್ತ, ಬಸವೇಶ್ವರ ವೃತ್ತದಿಂದ ಎಂ.ಎಲ್‌. ಬಿಲ್ಡಿಂಗ್‌ವರೆಗೆ, ವಿಧಾನಸೌಧ ಪೂರ್ವದ್ವಾರದ ಬಳಿ ನಿರ್ಗಮನ ದ್ವಾರದಿಂದ ಗ್ರಾಂಡ್‌ ಸ್ಟೆಪ್ಸ್‌ವರೆಗೆ ವಾಹನಗಳ ನಿಲುಗಡೆ ನಿಷೇಧ. 

ವಾಹನ ಸಂಚಾರ ನಿಷಿದ್ಧ: ಇನ್ನು ಎಜಿಎಸ್‌ ಜಂಕ್ಷನ್‌ನಿಂದ ಬಹುಮಹಡಿ ಕಟ್ಟಡದವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಸಂಜೆ 4ರಿಂದ ರಾತ್ರಿ 8ರವರೆಗೆ ನಿಷೇಧಿಸಲಾಗಿದೆ. ಅದೇ ರೀತಿ, ದೇವರಾಜ್‌ ಅರಸ್‌ ರಸ್ತೆಯಲ್ಲಿ ಬಹುಮಹಡಿ ಕಟ್ಟಡದಿಂದ ಎಜಿಎಸ್‌ ಜಂಕ್ಷನ್‌ವರೆಗೆ ವಾಹನಗಳ ಸಂಚಾರ ಇರುವುದಿಲ್ಲ. 

ಇಲ್ಲಿ ನಿಲುಗಡೆಗೆ ಅವಕಾಶ: ಸಚಿವರು ಮತ್ತು ಶಾಸಕರ ವಾಹನಗಳ ನಿಲುಗಡೆ- ವಿಕಾಸಸೌಧ ನಿಲುಗಡೆ ಸ್ಥಳ ಸೆಲ್ಲರ್‌ 1 ಮತ್ತು 3ರಲ್ಲಿ ಹಾಗೂ ವಿಧಾನಸೌಧ ಪಶ್ಚಿಮ ದ್ವಾರದ ಕೆಂಗಲ್‌ ಹನುಮಂತಯ್ಯ ವೃತ್ತದಿಂದ ಡಿಸ್ಪೆನ್ಸರಿ ಹಾಗೂ ಡಿಸ್ಪೆನ್ಸರಿಯಿಂದ ನಿರ್ಗಮನ ದ್ವಾರದವರೆಗೆ ನಿಲುಗಡೆಗೆ ಅವಕಾಶ ಇದೆ. ಮಾಧ್ಯಮದ ವಾಹನಗಳು ಎಜಿಎಸ್‌ ಕಚೇರಿ ನಿಲುಗಡೆ ಸ್ಥಳದಲ್ಲಿ ವಾಹನ ನಿಲ್ಲಿಸಬಹುದು. 

Advertisement

ಕಾರ್ಯಕ್ರಮದ ಆಹ್ವಾನಿತರು ಬಹುಮಹಡಿ ಕಟ್ಟಡದ ವಾಹನ ನಿಲುಗಡೆ ಸ್ಥಳ, ಹಳೆಯ ಕೆಜಿಐಡಿ ಮತ್ತು ಹೈಕೋರ್ಟ್‌ ನಿಲುಗಡೆ ಸ್ಥಳ, ಕಬ್ಬನ್‌ ಉದ್ಯಾನದ ಒಳಭಾಗ, ಸೆಂಟ್ರಲ್‌ ಸ್ಟ್ರೀಟ್‌, ಅನಿಲ್‌ ಕುಂಬ್ಳೆ ವೃತ್ತದಿಂದ ಬಿ.ಆರ್‌.ವಿ. ವೃತ್ತದವರೆಗೆ ರಸ್ತೆಯ ಪಶ್ಚಿಮ ಭಾಗದಲ್ಲಿ, ಸ್ವಾತಂತ್ರ್ಯ ಉದ್ಯಾನ ಆವರಣ, ಅರಮನೆ ರಸ್ತೆ, ಸಿಐಡಿ ವೃತ್ತದಿಂದ ಮಹಾರಾಣಿ ಕಾಲೇಜು ಬಳಿಯ ಸೇತುವೆಯ ತಿರುವಿನವರೆಗೆ,

-ಕಸ್ತೂರಬಾ ರಸ್ತೆ, ಹಡ್ಸನ್‌ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ಸಿದ್ದಲಿಂಗಯ್ಯ ವೃತ್ತದಿಂದ ಮ್ಯೂಸಿಯಂವರೆಗೆ ರಸ್ತೆಯ ಪಶ್ಚಿಮ ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಪೊಲೀಸ್‌ ಅಧಿಕಾರಿಗಳು/ ಸಿಬ್ಬಂದಿ ವಾಹನಗಳನ್ನು ಶಾಸಕರ ಭವನದ ವಾಹನ ನಿಲುಗಡೆ ಸ್ಥಳದಲ್ಲಿ ಪಾರ್ಕಿಂಗ್‌ ಮಾಡಬಹುದು ಎಂದು ಬಿಎಂಆರ್‌ಸಿ ಪ್ರಕಟಣೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next