ಮಡಿಕೇರಿ: ಚೆಸ್ಕಾಂ, ಸರ್ವೇ, ಶಿಕ್ಷಣ ಸೇರಿದಂತೆ ಕೆಲವು ಇಲಾಖೆಗಳ ಕಾರ್ಯವೈಖರಿಯಿಂದ ಜನಸಾಮಾನ್ಯರು ತೊಂದರೆಗೆ ಒಳಗಾಗುತ್ತಿದ್ದು, ಕಾರ್ಯವೈಖರಿಯನ್ನು ಬದಲಿಸಿ ಕೊಳ್ಳುವಂತೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಕಟ್ಟುನಿಟ್ಟಿನ ಸೂಚನೆ ಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ.
ಪೊನ್ನಂಪೇಟೆ ತಾಲೂಕು ಪಂಚಾ ಯತ್ ಸಭಾಂಗಣದಲ್ಲಿ ನಡೆದ ತ್ತೈಮಾ ಸಿಕ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕರು, ಸರಕಾರದ ಯೋಜನೆಗಳನ್ನು ಸಮ ರ್ಪಕವಾಗಿ ಜನರಿಗೆ ತಲುಪಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಪ್ರಯತ್ನಶೀಲರಾಗಬೇಕು ಎಂದರು.
ಸಭೆಯಲ್ಲಿ ಅಧಿಕಾರಿಗಳಿಂದ ಇಲಾಖೆಗಳ ಬಗ್ಗೆ ಮಾಹಿತಿ ಪಡೆದ ಶಾಸಕರು, ಕಡಿಮೆ ಹಾಜರಾತಿ ಇರುವ ಶಾಲೆಗಳಿಗೆ ಹೆಚ್ಚಿನ ಶಿಕ್ಷಕರನ್ನು ನೇಮಿಸಿ, ಹೆಚ್ಚು ವಿದ್ಯಾರ್ಥಿಗಳು ಇರುವ ಶಾಲೆಗಳಿಗೆ ಕಡಿಮೆ ಶಿಕ್ಷಕರನ್ನು ನೇಮಿಸಿಕೊಳ್ಳುವುದು, ಶಾಲಾ ಶಿಕ್ಷ ಕರು ಕೇಳುವ ಸ್ಥಳಕ್ಕೆ ಅವರನ್ನು ಏತಕ್ಕೆ ವರ್ಗಾಯಿಸುತ್ತೀರಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಶಾಸ ಕರು ಪ್ರಶ್ನಿಸಿ, ಈ ವ್ಯವಸ್ಥೆ ಮುಂದೆ ಬದಲಾಗಬೇಕು ಎಂದು ತಿಳಿಸಿದರು.
ನಿಟ್ಟೂರು ಗ್ರಾಮದ ಪಾಲದಳ ಹಾಡಿಯ ಹದಿನಾರು ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿ ಸಿರುವ ಬಗ್ಗೆ ಪ್ರಶ್ನಿಸಿದ ಶಾಸಕರು, ಅವರು ಉಳಿಸಿಕೊಂಡಿರುವ 8ಸಾವಿರ ರೂ.ಮೊತ್ತದಲ್ಲಿ, ಸಾವಿರ ರೂ.ಗಳಂತೆ
ಕಟ್ಟುತ್ತಿದ್ದರೂ ಕೂಡ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ, ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದವರು ಸೂಚಿಸಿದರು.