Advertisement

ಬದಲಾಗಲಿಲ್ಲ ಭಾರತ ತಂಡ

03:35 AM Feb 15, 2017 | |

ಮುಂಬಯಿ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಮುಂಬರುವ ಅತಿ ಮಹತ್ವದ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಲಾಯಿತು. ನಿರೀಕ್ಷೆಯಂತೆ ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯಕ್ಕೆಂದು ಆರಿಸಲಾದ ತಂಡವನ್ನೇ ಉಳಿಸಿಕೊಳ್ಳಲಾಯಿತು. 

Advertisement

ಇದೇ ಮೊದಲ ಸಲ ಭಾರತದ ನೆಲದಲ್ಲಿ ಟೆಸ್ಟ್‌ ಆಡಿದ ಬಾಂಗ್ಲಾದೇಶ ಸೋಮವಾರ 208 ರನ್ನುಗಳ ದೊಡ್ಡ ಸೋಲಿಗೆ ತುತ್ತಾಗಿತ್ತು. ಈ ವಿಜಯೀ ತಂಡದ ಮೇಲೆ ಆಯ್ಕೆಗಾರರು ವಿಶ್ವಾಸವಿರಿಸಿದರು. ಎಂ.ಎಸ್‌.ಕೆ. ಪ್ರಸಾದ್‌ ನೇತೃತ್ವದ ಸಮಿತಿ ಮುಂಬಯಿಯಲ್ಲಿ ಸಭೆ ಸೇರಿ ಯಾವುದೇ ಗೊಂದಲವಿಲ್ಲದೆ ಆಯ್ಕೆ ಪ್ರಕ್ರಿಯೆಯನ್ನು ಅಂತಿಮ ಗೊಳಿಸಿತು.

ಸರಣಿಯ ಮೊದಲ ಟೆಸ್ಟ್‌ ಫೆ. 23ರಿಂದ ಪುಣೆಯಲ್ಲಿ, 2ನೇ ಟೆಸ್ಟ್‌ ಮಾ. 4ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. ರಾಂಚಿ ಹಾಗೂ ಧರ್ಮಶಾಲಾದಲ್ಲಿ ನಡೆಯಲಿ ರುವ ಕೊನೆಯ ಎರಡು ಟೆಸ್ಟ್‌ ಗಳಿಗೆ ಮತ್ತೆ ತಂಡವನ್ನು ಅಂತಿಮ ಗೊಳಿಸಲಾಗುವುದು.

ಗಾಯಾಳುಗಳಿಗೆ ವಿಶ್ರಾಂತಿ
ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆಂದು ಲೆಗ್‌ಸ್ಪಿನ್ನರ್‌ ಅಮಿತ್‌ ಮಿಶ್ರಾ ಮೊದಲು ಆಯ್ಕೆಯಾಗಿ ದ್ದರು. ಆದರೆ ಅವರು ಗಾಯಾಳಾಗಿ ಹೊರಗೆ ಉಳಿಯಬೇಕಾದ್ದರಿಂದ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರನ್ನು ಆಯ್ಕೆ ಮಾಡ ಲಾಗಿತ್ತು. ಮಿಶ್ರಾ ಇನ್ನೂ ಚೇತರಿಸದ ಕಾರಣ ಯಾದವ್‌ ಅವರೇ ತಂಡದಲ್ಲಿ ಮುಂದುವರಿದಿದ್ದಾರೆ. ಹಾಗೆಯೇ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮ, ಬೌಲರ್‌ ಮೊಹಮ್ಮದ್‌ ಶಮಿ ಕೂಡ ಪೂರ್ತಿ ಗುಣಮುಖರಾಗದ ಕಾರಣ ಇವರನ್ನು ಆಯ್ಕೆಗೆ ಪರಿಗಣಿಸಿಲ್ಲ. 

ಉಳಿದಂತೆ ಅಜಿಂಕ್ಯ ರಹಾನೆ, ಜಯಂತ್‌ ಯಾದವ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರೆಲ್ಲ ತಂಡದಲ್ಲಿ ಮುಂದುವರಿದಿದ್ದಾರೆ. ಮುರಳಿ ವಿಜಯ್‌, ಚೇತೇಶ್ವರ್‌ ಪೂಜಾರ, ಕರುಣ್‌ ನಾಯರ್‌, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ ಅರ್ಹತೆಯಂತೆ ಆಯ್ಕೆಯಾದರು. 

Advertisement

ಬಾಂಗ್ಲಾದೇಶ ವಿರುದ್ಧ ಎರಡೂ ಇನ್ನಿಂಗ್ಸ್‌ ಗಳಲ್ಲಿ ವಿಫ‌ಲ ರಾದ ಕರ್ನಾಟಕದ ಆರಂಭಕಾರ ಕೆ.ಎಲ್‌. ರಾಹುಲ್‌ ಕೂಡ ಇವರೊಂದಿಗೆ ಕಾಣಿಸಿಕೊಂಡರು. ಹೆಚ್ಚುವರಿ ಓಪನರ್‌ ಅಭಿನವ್‌ ಮುಕುಂದ್‌ ಕೂಡ ತಂಡದಲ್ಲಿದ್ದಾರೆ.

ಕೀಪಿಂಗಿಗೆ ಸಾಹಾ
ವಿಕೆಟ್‌ ಕೀಪಿಂಗಿಗೆ “ಮೊದಲ ಆಯ್ಕೆಯ ಕೀಪರ್‌’ ವೃದ್ಧಿ ಮಾನ್‌ ಸಾಹಾ ಅವರನ್ನೇ ಮುಂದು ವರಿಸಲಾಯಿತು. ಸಾಹಾ ಬಾಂಗ್ಲಾ ವಿರುದ್ಧ ಶತಕ ಬಾರಿಸಿ ಗಮನ ಸೆಳೆದಿದ್ದರು. ವೇಗದ ಬೌಲಿಂಗ್‌ ವಿಭಾಗದಲ್ಲಿ ಇಶಾಂತ್‌ ಶರ್ಮ, ಉಮೇಶ್‌ ಯಾದವ್‌, ಭುವನೇಶ್ವರ್‌ ಕುಮಾರ್‌ ಇದ್ದಾರೆ.

ತವರಿನಲ್ಲಿ ಮೊದಲು
ಬಾಂಗ್ಲಾದೇಶ ವಿರುದ್ಧ ಮೊಳ  ಗಿಸಿದ 208 ರನ್ನುಗಳ ಅಮೋಘ ಜಯಭೇರಿಯೊಂದಿಗೆ ಸುನೀಲ್‌ ಗಾವಸ್ಕರ್‌, ಮಹೇಂದ್ರ ಸಿಂಗ್‌ ಧೋನಿ ಅವರ ನಾಯಕತ್ವದ ದಾಖಲೆ ಮುರಿದು ಮುನ್ನುಗ್ಗುತ್ತಿರುವ ವಿರಾಟ್‌ ಕೊಹ್ಲಿ ಇದೇ ಮೊದಲ ಬಾರಿಗೆ ತವರಿನಲ್ಲಿ ಆಸ್ಟ್ರೇಲಿಯ ವಿರುದ್ಧ ಟೀಮ್‌ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಕೊಹ್ಲಿ ಪಾಲಿಗೆ ಇದು ಸವಾಲಿನ ಸರಣಿ.

ಭಾರತ ತಂಡ: ವಿರಾಟ್‌ ಕೊಹ್ಲಿ (ನಾಯಕ), ಮುರಳಿ ವಿಜಯ್‌, ಕೆ.ಎಲ್‌. ರಾಹುಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್‌ ಸಾಹಾ (ವಿ.ಕೀ.), ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಇಶಾಂತ್‌ ಶರ್ಮ, ಭುವನೇಶ್ವರ್‌ ಕುಮಾರ್‌, ಉಮೇಶ್‌ ಯಾದವ್‌, ಕರುಣ್‌ ನಾಯರ್‌, ಜಯಂತ್‌ ಯಾದವ್‌, ಕುಲದೀಪ್‌ ಯಾದವ್‌, ಅಭಿನವ್‌ ಮುಕುಂದ್‌, ಹಾರ್ದಿಕ್‌ ಪಾಂಡ್ಯ.

Advertisement

Udayavani is now on Telegram. Click here to join our channel and stay updated with the latest news.

Next