Advertisement
ಕರಾವಳಿ ಭಾಗದ ಅರಣ್ಯದಂಚಿನ ಭಾಗದಲ್ಲಿ ಅಪರೂಪಕ್ಕೆ ಕಾಣಸಿಗುತ್ತಿದ್ದ ಈ ಲಂಗೂರ್ ಇಂದು ಗ್ರಾಮೀಣ, ಪಟ್ಟಣ ಭಾಗದಲ್ಲೂ ಕಂಡು ಬರುತ್ತಿದೆ. ಉಡುಪಿಯ ಅಲೆವೂರು, ಇಂದ್ರಾಳಿ, ಮರ್ಣೆ ಭಾಗದಲ್ಲಿ ಮನೆಯಂಗಳದಲ್ಲಿ ಬಂದು ಕೂರುತ್ತಿವೆ. ವನ್ಯಜೀವಿಗಳ ಮೇಲೆ ನಗರೀಕರಣ ಪ್ರಭಾವ ಬೀರಿದ ರೀತಿಯಿದು. ಗ್ರೇ ಲಂಗೂರ್ ಮತ್ತು ಸಿಂಗಳೀಕ ಜಾತಿಯ ಕೋತಿಗಳು ಭಾರತದ ಮಧ್ಯ ಪಶ್ಚಿಮಘಟ್ಟದಲ್ಲಿ ಮಾತ್ರ ಕಾಣಸಿಗುವುದು ಇಲ್ಲಿನ ಜೀವವೈವಿಧ್ಯತೆಯ ವೈಶಿಷ್ಟé. ಮಳೆಕಾಡು ಮೆಚ್ಚಿನ ಆವಾಸಸ್ಥಾನ. ಕನ್ನಡದಲ್ಲಿ ಕಪ್ಪು ಮೂತಿಯ ಮುಶಿಯ, ತುಳು ಭಾಷೆಯಲ್ಲಿ ಮುಜ್ಜು ಎಂದು ಕರೆಯಲಾಗುತ್ತದೆ.
“ಬ್ಲ್ಯಾಕ್ ಫೂಟೆಡ್ ಗ್ರೇ ಲಂಗೂರ್’ ಹೆಚ್ಚಾಗಿ ಮರಗಳ ಮೇಲೆ ಹಸುರು ಎಲೆ, ಹಣ್ಣುಗಳನ್ನು ತಿಂದು ಬದುಕುವ ಕೋತಿಗಳ ಜಾತಿಗೆ ಸೇರಿದ ಪ್ರಾಣಿ. ಕಾಡಿನಲ್ಲಿ ಆಹಾರದ ಕೊರತೆಯಾದಾಗ ವಲಸೆ ಸಾಮಾನ್ಯ. ರಸ್ತೆ ಬದಿಯಲ್ಲಿ ವಾಹನ ಸವಾರರು ಊಟ, ತಿಂಡಿ ನೀಡಿದಾಗ ಹೆಚ್ಚು ಆಕರ್ಷಣೆಗೆ ಒಳಗಾಗುತ್ತವೆ. ಈ ಬಾಯಿರುಚಿ ಸಿಕ್ಕ ಅನಂತರ ಅವುಗಳಿಗೆ ಎಲೆ, ಹಣ್ಣು ಇಷ್ಟವಾಗುವುದಿಲ್ಲ. ಮನುಷ್ಯ ಸ್ನೇಹಿ ಜೀವಿಗಳಾದ್ದರಿಂದ ಪಟ್ಟಣ, ಗ್ರಾಮೀಣ ಭಾಗಕ್ಕೆ ಆಹಾರ ಅರಸಿಕೊಂಡು ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
Related Articles
ಗ್ರೇ ಲಂಗೂರ್ ಬಗ್ಗೆ ವನ್ಯಜೀವಿ ತಜ್ಞರ ಅಧ್ಯಯನ ವರದಿ ಪರಿಶೀಲಿಸಿದ ಇಂಟರ್‌ನ್ಯಾಶನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ನೇಚರ್ (ಐಯುಸಿಎನ್) ಸಂಸ್ಥೆಯು ಗ್ರೇ ಲಂಗೂರ್ ಅಪಾಯಕ್ಕೊಳಗಾಗಬಹುದಾದ ಪ್ರಭೇದ ಎಂದು ಕೆಂಪು ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಇದರ ಸಂರಕ್ಷಣೆ, ಜೀವನ ಕ್ರಮದ ಬಗ್ಗೆ ಮುತುವರ್ಜಿ ವಹಿಸುವಂತೆ ಸೂಚಿಸಿದೆ.
Advertisement
ಜಗತ್ತಿನ ಬೇರೆಲ್ಲೂ ಕಾಣಿಸದ ಗ್ರೇ ಲಂಗೂರ್‌ಗಳು ಕರ್ನಾಟಕ, ಕೇರಳ, ಗೋವಾ ರಾಜ್ಯಗಳ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಾತ್ರ ಕಾಣಸಿಗುತ್ತವೆ. ಗುಂಪಿನಲ್ಲಿ ವಾಸಿಸುವ ಗ್ರೇ ಲಂಗೂರ್ ಹೆಚ್ಚಾಗಿ ಹಸುರು ಎಲೆ ತಿಂದು ಬದುಕುವ ಕೋತಿಯ ಜಾತಿಗೆ ಸೇರಿದೆ. ಜೀವಿತಾವಧಿ ಸುಮಾರು 30 ವರ್ಷ.– ಡಾ| ಮನಿತಾ ಟಿ.ಕೆ., ಮುಖ್ಯಸ್ಥರು, ಪ್ರಾಣಿಶಾಸ್ತ್ರ ವಿಭಾಗ, ಎಂಜಿಎಂ ಕಾಲೇಜು ಕಾಡು ಪ್ರಾಣಿಗಳು ನೈಸರ್ಗಿಕವಾಗಿಯೇ ಆಹಾರ ಸೇವಿಸಬೇಕು.ಅವುಗಳಿಗೆ ಬೇಕರಿ ತಿಂಡಿ, ಅನ್ನ, ಸಾರು, ಮೊದಲಾದ ಆಹಾರ ನೀಡುವುದು ಸೂಕ್ತವಲ್ಲ. ಈ ರೀತಿ ಆಹಾರ ನೀಡದಂತೆ ಆಗುಂಬೆ, ಹೆಬ್ರಿ ಪರಿಸರದಲ್ಲಿ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಾಡಿನಲ್ಲಿ ಎಲ್ಲ ಸಮಯದಲ್ಲಿ ಆಹಾರ ಸಿಗುವುದು ಕಡಿಮೆ. ಮನುಷ್ಯರು ನೀಡುವ ರುಚಿಕರ ಆಹಾರದ ಆಕರ್ಷಣೆಗೊಳಗಾಗಿ ಲಂಗೂರ್‌ನಂತಹ ವಿಶೇಷ ಜಾತಿಯ ಕೋತಿಗಳು ಕಾಡುಬಿಟ್ಟು ನಗರ, ಗ್ರಾಮೀಣ ಭಾಗಕ್ಕೆ ವಲಸೆ ಬರುತ್ತಿರಬಹುದು.
– ಗಣಪತಿ, ಡಿಎಫ್ಒ, ಅರಣ್ಯ ಇಲಾಖೆ, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಅವಿನ್ ಶೆಟ್ಟಿ