Advertisement

ಚಂದ್ರು, ಹರ್ಷ, ಪ್ರವೀಣ, ನಾಳೆ ಇನ್ಯಾರೋ ? ಸಿ.ಟಿ.ರವಿ, ರೇಣುಕಾಚಾರ್ಯ ಬೇಸರ

01:20 PM Jul 27, 2022 | Team Udayavani |

ಬೆಂಗಳೂರು :ಚಂದ್ರ, ಹರ್ಷ, ಪ್ರವೀಣ ನಾಳೆ ಇನ್ಯಾರೋ ? ಎಂದು ಬಿಜೆಪಿ ಸರಕಾರದ ಕಾರ್ಯ ನಿರ್ವಹಣೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧವೇ ಸಿ.ಟಿ. ರವಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನೂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಇಂಥ ಘಟನೆಗಳಿಂದ ಕಾರ್ಯಕರ್ತರು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ. ಚಂದ್ರು, ಹರ್ಷ, ಪ್ರವೀಣ್ ನಾಳೆ ಇನ್ಯಾರೋ? ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕರ್ತರ ಭಾವನೆ ಜೊತೆಗೆ ನಾವು ಇದ್ದೇವೆ. ನಾವು ಕೇವಲ ಅಧಿಕಾರ ಮಾಡಲು ಬಂದಿಲ್ಲ. ಜಿಹಾದ್  ವಿರುದ್ಧ ಹೋರಾಟಕ್ಕೆ ಅಣಿಗೊಳಿಸಬೇಕು. ಇದು ರಾಜಸ್ಥಾನದಲ್ಲಿ ನಡೆದ  ಘಟನೆಯ ಒಂದು  ಭಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರ ಅಂತ್ಯ ಯಾವಾಗ?

Advertisement

ಹಿಂದೂ‌ ಸಂಘಟನೆ, ನಮ್ಮ‌ಕರ್ಯಕರ್ತರು ಟಾರ್ಗೆಟ್ ಆಗಿದ್ದಾರೆ, ಇದರ ಅಂತ್ಯ ಯಾವಾಗ? ಯುಪಿ‌ ಸಿಎಂ‌ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಇವರನ್ನ ಹದುಬಸ್ತಿನಲ್ಲಿ‌ಇಡಬೇಕು ಎಂದು ಸಿಎಂ‌ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ಸಿಎಂ ಬೊಮ್ಮಾಯಿ ಇದನ್ನ ಗಂಭೀರವಾಗಿ ಪರಿಗಣಿಸುತ್ತಾರೆ. ಕಾಂಗ್ರೆಸ್ ಕಾಲದಲ್ಲಿ 10-15ಜನರ ಹತ್ಯೆ ಆಗುತ್ತಿತ್ತು.ಈಗ ಕಂಟ್ರೋಲ್ ಆಗಿದೆ. ಸಿಎಂ ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ನನಗೆ ಬೆದರಿಕೆ ಕರೆ ಬಂದಿತ್ತು, ಆರೋಪಿಗಳನ್ನ ಪತ್ತೆ ಹಚ್ಚಲಾಗಿಲ್ಲ.ನನ್ನಂತವರಿಗೆ ಹೀಗಾದರೆ ಇನ್ನು ಸಾಮಾನ್ಯ ಕಾರ್ಯಕರ್ತರ ಪಾಡೇನು. ನಾನೇನು ಹೆದರುವುದಿಲ್ಲ. ನಾನು ಸಾವಿರಾರು ಜನರ ನಡುವೆ ಇರುತ್ತೇನೆ. ಹೊನ್ನಾಳಿಯಲ್ಲಿ ಮಾರಿಕಾಂಬಾ ಉತ್ಸವದಲ್ಲಿ ಇದ್ದೆ.ಹೊನ್ನಾಳಿ ಯುವಕರು ನನಗೆ ಬೆಂಗಾವಲಾಗಿದ್ದರು.
ಹಾಗಂತ ನಾನು ಸರ್ಕಾರದ ವಿರುದ್ಧ ಮಾತನಾಡುತ್ತಿಲ್ಲ.ಇಂತವರ ಸೆದೆ ಬಡೆದ ಮೇಲೆ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ. ಪ್ರವೀಣ್ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಕುಟುಂಬಕ್ಕೆ ಈಗಲೇ ಕಳಿಸುತ್ತೇನೆ ಎಂದರು.

ಹತ್ಯೆ ಖಂಡನೀಯ : ಬಿ.ಕೆ.ಹರಿಪ್ರಸಾದ್

”ಬಿಲ್ಲವ ಯುವ ವಾಹಿನಿಯ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡನೀಯ. ಸರ್ಕಾರ ತನಿಖೆಗೂ ಮೊದಲೇ ಪೂರ್ವಗ್ರಹ ಪೀಡತರಾಗದೆ “ನೈಜ” ಕೊಲೆಗಡುಕರನ್ನ ಪತ್ತೆ ಹಚ್ಚಿ ಬಂಧಿಸಬೇಕು. ಅಮಾಯಕ ಯುವಕರ ಹತ್ಯೆಗಳು ನಿಲ್ಲಬೇಕಿದೆ. ಕರಾವಳಿ ಜನತೆ ಯಾವುದೇ ಉತ್ಪ್ರೇಕ್ಷೆಗೆ ಒಳಗಾಗದೆ ಶಾಂತಿ ಕಾಪಾಡಲಿ” ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next