Advertisement

ಇಸ್ರೋ ಚಂದ್ರಯಾನ- 2ರಲ್ಲಿ ನಾಸಾದ ಲೇಸರ್‌ ಉಪಕರಣ

09:32 AM Mar 29, 2019 | Hari Prasad |

ವಾಷಿಂಗ್ಟನ್‌: ಭೂಮಿಯಿಂದ ಚಂದ್ರನಲ್ಲಿಗೆ ಇರುವ ಅಂತರವನ್ನು ನಿಖರವಾಗಿ ಲೆಕ್ಕಹಾಕುವ ಉದ್ದೇಶಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಇಸ್ರೋದ ಬಹು ಉದ್ದೇಶಿತ ಚಂದ್ರಯಾನ – 2ರಲ್ಲಿ ನಾಸಾ ನಿರ್ಮಿತ ಲೇಸರ್‌ ಉಪಕರಣಗಳನ್ನು ಬಳಸಲಾಗುತ್ತಿದೆ ಎಂಬ ಮಾಹಿತಿ ನಾಸಾ ಅಂಗಳದಿಂದ ಹೊರಬಿದ್ದಿದೆ. ಇಸ್ರೋ ಪ್ರಾಯೋಜಿತ ಚಂದ್ರಯಾನ 2 ಯೋಜನೆಗೆ ಎಪ್ರಿಲ್‌ ತಿಂಗಳಿನಲ್ಲಿ ಚಾಲನೆ ಸಿಗುವ ನಿರೀಕ್ಷೆಯಿದೆ.

Advertisement

ಭೂಮಿಯಿಂದ ಕಳುಹಿಸಲ್ಪಡುವ ಲೇಸರ್‌ ಬೆಳಕಿನ ಸಿಗ್ನಲ್‌ ಗಳನ್ನು ಪ್ರತಿಫ‌ಲನಗೊಳಿಸುವ ಸುಸಜ್ಜಿತ ಮಸೂರಗಳೇ ಈ ರೆಟ್ರೋರಿಫ್ಲೆಕ್ಟರ್‌ ಗಳಾಗಿವೆ. ಭೂಮಿಯಿಂದ ಕಳುಹಿಸಲ್ಪಟ್ಟ ಬಾಹ್ಯಾಕಾಶ ನೌಕೆಗಳು (ಲ್ಯಾಂಡರ್‌) ನಿಖರವಾಗಿ ಎಲ್ಲಿದೆ ಎಂಬುದನ್ನು ಗುರುತಿಸುವಲ್ಲಿ ಈ ಸಿಗ್ನಲ್‌ ಗಳ ಪಾತ್ರ ಪ್ರಮುಖವಾದುದಾಗಿವೆ, ಮತ್ತು ಈ ಮೂಲಕ ಚಂದ್ರ ಭೂಮಿಯಿಂದ ನಿರ್ಧಿಷ್ಟವಾಗಿ ಎಷ್ಟು ದೂರದಲ್ಲಿದ್ದಾನೆ ಎಂಬುದನ್ನು ವಿಜ್ಞಾನಿಗಳು ನಿಖರವಾಗಿ ಲೆಕ್ಕಹಾಕಬಹುದಾಗಿದೆ.

ಈಗಾಗಲೇ ಈ ರೀತಿಯ ಐದು ಉಪಕರಣಗಳು ಚಂದ್ರನ ಮೇಲ್ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಅವುಗಳಲ್ಲಿ ಕೆಲವೊಂದು ನ್ಯೂನತೆಗಳಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಈಗ ಚಂದ್ರನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಫ‌ಲನಗಳು ಗಾತ್ರದಲ್ಲಿ ದೊಡ್ಡದಾಗಿವೆ. ಕಿರಣಗಳ ಬದಲಿಗೆ ಪ್ರತಿಫ‌ಲನಗಳು ಚಂದ್ರನ ಮೇಲ್ಭಾಗದ ನಿಖರ ಲೆಕ್ಕಾಚಾರಕ್ಕೆ ಸಹಕಾರಿಯಾಗಲಿದೆ ಎಂಬ ಮಾಹಿತಿಯನ್ನು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಚಂದ್ರಯಾನ 2 ಮತ್ತು ಇಸ್ರೇಲಿ ಬಾಹ್ಯಾಕಾಶ ನೌಕೆ ಬೆರೆಶೀಟ್‌ ನಲ್ಲಿ ನಾಸಾ ನಿರ್ಮಿತ ಲೇಸರ್‌ ರೆಟ್ರೋರಿಫ್ಲೆಕ್ಟರ್‌ ಕಿರಣಗಳಿರಲಿವೆ ಎಂಬ ಮಾಹಿತಿಯನ್ನು ಅಮೆರಿಕಾದ ಟೆಕ್ಸಾಸ್‌ ನಲ್ಲಿ ಕಳೆದ ವಾರ ಮುಕ್ತಾಯಗೊಂಡ ಲೂನಾರ್‌ ಆಂಡ್‌ ಪ್ಲಾನೆಟರಿ ಸೈನ್ಸ್‌ ಕಾನ್ಫರೆನ್ಸ್‌ ನಲ್ಲಿ ನಾಸಾ ಮೂಲಗಳು ಖಚಿತಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next