Advertisement

Chandrayaan-3: ಉಡಾವಣಾ ಪೂರ್ವಾಭ್ಯಾಸ ಯಶಸ್ವಿ

11:25 PM Jul 11, 2023 | Team Udayavani |

ತಿರುಪತಿ: ಚಂದ್ರಯಾನ-3 ಯೋಜನೆಯ “ಉಡಾವಣಾ ಪೂರ್ವಾಭ್ಯಾಸ’ವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೋ) ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

Advertisement

ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಉಪಗ್ರಹ ಹೊತ್ತ ಎಲ್‌ವಿಎಂ-3 ಬಾಹ್ಯಾಕಾಶ ನೌಕೆಯು ಜು.14ರ ಮಧ್ಯಾಹ್ನ 2.45ಕ್ಕೆ ನಭಕ್ಕೆ ಹಾರಲಿದೆ. “ಚಂದ್ರಯಾನ-3 ಯೋಜನೆ: 24 ಗಂಟೆಗಳ ಅವಧಿಯ ಸಂಪೂರ್ಣ ಉಡವಣಾ ತಯಾರಿ ಮತ್ತು ಪ್ರಕ್ರಿಯೆಯು ಪುರ್ಣಗೊಂಡಿದೆ’ ಎಂದು ಇಸ್ರೋ ಟ್ವೀಟ್‌ ಮಾಡಿದೆ.

ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರ­ಯಾನ-3 ಉಪಗ್ರಹವನ್ನು ಉಡಾವಣಾ ವಾಹಕ ಎಲ್‌ವಿಎಂ-3 ನೊಂದಿಗೆ ಸಂಯೋಜಿಸ­ಲಾಗಿದೆ ಎಂದು ಇಸ್ರೋ ತಿಳಿಸಿದೆ.

ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ 3 ಯೋಜನೆಯು ಚಂದ್ರಯಾನ 2ರ ಮುಂದುವರಿದ ಕಾರ್ಯಾಚರಣೆಯಾಗಿದೆ. ಈ ಯೋಜನೆಯ ಮೂಲಕ ಚಂದ್ರನ ದಕ್ಷಿಣ ಧ್ರುವದ ಕತ್ತಲಿನ ಭಾಗದ ಅನ್ವೇಷಣೆ ನಡೆಯಲಿದ್ದು, ಅದರ ಮೇಲ್ಮೈ ಅಧ್ಯಯನ, ಚಂದ್ರನಲ್ಲಿ ನೀರು ಇರುವ ಸ್ಥಳವನ್ನು ಪತ್ತೆ ಮಾಡಲು, ನೀರಿನ ಪ್ರಮಾಣ ತಿಳಿಯಲು, ಖನಿಜಗಳ ಅಧ್ಯಯನ ಸೇರಿದಂತೆ ಚಂದ್ರನ ವೈಜ್ಞಾನಿಕ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನಿಗಳಿಗೆ ಸಾಧ್ಯವಾಗಲಿದೆ. ಚಂದ್ರಯಾನ 2 ವಿಫ‌ಲ­ವಾಗಿದ್ದು, ಚಂದ್ರಯಾನ 3 ಯೋಜನೆಯ ಬಗ್ಗೆ ವಿಜ್ಞಾನಿಗಳಿಗೆ ಅಪಾರ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next