Advertisement

ಮುಂದಿನ ವರ್ಷ ಜೂನ್‌ನಲ್ಲಿ ಚಂದ್ರಯಾನ-3 ಉಡಾವಣೆ: ಇಸ್ರೋ

12:15 AM Oct 22, 2022 | Team Udayavani |

ಹೊಸದಿಲ್ಲಿ: ಚಂದ್ರನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ(ಇಸ್ರೊ) ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಅನ್ನು 2023ರ ಜೂನ್‌ನಲ್ಲಿ ಉಡಾವಣೆ ಮಾಡಲಿದೆ.

Advertisement

“ಚಂದ್ರನತ್ತ ತನ್ನ ಮೂರನೇ ಬಾಹ್ಯಾ ಕಾಶ ಯೋಜನೆಯಾಗಿರುವ ಚಂದ್ರ ಯಾನ-3 ಅನ್ನು ಲಾಂಚ್‌ ವೆಹಿಕಲ್‌ ಮಾರ್ಕ್‌-3(ಎಲ್‌ವಿಎಂ3) ಮೂಲಕ ಮುಂದಿನ ವರ್ಷದ ಜೂನ್‌ನಲ್ಲಿ ಇಸ್ರೋ ಉಡಾವಣೆ ಮಾಡಲಿದೆ,’ ಎಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಗುರುವಾರ ತಿಳಿಸಿದ್ದಾರೆ.

“ಮಾನವರಹಿತ ಬಾಹ್ಯಾಕಾಶ ನೌಕೆಗಳ ಯಶಸ್ವಿ ಪರೀಕ್ಷೆಯ ನಂತರ 2024ರ ಅಂತ್ಯದ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋ ಯೋಜಿಸಿದೆ,’ ಎಂದು ಮಾಹಿತಿ ನೀಡಿದ್ದಾರೆ.

“ಚಂದ್ರಯಾನ-3 ಸಿದ್ಧವಾಗಿದೆ. ಇದು ಚಂದ್ರಯಾನ-2ರ ಪ್ರತಿರೂಪ ವಲ್ಲ. ಇದರಲ್ಲಿ ಅನೇಕ ಬದಲಾವಣೆಗಳಿವೆ. ಇದರ ಎಂಜಿನಿಯರಿಂಗ್‌ ಗಮನಾರ್ಹವಾಗಿ ವಿಭಿನ್ನವಾಗಿದೆ. ಕಳೆದ ಬಾರಿಯಂತೆ ಯಾವುದೇ ಸಮಸ್ಯೆಯಾಗದಂತೆ ನಾವು ಅದನ್ನು ಹೆಚ್ಚು ದೃಢಗೊಳಿಸಿದ್ದೇವೆ,’ ಎಂದು ಎಸ್‌.ಸೋಮನಾಥ್‌ ಹೇಳಿದರು. 2019ರ ಸೆಪ್ಟೆಂಬರ್‌ನಲ್ಲಿ ಭಾರತ ಕೈಗೊಂಡಿದ್ದ ಚಂದ್ರಯಾನ-2 ಕೊನೇ ಹಂತದಲ್ಲಿ ವಿಫ‌ಲವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next