Advertisement

Chandrayaan 3 ಪ್ರಜ್ಞಾನ್‌ ರೋವರ್‌ ದತ್ತಾಂಶ; ಶಿಲಾಪಾಕದಿಂದ ಚಂದ್ರನ ಮೇಲ್ಮೈ ರಚನೆ

01:50 AM Aug 23, 2024 | Team Udayavani |

ಹೊಸದಿಲ್ಲಿ: ಚಂದ್ರನ ಮೇಲ್ಮೆ„ಯ ಶಿಲಾಪಾಕ ಸಾಗರದ ಸೃಷ್ಟಿ ಎಂಬುದಕ್ಕೆ ಪುಷ್ಟಿ ನೀಡುವ ದತ್ತಾಂಶಗಳನ್ನು ಚಂದ್ರಯಾನ-3 ಮಿಷನ್‌ ಒದಗಿಸಿದೆ! ಈ ಕುರಿತು ನೇಚರ್‌ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನವು ಚಂದ್ರನ ಶಿಲಾಪಾಕ ಸಾಗರ ಸಿದ್ಧಾಂತವನ್ನು ಖಚಿತಪಡಿಸಿದೆ. ಅಲ್ಲದೇ ಇದು ವಾಸ್ತವದಲ್ಲಿ ನಿಜವಾಗಿರುವ ಸಾಧ್ಯತೆಯನ್ನು ಎತ್ತಿ ತೋರಿಸಿದೆ.ಚಂದ್ರಯಾನ-3ರ ಪ್ರಜ್ಞಾನ್‌ ರೋವರ್‌ನಿಂದ ದಾಖಲಿಸಲಾದ ಚಂದ್ರನ ಮಣ್ಣಿನ ಮಾಪನಗಳೊಂದಿಗೆ ಈ ವಿಶ್ಲೇಷಣೆ ಮಾಡಲಾಗಿದೆ.

Advertisement

ತಜ್ಞರು ಚಂದ್ರನ ಹೊರ ಪದರ, ಮೇಲ್ಪದರ ಮತ್ತು ಮುಖ್ಯ ಭಾಗ(ಕೋರ್‌) ರಚನೆಯ ಕುರಿತಾ ಒದಗಿಸುವ ಕಲ್ಪನಾ ಮಾಹಿತಿಯಾಗಿದೆ. ಈ ಸಿದ್ಧಾಂತ ಪ್ರಕಾರ, ಎರಡು ಮೂಲಗ್ರಹಗಳ ಢಿಕ್ಕಿಯಿಂದಾಗಿ ಬೃಹತ್‌ ಗ್ರಹ ಭೂಮಿ ಮತ್ತು ಚಿಕ್ಕ ಗ್ರಹ ಚಂದ್ರ ರಚನೆಯಾದವು. ಢಿಕ್ಕಿಯ ಪರಿಣಾಮ ಚಂದ್ರ ಅತೀ ಬಿಸಿಯಾದ ಪರಿಣಾಮದ ಅದರ ಪೂರ್ಣ ಮೇಲ್ಪದರವು ಶಿಲಾಪಾಕ ಸಾಗರದಲ್ಲಿ ಕರಗಿತು. ಹಾಗಾಗಿ ಚಂದ್ರನ ಮೇಲ್ಮೆ„ ಕುದಿಯುವ ಶಿಲಾ ಬಂಡೆಗಳಿಂದ ಆವರಿಸಿದೆ ಎನ್ನುವ ವಾದಕ್ಕೆ ಬಲ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next