Advertisement
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 2.35ಕ್ಕೆ ಬಾಹ್ಯಾಕಾಶ ನೌಕೆ ಉಡಾವಣೆಗೊಳ್ಳಲಿದ್ದು, “ಫ್ಯಾಟ್ ಬಾಯ್’ ಎಂದು ಕರೆಯಲ್ಪಡುವ ಎಲ್‌ವಿಎಂ3- ಎಂ4 ರಾಕೆಟ್ ಉಪಗ್ರಹವನ್ನು ಹೊತ್ತೂಯ್ಯಲಿದೆ. ಇದು ಸತತ 6 ಯಶಸ್ವಿ ಕಾರ್ಯಾಚರಣೆಗಳನ್ನು ಪೂರೈಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಅಲ್ಲದೇ, ಜಿಯೋ ಟ್ರಾನ್ಸ್‌ಫರ್ ಆರ್ಬಿಟ್( ಜಿಟಿಒ)ಗೆ ಬಾಹ್ಯಾಕಾಶ ನೌಕೆಯನ್ನು ಉಡಾವಣೆಗೊಳಿಸಲು ಉದ್ದೇಶಿಸಿರುವ, ಎಲ್‌ವಿಎಂ3- ಎಂ4 ನಡೆಸುತ್ತಿರುವ 4ನೇ ಕಾರ್ಯಾಚರಣೆ ಇದಾಗಿದ್ದು, ಚಂದ್ರಯಾನ -3ರ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರ್ಪಡೆಗೊಳಿಸಲಿದೆ ಎಂದು ಇಸ್ರೋ ವಿಶ್ವಾಸ ವ್ಯಕ್ತಪಡಿಸಿದೆ.
Advertisement
ISRO: ನಾಳೆ ಚಂದ್ರಯಾನ-3 ಉಡಾವಣೆ
11:24 PM Jul 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.