Advertisement
“ಪರಾವಲಂಬಿ ಆರ್ಯಭಟ ಮತ್ತು ಸ್ವಾವಲಂಬಿ ಚಂದ್ರಯಾನ’: ಭಾರತ ತನ್ನ ಮೊದಲ ಉಪಗ್ರಹವನ್ನು ಹಾರಿಸಿದ್ದು 1975ರಲ್ಲಿ. ಆಗ ಆರ್ಯಭಟ ಉಪಗ್ರಹವನ್ನು ರಷ್ಯಾದ ನೆರವಿನಿಂದ ಭಾರತ ಉಡಾವಣೆ ಮಾಡಿತ್ತು. ಅಲ್ಲಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಲವು ದೊಡ್ಡ ಯಶಸ್ಸು, ವೈಫಲ್ಯಗಳನ್ನು ನೋಡಿಕೊಂಡೇ ಬಂ ದಿದೆ. ಇದೀಗ ಭಾರತದ ಬಾಹ್ಯಾಕಾಶದಲ್ಲಿ ಬಂಗಾ ರದ ಬೆಳಕು ಹೊಮ್ಮಿದೆ. ಇಸ್ರೋ ಸಂಪೂರ್ಣ ಸ್ವಾವಲಂಬಿಯಾಗಿ ಬದಲಾಗಿದೆ. ಚಂದ್ರಯಾನ-3 ಅದಕ್ಕೆ ಸಾಕ್ಷಿ. ಅಮೆರಿಕ, ರಷ್ಯಾ, ಚೀನಕ್ಕೆ ಹೋಲಿಸಿದರೆ ಇದುವರೆಗೆ ಈ ಕ್ಷೇತ್ರದಲ್ಲಿ ಸಣ್ಣಪಾಲು ಹೊಂ ದಿರುವ ಭಾರತ, ತಾನೂ ದಿಗ್ಗಜನಾಗುವತ್ತ ಹೆಜ್ಜೆ ಹಾಕಿದೆ.
Related Articles
ಖಾಸಗಿ ಕಂಪೆನಿಗಳಿಗೆ ಉತ್ಸಾಹ: ಪ್ರಸ್ತುತ ಯಶಸ್ಸು ಬಾಹ್ಯಾಕಾಶದಲ್ಲಿ ಹೂಡಿಕೆ ಮಾಡಲು ಹೊರಟಿರುವ ಭಾರತದ ಖಾಸಗಿ ಕಂಪನಿಗಳಿಗೆ ಉತ್ತೇಜನ ನೀಡಲಿದೆ.
Advertisement
ವಿತ್ತಚಂದ್ರನ ವಿಕಾಸದತ್ತಚಂದ್ರನ ಮೇಲಿನ ಯಶಸ್ಸು ಬೃಹತ್ ಆರ್ಥಿಕ ಸಾಧ್ಯತೆಯನ್ನು ತೆರೆದಿರಿಸಿದೆ. ಆ ಬಗ್ಗೆ ಇಸ್ರೋಗೆ ಸ್ಪಷ್ಟತೆಯಿದೆ. ಜಗತ್ತಿನ ಹಲವು ದೇಶಗಳು ಈಗಾಗಲೇ ಖಾಸಗಿ ಕಂಪೆನಿಗಳಿಗೆ ಬಾಹ್ಯಾಕಾಶ ಜಗತ್ತಿಗೆ ಜಿಗಿಯಲು ಅವಕಾಶ ನೀಡಿವೆ. ಭಾರತವೂ ಅದರಲ್ಲೊಂದು. ರಾಕೆಟ್‌ಗಳ ಉತ್ಪಾದನೆ, ಅದಕ್ಕೆ ಬೇಕಾದ ನೂತನ ತಂತ್ರಜ್ಞಾನ ಆವಿಷ್ಕಾರ, ಬಿಡಿಭಾಗಗಳು, ಉಪಗ್ರಹಗಳ ಸಿದ್ಧತೆ ಇವೆಲ್ಲ ದೊಡ್ಡದೊಡ್ಡ ಉದ್ಯಮಗಳಾಗಿ ಬದಲಾಗಲಿವೆ. ಇವನ್ನೆಲ್ಲ ಪಡೆಯಲು ಜಗತ್ತಿನ ಹಲವು ದೇಶಗಳು ಭಾರತದತ್ತ ಮುಖಮಾಡಲಿವೆ. ಕಾರಣ ಅತೀ ಕಡಿಮೆ ವೆಚ್ಚದಲ್ಲಿ ಇಂತಹ ತಂತ್ರಜ್ಞಾನ ಲಭ್ಯವಾಗುವುದು. ಧೂಳೆಬ್ಬಿಸಿದ ವಿಕ್ರಮ; ತಡವರಿಸಿದ ರೋವರ್!
ಚಂದ್ರನ ಅಂಗಳದಲ್ಲಿ “ವಿಕ್ರಮ’ ಧೂಳೆಬ್ಬಿಸಿದೆ. ಇದೇ ಕಾರಣಕ್ಕೆ ಕೆಲವುಹೊತ್ತು ಕಾದು “ಪ್ರಗ್ಯಾನ್’ ರೋವರ್ ಹೊರಬರಲಿದೆ!
ಹೌದು ಸುಮಾರು 1,749.8 ಕೆ.ಜಿ. ತೂಕದ ಲ್ಯಾಂಡರ್ ಬಂದು ಚಂದ್ರನ ಮೇಲೆ ಕಾಲೂರಿದಾಗ ಅದರ ಸುತ್ತಲೂ ಧೂಳು ಆವರಿಸಿದೆ. ಅಲ್ಲಿನ ದುರ್ಬಲ ಗುರುತ್ವಾಕರ್ಷಣೆ ಶಕ್ತಿಯ ಕಾರಣದಿಂದ ಆ ದಟ್ಟವಾಗಿರುವ ಧೂಳು ತತ್‌ಕ್ಷಣಕ್ಕೆ ಕಡಿಮೆ ಆಗುವುದು ಅನುಮಾನ. ಈ ಸಂದರ್ಭದಲ್ಲಿ ರೋವರ್ ಹೊರಬಂದರೆ, ಆ ಧೂಳಿನ ಕಣಗಳು ರೋವರ್‌ನಲ್ಲಿರುವ ಸೆನ್ಸರ್‌ಗಳು, ಕೆಮರಾಗಳ ಮೇಲೆ ಕುಳಿತುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ತುಸು ಹೊತ್ತು ಕಾದು ಅನಂತರ ರೋವರ್ ಹೊರಬರಲಿದೆ. ಧೂಳು ತಾನಾಗಿಯೇ ಚದುರಿಹೋಗುತ್ತದೆ. ಅಲ್ಲಿಯವರೆಗೆ ಕಾಯಬೇಕಾಗುತ್ತದೆ. ಅದರಂತೆ ಸುಮಾರು ಮೂರೂವರೆ ತಾಸುಗಳ ಅನಂತರ ಆರು ಚಕ್ರಗಳ “ಪ್ರಗ್ಯಾನ್’ ರೋವರ್ ಹೊರಬರಲಿದೆ. ಹೀಗೆ “ವಿಕ್ರಮ’ನ ಗರ್ಭದಿಂದ ನಿಧಾನವಾಗಿ ರ್‍ಯಾಂಪ್ ಮೂಲಕ ಇಳಿದು ಚಂದ್ರನನ್ನು ಸ್ಪರ್ಶಿಸುವ “ಪ್ರಗ್ಯಾನ್’ ತನ್ನ ಸೋಲಾರ್ ಪ್ಯಾನೆಲ್ ತೆರೆಯುತ್ತದೆ ಹಾಗೂ ಬಳ್ಳಿ (ವೈರ್) ಕಡಿದುಕೊಂಡು ಚಂದ್ರನ ಮೇಲ್ಮೆ„ನಲ್ಲಿ ಗಟ್ಟಿಯಾಗಿ ನಿಲ್ಲುತ್ತದೆ. ಅನಂತರ ಅಲ್ಲಿನ ವೈಜ್ಞಾನಿಕ ಅಧ್ಯಯನ ಆರಂಭಿಸುತ್ತದೆ. ಯೂಟ್ಯೂಬ್ ನೇರ ಪ್ರಸಾರ ಹೊಸ ದಾಖಲೆ ನಿರ್ಮಾಣ!!
ಇಸ್ರೋದ ಮಹತ್ತರ ಸಾಧನೆಯನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗಿದ್ದು, ಯೂಟ್ಯೂಬ್‌ನ ಈ ಹಿಂದಿನ ನೇರ ಪ್ರಸಾರಗಳ ದಾಖಲೆಯನ್ನೇ ಚಂದ್ರಯಾನ-3 ಪುಡಿಗಟ್ಟಿದೆ ! ಬರೋಬ್ಬರಿ 3.6 ದಶಲಕ್ಷ ಮಂದಿ ಈ ನೇರಪ್ರಸಾರ ವೀಕ್ಷಿಸಿದ್ದಾರೆ. ಸ್ಪ್ಯಾನಿಶ್ ಮೂಲದ ಸ್ಟ್ರೀಮರ್ ಇಬಾಯಿ ಅವರ ನೇರ ಪ್ರಸಾರಗಳನ್ನು ನೋಡಲು ಜನರು ಕಿಕ್ಕಿರಿಯುತ್ತಿದ್ದರು ಈ ವರೆಗೆ ಯೂಟ್ಯೂಬ್‌ನಲ್ಲಿ ಅತೀಹೆಚ್ಚು ಸಂಖ್ಯೆಯಲ್ಲಿ ಜನರು ವೀಕ್ಷಿಸಿದ ನೇರಪ್ರಸಾರವೂ ಅವರದ್ದೇ ಆಗಿತ್ತು. 3.4 ದಶಲಕ್ಷ ಮಂದಿ ಅವರ ನೇರ ಪ್ರಸಾರ ವೀಕ್ಷಿಸಿದ್ದರು. ಆದರೆ ಈ ಬಾರಿ ಚಂದ್ರಯಾನ -3ರ ಬಗ್ಗೆ ಜನಸಾಮಾನ್ಯರಿಂದ ಹಿಡಿದು ದೇಶ-ವಿದೇಶಗಳ ವರೆಗೆ ಎಲ್ಲರಿಗೂ ಭಾರೀ ಕೌತುಕವಿತ್ತು. ತಂದೆಯ ಕನಸು ನನಸಾಯಿತು
ಇಸ್ರೋ ಸಂಸ್ಥಾಪಕ ವಿಕ್ರಮ್ ಸಾರಾಬಾಯಿ ಮಕ್ಕಳಾದ ಕಾರ್ತಿಕೇಯ ಸಾರಾಬಾಯಿ ಹಾಗೂ ಮಲ್ಲಿಕಾ ಸಾರಾಬಾಯಿ ಅವರು ಚಂದ್ರಯಾನ-3ರ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭಾರತದ ಹೆಮ್ಮೆಯಾಗಿರುವ ಇಸ್ರೋ, ತಮ್ಮ ತಂದೆಯ ಕನಸನ್ನೂ ಈಡೇರಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. “ಇದು ನಮಗಷ್ಟೇ ಅಲ್ಲ, ವಿಶ್ವಕ್ಕೇ ಸಂತಸದ ವಿಚಾರ. ವಿಶೇಷವಾಗಿ ನಮಗೆ ಮತ್ತಷ್ಟು ಹೆಮ್ಮೆ ! ಕಾರಣ ನಮ್ಮ ತಂದೆಗೆ ಗೌರವ ಸೂಚಿಸಲು ಇಸ್ರೋ ಲ್ಯಾಂಡರ್‌ಗೆ ವಿಕ್ರಮ್ ಎಂದು ಹೆಸರಿಟ್ಟಿದೆ ಅಭಿನಂದನೆಗಳು ಎಂದು ಕಾರ್ತಿಕೇಯ ಸಾರಾಬಾಯಿ ಹೇಳಿದ್ದಾರೆ. ಚಂದ್ರಯಾನ-3 ಯಶಸ್ವಿಯಾಗುವ ಮೂಲಕ ನಮ್ಮ ತಂದೆಯ ಮಹತ್ವದ ಕನಸೊಂದು ಈಡೇರಿದೆ’ ಎಂದು ಮಲ್ಲಿಕಾ ಸಾರಾಬಾಯಿ ಹೇಳಿದ್ದಾರೆ. ಚಂದ್ರಯಾನ ವೆಚ್ಚ
ಬೆಂಗಳೂರು: ಬೆಳ್ಳಿಪರದೆ ಮೇಲೆ ಬಾಹ್ಯಾಕಾಶ ಆಧಾರಿತ ಚಿತ್ರವನ್ನು ಕಟ್ಟಿಕೊಡಲು ಸುರಿದ ಹಣದಲ್ಲಿನ ಅರ್ಧದಷ್ಟು ವೆಚ್ಚದಲ್ಲಿ ಭಾರತವು ಜಗತ್ತಿಗೆ ಚಂದ್ರನ ಅಂಗಳವನ್ನೇ ತೋರಿಸುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದೆ. ನಿರ್ದೇಶಕ ಕ್ರಿಸ್ಟೋಫರ್ ನೋಲಾನ್ ಅವರ 2014ರಲ್ಲಿ ತೆರೆಕಂಡ ಬ್ಲಾಕ್‌ಬಸ್ಟರ್ ಚಿತ್ರ “ಇಂಟರ್‌ಸ್ಟೆಲ್ಲರ್’ಕ್ಕೆ ಖರ್ಚು ಮಾಡಿದ ಹಣ 1,300 ಕೋಟಿ ಆಗಿದೆ. ಇಡೀ ಚಿತ್ರವು ಬಾಹ್ಯಾಕಾಶವನ್ನು ಆಧರಿಸಿದ್ದು, ಆ ಚಿತ್ರಣವನ್ನೂ ಅತ್ಯಂತ ಆಕರ್ಷಕವಾಗಿ ಕಟ್ಟಿಕೊಡಲಾಗಿದೆ. ಹಾಗಾಗಿ ಅತೀ ಹೆಚ್ಚು ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಇದರಲ್ಲಿನ ಅರ್ಧದಷ್ಟು ಹಣದಲ್ಲಿ ಇಸ್ರೋ ವಿಜ್ಞಾನಿಗಳು ಬುಧವಾರ ಚಂದ್ರನ ಅಂಗಳವನ್ನು ತೋರಿಸುವ ಮೂಲಕ ದಿಗ್ಭ್ರಮೆ ಮೂಡಿಸಿದ್ದಾರೆ. ಇಸ್ರೋ ಕೇವಲ ಸುಮಾರು 615 ಕೋಟಿ ವೆಚ್ಚದಲ್ಲಿ ಚಂದ್ರಯಾನ-3 ಯೋಜನೆಯನ್ನು ಸಾಕಾರಗೊಳಿಸಿದೆ. ಇದರಲ್ಲಿ 250 ಕೋಟಿ ನೋದನ ಅಥವಾ ಲ್ಯಾಂಡಿಂಗ್ ಘಟಕದ ವೆಚ್ಚ ಹಾಗೂ ಉಳಿದ 365 ಕೋಟಿ ಉಡಾವಣಾ ವಾಹನ ಮತ್ತಿತರ ವೆಚ್ಚ ಸೇರಿದೆ. ಈ ಅತೀ ಕಡಿಮೆ ಬಜೆ ಟ್‌ನಲ್ಲಿ ಇಸ್ರೋ ವಿಜ್ಞಾನಿಗಳು ಅಚ್ಚುಕಟ್ಟಾಗಿ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಸು ವುದರೊಂದಿಗೆ ದಾಖಲೆ ನಿರ್ಮಿಸಿದ್ದಾರೆ. ಮಂಗಳಯಾನ (ಮಾರ್ಸ್) ಯೋಜನೆ ಕೂಡ ಅತೀ ಕಡಿಮೆ ವೆಚ್ಚದಲ್ಲಿ ಆಗಿತ್ತು. ಇಂಟರ್‌ಸ್ಟೆಲ್ಲರ್‌ಗಿಂತಲೂ ಕಡಿಮೆ ಬಜೆಟ್ ಯೋಜನೆ
ನ್ಯೂಯಾರ್ಕ್: ಕಡಿಮೆ ವೆಚ್ಚದಲ್ಲಿ ಭಾರತವು “ಚಂದ್ರಯಾನ-3′ ಯೋಜನೆ ಕೈಗೊಂಡಿರುವುದಕ್ಕೆ ಸ್ಪೇಸ್ ಎಕ್ಸ್ ಮಾಲಕ ಎಲಾನ್ ಮಸ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “7.5 ಕೋಟಿ ಡಾಲರ್ ಬಜೆಟ್‌ನಲ್ಲಿ ಇಸ್ರೋ ಚಂದ್ರಯಾನ-3 ಕೈಗೊಂಡಿದೆ. ಹಾಲಿವುಡ್‌ನ ವೈಜ್ಞಾನಿಕ ಕಥೆ ಹೊಂದಿರುವ ಕಾಲ್ಪನಿಕ ಸಿನೆಮಾ “ಇಂಟರ್‌ಸ್ಟೆಲ್ಲರ್’ಗೆ 16.5 ಕೋಟಿ ಡಾಲರ್ ವೆಚ್ಚ ವಾಗಿದೆ. ಹಾಲಿವುಡ್ ಸಿನೆಮಾಗೆ ಹೋಲಿಸಿದರೆ ಭಾರತದ ಚಂದ್ರ ಯಾನ ಯೋಜನೆಯೇ ಕಡಿಮೆ ವೆಚ್ಚದ್ದಾಗಿದೆ. ಇದಕ್ಕಾಗಿ ಭಾರತಕ್ಕೆ ಅಭಿನಂದನೆಗಳು’ ಎಂದಿದ್ದಾರೆ. ಅಂದ ಹಾಗೆ ಚಂದ್ರಯಾನ-3ಕ್ಕೆ ಇಸ್ರೋ ವೆಚ್ಚ ಮಾಡಿದ್ದು 615 ಕೋಟಿ ರೂ. ಅಭಿನಂದನೆಗಳ ಮಹಾಪೂರ!
ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ತರ ಯೋಜನೆ ಚಂದ್ರಯಾನ -3 ಯಶಸ್ವಿಯಾಗುತ್ತಿದ್ದಂತೆ ವಿಶ್ವರಾಷ್ಟ್ರಗಳಿಂದ ಭಾರತಕ್ಕೆ ಅಭಿನಂದನೆಯ ಮಹಾಪೂರವೇ ಹರಿದುಬಂದಿದ್ದು, ವಿಶ್ವದ ಹಲವು ಬಾಹ್ಯಾಕಾಶ ಸಂಶೋಧನ ಸಂಸ್ಥೆಗಳು ಇಸ್ರೋವನ್ನು ಕೊಂಡಾಡಿವೆ. ಅಮೆರಿಕದ ನಾಸಾ, ಬ್ರಿಟನ್ ಸ್ಪೇಸ್ ಏಜೆನ್ಸಿ, ಯುರೋಪಿಯನ್ ಸ್ಪೇಸ್ ಏಜೆನ್ಸಿ ಸೇರಿದಂತೆ ಹಲವಾರು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಹಾಗೂ ವಿಶ್ವ ವಿಖ್ಯಾತ ಗಗನಯಾತ್ರಿಗಳು, ವಿಜ್ಞಾನಿಗಳು ದಕ್ಷಿಣ ಧ್ರುವದಲ್ಲಿಳಿದ ಮೊದಲ ದೇಶವೆಂಬ ಭಾರತದ ಗರಿಗೆ ಗೌರವ ಸಲ್ಲಿಸಿದ್ದಾರೆ. ಇದರ ಜತೆಗೆ ಬ್ರಿಕ್ಸ್ ರಾಷ್ಟ್ರಗಳು ಕೂಡ ಸಂತಸ ವ್ಯಕ್ತ ಪಡಿಸಿ, ಇದು ಕೇವಲ ಭಾರತದ ಯಶಸ್ಸು ಮಾತ್ರವಲ್ಲ, ಇಡೀ ಬ್ರಿಕ್ಸ್ ಕುಟುಂಬದ ಯಶಸ್ಸು ಎಂದು ಬಣ್ಣಿಸಿದ್ದಾರೆ. ಮತ್ತೂಂದೆಡೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ನೇಪಾಲ, ಮಾಲ್ದೀವ್ಸ್ ಸರಕಾರಗಳ ಜತೆಗೆ ಸ್ನೇಹಪರ ರಾಷ್ಟ್ರವಾದ ಇಸ್ರೇಲ್ ಸರಕಾರವೂ ಅಭಿನಂದನೆ ತಿಳಿಸಿದ್ದು, ಹಲವು ರಾಷ್ಟ್ರಗಳು ಭಾರತದ ಸಾಧನೆಯ ಜತೆಗೆ ತಮ್ಮೊಂದಿಗಿನ ಕಾರ್ಯತಂತ್ರ ಪಾಲುದಾರಿಕೆಯನ್ನು ಶ್ಲಾ ಸಿವೆ. ವಿಶೇಷವಂದರೆ ಈ ಹಿಂದೆ ಇಸ್ರೋವನ್ನು ಟೀಕಿಸಿದ್ದ ಪಾಕಿಸ್ಥಾನದ ಮಾಜಿ ಸಚಿವ ಫಹಾದ್ ಚೌಧರಿ ಕೂಡ ಈ ಬಾರಿ ಭಾರತದ ಸಾಧನೆಯನ್ನು ಕೊಂಡಾಡಿದ್ದಾರೆ.