Advertisement

ಚಂದ್ರಯಾನ-3: 2.6 ಲಕ್ಷ ಕಿ.ಮೀ. ಪ್ರಯಾಣ ಪೂರ್ಣ

11:50 PM Aug 04, 2023 | Pranav MS |

ಹೊಸದಿಲ್ಲಿ: ಶಶಾಂಕನತ್ತ ಪ್ರಯಾಣ ಆರಂಭಿಸಿರುವ ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ತನ್ನ ಪ್ರಯಾಣದ ಮೂರನೇ ಎರಡರಷ್ಟು ದೂರವನ್ನು ಯಶಸ್ವಿಯಾಗಿ ಕ್ರಮಿಸಿದೆ.

Advertisement

ಶುಕ್ರವಾರ ನೌಕೆಯು ಭೂಮಿಯಿಂದ ಸರಿಸುಮಾರು 2.6 ಲಕ್ಷ ಕಿಲೋಮೀಟರ್‌ ಸಂಚಾರವನ್ನು ಪೂರ್ಣ ಗೊಳಿಸಿ  ದ್ದು, ಶನಿವಾರ ಚಂದ್ರನ ಕಕ್ಷೆಗೆ ಸೇರ್ಪಡೆಯಾಗುವಂಥ ಮಹತ್ವದ ಘಟ್ಟಕ್ಕೆ ತಲುಪಲಿದೆ ಎಂದು ಇಸ್ರೋ ತಿಳಿಸಿದೆ.

ಜು.14ರಂದು ಚಂದ್ರಯಾನ-3 ನೌಕೆಯು ನಭಕ್ಕೆ ಚಿಮ್ಮಿತ್ತು. ಅದಾದ ಅನಂತರ 3 ವಾರಗಳಲ್ಲಿ ಒಟ್ಟು 5 ಬಾರಿ ಕಕ್ಷೆ ಎತ್ತರಿಸುವ ಪ್ರಕ್ರಿಯೆ ನಡೆದಿದೆ. ಶನಿವಾರ ಕೆಮಿಕಲ್‌ ರಾಕೆಟ್‌ ಎಂಜಿನ್‌ ಮೂಲಕ ಬಾಹ್ಯಾಕಾಶ ನೌಕೆಯ ವೇಗ ವರ್ಧಿಸಲಾಗುತ್ತದೆ. ವೇಗವು ಹೆಚ್ಚಾದಂತೆ ನೌಕೆಯ ಕಕ್ಷೆಯು ಭೂಮಿಯ ಕೆಳ ವೃತ್ತಾಕಾರ ಕಕ್ಷೆಯಿಂದ ಭಿನ್ನಕೇಂದ್ರೀಯ ಕಕ್ಷೆಗೆ ಬದಲಾಗುತ್ತಾ, ಚಂದ್ರನ ಕಕ್ಷೆಯನ್ನು ಪ್ರವೇಶಿಸುತ್ತದೆ. ಅನಂತರದಲ್ಲೂ ಹಲವು ಪ್ರಕ್ರಿಯೆಗಳು ನಡೆಯಲಿದ್ದು, ಆ.23ರಂದು ಶಶಾಂಕನ ಮೇಲ್ಮೆ„ ಮೇಲೆ ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್‌ ಮಾಡಲಾಗುತ್ತದೆ ಎಂದೂ ಇಸ್ರೋ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next