Advertisement

ಮಾರ್ಚ್‌ನಲ್ಲಿ ಚಂದ್ರಯಾನ 2

12:09 PM Oct 31, 2017 | Team Udayavani |

ಬೆಂಗಳೂರು: ಚಂದ್ರನ ಕಡೆಗೆ ಭಾರತ ಎರಡನೇ ಹೆಜ್ಜೆ ಇಡಲು ಸಜ್ಜಾಗಿದೆ. ಚಂದ್ರಯಾನ-2ರ ಸಂಯೋಜನಾ ಪ್ರಕ್ರಿಯೆ ಅಂತಿಮ ಹಂತದ್ದಲ್ಲಿದ್ದು, 2018ರ ಮಾರ್ಚ್‌ಗೆ ಮುನ್ನ ಉಪಗ್ರಹ ಉಡಾವಣೆ ಮಾಡಲಿದ್ದೇವೆ ಎಂದು ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಹೇಳಿದರು.

Advertisement

ನಗರದ ನ್ಯೂ ಬಿಇಎಲ್‌ ರಸ್ತೆಯ ಅಂತರಿಕ್ಷ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಚಂದ್ರಯಾನ- 2ರ ಕಕ್ಷಾಗಾಮಿ, ಸಲಕರಣೆ ಜೋಡಣೆ ಹಾಗೂ ಯೋಜನೆಯ ಪರೀಕ್ಷಾರ್ಥಗಳು ಇಸ್ರೋ ಉಪಗ್ರಹ ಕೇಂದ್ರದಲ್ಲಿ ನಡೆಸಲಾಗುತ್ತಿದೆ. ಮ್ಯಾಡುಲ್‌ ಸಂಯೋಜನೆ ಪೂರ್ಣಗೊಂಡಿದ್ದು, 2018ರ ಮಾರ್ಚ್‌ನೊಳಗೆ ಉಡಾವಣೆ ಮಾಡಲಿದ್ದೇವೆ ಎಂಬ ಮಾಹಿತಿ ನೀಡಿದರು.

ಈ ವರ್ಷದ ಡಿಸೆಂಬರ್‌ ಮೂರು ಅಥವಾ ನಾಲ್ಕನೇ ವಾರದಲ್ಲಿ ಇಸ್ರೋ ತಮ್ಮ ಗ್ರಾಹಕರ 28 ಉಪಗ್ರಹ ಉಡಾವಣೆ ಮಾಡಲಿದೆ. ಅದರ ಜತೆಗೆ ಇಸ್ರೋ ಸ್ವತಃ ಸಿದ್ಧಪಡಿಸಿರುವ ಕಾರೊಸೆಟ್‌-2 ಸೀರಿಸ್‌ನ ಮೂರು ಉಪಗ್ರಹಗಳ ಉಡಾವಣೆಯಾಗಲಿದೆ ಎಂದರು.

2019ರಲ್ಲಿ ಆದಿತ್ಯ ಉಪಗ್ರಹ ಉಡಾವಣೆ: ಸೂರ್ಯನ ಮೇಲಿನ ಅಧ್ಯಯನಕ್ಕೆ ಸಂಬಂಧಿಸಿದ ಆದಿತ್ಯ ಉಪಗ್ರಹದ ಉಡಾವಣೆ 2019ರಲ್ಲಿ ನಡೆಯಲಿದೆ. ಸೂರ್ಯನಲ್ಲಿ ಆಗುತ್ತಿರುವ ವಿದ್ಯಾಮಾನಗಳ ಗ್ರಹಿಕೆಗೆ ಬೇಕಾದ ಉಪಕರಣವೊಂದನ್ನು ಈ ಉಪಗ್ರಹದಲ್ಲಿ ಅಳವಡಿಸಲಿದ್ದೇವೆ. ಕರೋನಲ್‌ ಮಾಸ್‌ ಇಂಜೆಕ್ಷನ್ಸ್‌ ಸೇರಿದಂತೆ ಸೂರ್ಯ ಗ್ರಹದ ಹಲವು ಅಧ್ಯಯನಕ್ಕೆ ಇದು ಪೂರಕವಾಗಲಿದೆ ಎಂದು ವಿವರಿಸಿದರು.

ಇಸ್ರೋ ಸಿದ್ಧಪಡಿಸುತ್ತಿರುವ ಆಸ್ಟ್ರೋಸೆಟ್‌-2 ಕೂಡ ಅಧ್ಯಯನ ಹಂತದಲ್ಲಿದೆ. ಈ ಯೋಜನೆಗೆ ಬಳಸಬೇಕಾದ ಉಪಕರಣದ ಬಗ್ಗೆ ಚರ್ಚೆ ನಡೆಸಲು ಇತ್ತೀಚೆಗೆ ಸಭೆ ಆಯೋಜಿಸಿದ್ದೇವೆ. ಆಸ್ಟ್ರೋಸೆಟ್‌-2 ಸಂಬಂಧಿಸಿದಂತೆ ನಮ್ಮ ತಂಡವೊಂದು ಕೆಲಸ ಮಾಡುತ್ತಿದೆ. ಯೋಜನೆಗಳ ಬೇಕಾದ ಅಧ್ಯಯವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

Advertisement

ಸ್ಟಾರ್ಟ್‌ಅಪ್‌ಗ್ಳಿಗೂ ಆದ್ಯತೆ‌: ಇಸ್ರೋ, ಉಪಗ್ರಹ ಉಡಾವಣೆಯ ಮೂಲಕ ತನ್ನ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ವರ್ಷದಲ್ಲಿ 8ರಿಂದ 10 ಉಡಾವಣೆ ನಡೆಸುತ್ತಿದ್ದೆವು. ಈಗ ಅದು 18ಕ್ಕೆ ತಲುಪಿದೆ. ಉಡಾವಣಾ ಕ್ಷೇತ್ರದ ಸ್ಟಾರ್ಟ್‌ಅಪ್‌ಗ್ಳಿಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಅವುಗಳು ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಲು ಬೇಕಾದ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಹೇಳಿದರು.

29 ದೇಶದ 200 ಉಪಗ್ರಹ: ತನ್ನ ಉಪಗ್ರಹ ಮಾತ್ರವಲ್ಲದೇ ಇಸ್ರೋ ಕಮರ್ಷಿಯಲ್‌ ವಿಭಾಗವಾಗಿರುವ ಅಂತರಿಕ್ಷದ ಮೂಲಕ ತನ್ನ ಗ್ರಾಹಕರ(ಕಸ್ಟಮರ್‌) ಉಪಗ್ರಹ ಉಡಾವಣೆ ಮಾಡುತ್ತದೆ. ಸದ್ಯ ಅಂತರಿಕ್ಷ 850 ಕೋಟಿ ರೂ. ಯೋಜನೆಯ ಒಪ್ಪಂದ ಮಾಡಿಕೊಂಡು ಅದಕ್ಕಾಗಿ ಸೇವೆ ಸಲ್ಲಿಸುತ್ತಿದೆ. 29 ದೇಶದವರು 200 ಉಪಗ್ರಹಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಅಂತರಿಕ್ಷ ಮುಖ್ಯಸ್ಥ ಎಸ್‌.ರಾಕೇಶ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next