Advertisement

ಚಂದ್ರಮುಖೀ ಗಗನಸಖಿ

05:58 PM Apr 17, 2018 | |

ಆಕಾಶದಲ್ಲೇ ಅಲೆವ ಅಪ್ಸರೆಯರು ಎಂದು ಗಗನಸಖೀಯರನ್ನು ಬಣ್ಣಿಸುವುದುಂಟು. ವಿಮಾನ ಪ್ರಯಾಣಿಕರನ್ನು ಸಖೀಯಾಗಿ, ರಕ್ಷಕಿಯಾಗಿ ಕಾಪಾಡುವ ಮಹತ್ವದ ಹೊಣೆಗಾರಿಕೆ ಗಗನಸಖೀಯರಿಗೆ ಇರುತ್ತದೆ. ಬೆಳಗ್ಗೆ ಬೆಂಗಳೂರು, ಸಂಜೆ ಹಾಂಕಾಂಗ್‌, ರಾತ್ರಿ ಇಂಗ್ಲೆಂಡ್‌… ಹೀಗೆ ಬಯಸಿದ ದೇಶಕ್ಕೆ ಹಾರಿ ಹೋಗುವ ಅದೃಷ್ಟ ಗಗನಸಖೀ ಅಥವಾ ಏರ್‌ ಹಾಸ್ಟೆಸ್‌ಗಳು ಇರುತ್ತದೆ…

Advertisement

ವಿಮಾನದಲ್ಲಿ ಪ್ರಯಾಣಿಸುವವರನ್ನು ಅತ್ಮೀಯವಾಗಿ ಸ್ವಾಗತಿಸುವ, ಮುಗುಳ್ನಗೆ ಮತ್ತು ವಂದನೆಯೊಂದಿಗೆ ಬೀಳ್ಕೊಡುವ ಕೆಲಸ ಗಗನಸಖೀಯರದ್ದು. ವಿಮಾನ ಪ್ರಯಾಣಿಕರಿಗೆ ಸೀಟ್‌ ಬೆಲ್ಟ್ ಹಾಕಲು ಹೇಳುವುದು/ಹಾಕುವುದು, ಕಾಫಿ, ತಿಂಡಿ, ಊಟ ಒದಗಿಸುವುದು, ಪ್ರಯಾಣದ ಸಂದರ್ಭದಲ್ಲಿ ತಲೆಸುತ್ತು, ಸುಸ್ತು ಮುಂತಾದ ತೊಂದರೆಗಳು ಕಾಣಿಸಿಕೊಂಡರೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡುವುದು,

ಅಕಸ್ಮಾತ್‌ ಪ್ರಯಾಣಿಕರಿಗೆ ಏನಾದರೂ ತೊಂದರೆಯಾದರೆ ಅದನ್ನು ತಕ್ಷಣವೇ ಪೈಲಟ್‌ಗಳ ಗಮನಕ್ಕೆ ತರುವುದು-ಇವೆಲ್ಲಾ ಗಗನಸಖೀಯರ ಕೆಲಸ. ಒಂದರ್ಥದಲ್ಲಿ ಇವರು ಪ್ರಯಾಣಿಕರ ಪಾಲಿಗೆ ಸಹಾಯಕಿಯೂ ಹೌದು. ರಕ್ಷಕಿಯೂ ಹೌದು. ಪ್ರಯಾಣದ ಸಂದರ್ಭದಲ್ಲಿ ಉಂಟಾದ ಕೊರತೆಗಳ ಕುರಿತು ಪ್ರಯಾಣಿಕರು ದೂರು ನೀಡಿದರೆ ಅದನ್ನು ತಮ್ಮ ಏರ್‌ಲೈನ್ಸ್‌ ಕಂಪನಿಗಳಿಗೆ ತಲುಪಿಸುವ “ಕ್ಲರ್ಕ್‌’ ಕೆಲಸವನ್ನೂ ಇವರು ಮಾಡುತ್ತಾರೆ. 

ವರ್ಷವಿಡೀ ಗಗನದಲ್ಲಿಯೇ ಹಾರಾಡುವ, ಬಯಸಿದ ದೇಶಗಳನ್ನೆಲ್ಲ ಸುಲಭವಾಗಿ ನೋಡಬಹುದಾದ ಅದೃಷ್ಟ ಗಗನಸಖೀಯರಿಗಿದೆ. ಯಾವುದೇ ಸಂದರ್ಭದಲ್ಲಿಯೂ ತಾಳ್ಮೆ ಕಳೆದುಕೊಳ್ಳಬಾರದು. ಸಂದರ್ಭಕ್ಕೆ ತಕ್ಕಂತೆ ಕೆಲಸ ಮಾಡಲು ಸದಾ ಸಿದ್ಧರಿರಬೇಕು ಎಂಬುದು ಗಗನಸಖೀಯರಿಗೆ ಇರಬೇಕಾದ ಪ್ರಮುಖ ಅರ್ಹತೆ. ಗಗನ ಸಖರಿಗೂ ಅವಕಾಶವಿದೆ. ಆದರೆ, ಸಖೀಯರಿಗೇ ಅವಕಾಶಗಳು ಹೆಚ್ಚು. ಏರ್‌ಹಾಸ್ಟೆಸ್‌ಗಳಾಗಬೇಕು ಅನ್ನುವವರಿಗಾಗಿ… 

ವಿಮಾನ ಏರುವ ದಾರಿ…: ಪಿಯುಸಿ ಓದಿನ ಬಳಿಕ ಪದವಿಗೆ ಹೋಮ್‌ ಸೈನ್ಸ್‌, ಹೋಟೆಲ್‌ ಮ್ಯಾನೇಜ್‌ಮೆಂಟ್‌ ಅಥವಾ ಯಾವುದೇ ಪದವಿ ಪಡೆದು ನಂತರ ಏರ್‌ಲೈನ್‌ಗಳ ಸೆಲೆಕ್ಷನ್‌ಗಳಲ್ಲಿ ಭಾಗವಹಿಸಿ ಏರ್‌ ಹಾಸ್ಟೆಸ್‌ ಟ್ರೈನಿಂಗ್‌ ಪಡೆದು ಏರ್‌ ಹಾಸ್ಟೆಸ್‌ ಆಗಬಹುದು. ಇದರ ಜೊತೆಗೆ ಆಂಗ್ಲ, ಹಿಂದಿ, ವಿದೇಶಿ ಭಾಷೆಗಳನ್ನು ಕಲಿತರೆ ಕೆಲಸ ಪಡೆಯುವುದು ಸುಲಭ.
 
ಏನೇನು ಗೊತ್ತಿರಬೇಕು?
– ಗಗನಸಖೀ/ಸಖನಾಗಬೇಕೆಂದರೆ ಸಪೂರ ಅಂಗಸೌಷ್ಟವ ಮತ್ತು ಎತ್ತರ ಬಹಳ ಮುಖ್ಯ. 
– ದೈಹಿಕ ಸೌಂದರ್ಯ ಕಾಪಾಡಿಕೊಳ್ಳಲು ಯೋಗ, ವ್ಯಾಯಾಮ, ಸೌಂದರ್ಯವರ್ಧಕಗಳ ಸರಿಯಾದ ಬಳಕೆ ಅಗತ್ಯ.
– ವಸ್ತ ಸಂಹಿತೆ ಬಗ್ಗೆ ಅರಿವು
– ಇಂಗ್ಲಿಷ್‌ ಸೇರಿದಂತೆ ಐದಾರು ಭಾಷೆ ಕಲಿಕೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವ ಸಂವಹನ ಕೌಶಲ
– ಪ್ರಯಾಣಿಕರ ಆರೋಗ್ಯ ಸಮಸ್ಯೆಗೆ ಪ್ರಥಮ  ಚಿಕಿತ್ಸೆ ನೀಡುವ ಕೌಶಲ
– ಉಪಾಹಾರ, ಪಾನೀಯ, ನಿಯತಕಾಲಿಕೆಗಳು ಇತ್ಯಾದಿಗಳ ಬಗ್ಗೆ ವಿಶೇಷ ಜ್ಞಾನ
– ಪ್ರಯಾಣಿಕರಿಗೆ ಬೇಕಾದ ಸವಲತ್ತು ಒದಗಿಸುವ, ಅವರಿಗೆ ಅಗತ್ಯ ಮಾಹಿತಿ ನೀಡುವ, ಅವರ ಸಲಹೆಗಳನ್ನು ಸ್ವೀಕರಿಸುವ ಗುಣ
– ಗಣಕ ಮತ್ತು ವೈಮಾನಿಕ ತಾಂತ್ರಿಕ ಉಪಕರಣಗಳ ಅರಿವು
– ಸಹನೆ, ತಾಳ್ಮೆ, ಕ್ಷಮಾಗುಣ, ಲೋಕಜ್ಞಾನ ಅತ್ಯಗತ್ಯ

Advertisement

ಎಷ್ಟು ಪಗಾರ ಸಿಗುತ್ತೆ?: ಇತ್ತೀಚಿನ ದಿನಗಳಲ್ಲಿ ಏರ್‌ ಹಾಸ್ಟೆಸ್‌ ಹುದ್ದೆಗೆ ಮಹಿಳೆಯರನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಅವರಿಗೆ ಆಕರ್ಷಕ ಸಂಬಳವನ್ನೂ ನೀಡಲಾಗುತ್ತಿದೆ. ಪ್ರಾರಂಭ ಹಂತದ ಏರ್‌ಹಾಸ್ಟೆಸ್‌ಗಳಿಗೆ ವಾರ್ಷಿಕವಾಗಿ 3ಲಕ್ಷ ರೂಪಾಯಿ, ಅನುಭವಿಗಳಿಗೆ 12 ಲಕ್ಷ ರೂ.ವೇತನ ನೀಡಲಾಗುತ್ತದೆ. ಜೊತೆಗೆ ಸೌಲಭ್ಯಗಳು, ವಾರ್ಷಿಕವಾಗಿ ಕೆಲವು ತರಬೇತಿಯನ್ನೂ ನೀಡಲಾಗುತ್ತದೆ. 

ಎಲ್ಲೆಲ್ಲಿ ಕೆಲಸ ಸಿಗುತ್ತೆ? 
– ಏರ್‌ಲೈನ್‌ಗಳು
– ಇಂಟರ್‌ನ್ಯಾಷನಲ್‌ ಕ್ಯಾರಿಯರ್
– ಏರ್‌ಲೈನ್‌ ಟ್ರೈನಿಂಗ್‌ ಅಕಾಡೆಮಿ
– ಇಂಡಿಯನ್‌, ಜೆಟ್‌ ಏರ್‌ಲೈನ್ಸ್‌ಗಳು 

ಓದುವುದು ಎಲ್ಲಿ? 
-ಏರ್‌ ಹಾಸ್ಟೆಸ್‌ ಅಕಾಡೆಮಿ, ಬೆಂಗಳೂರು
-ಪಿಟಿಸಿ ಏರಿಯೇಷನ್‌ ಅಕಾಡೆಮಿ, ಬೆಂಗಳೂರು
-ಫ್ರ್ಯಾಂಕ್‌ಫಿನ್‌ ಇನ್ಸ್‌ಟಿಟ್ಯೂಟ್‌ ಆಫ್ ಏರ್‌ ಟ್ರೆçನಿಂಗ್‌, ಬೆಂಗಳೂರು
-ಏರ್‌ ಹಾಸ್ಟೆಸ್‌ ಅಕಾಡೆಮಿ, ಚಂಡಿಗಡ
-ಏರ್‌ ಹಾಸ್ಟೆಸ್‌ ಅಕಾಡೆಮಿ, ಮುಂಬೈ
-ಏರ್‌ ಹಾಸ್ಟೆಸ್‌ ಅಕಾಡೆಮಿ, ಪುಣೆ

* ಎನ್. ಅನಂತನಾಗ್

Advertisement

Udayavani is now on Telegram. Click here to join our channel and stay updated with the latest news.

Next