Advertisement
ನಾಯ್ಡು ಅವರ ಪುತ್ರ, ಸಚಿವ ನಾರಾ ಲೋಕೇಶ್ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ಕುಟುಂಬದ ಆಸ್ತಿ ಘೋಷಿಸಿಕೊಂಡಿದ್ದು, 21.40 ಕೋಟಿ ರೂಪಾಯಿ ಆಸ್ತಿ ಅವರ ಹೆಸರಿನಲ್ಲಿದೆ. ಕಳೆದ ವರ್ಷ ಆಸ್ತಿ ಮೌಲ್ಯ 15.21 ಕೋಟಿ ರೂಪಾಯಿ ಆಗಿತ್ತು.
Related Articles
Advertisement
ಅಚ್ಚರಿ ಎಂದರೆ ಲೋಕೇಶ್ ಅವರ ಪತ್ನಿ ಬ್ರಾಹ್ಮಣಿ ಅವರ ಆಸ್ತಿ 15.01 ಕೋಟಿಯಿಂದ 7.72 ಕೋಟಿಗೆ ಕುಸಿದಿದೆ. ಅವರ ಸ್ಥಿರಾಸ್ತಿಯ ಮೌಲ್ಯ 36.14 ಲಕ್ಷದಿಂದ 5.66 ಕೋಟಿಗೆ ಏರಿಕೆಯಾಗಿದೆ.
ಪುತ್ರ ದೇವಾಂಶ್ನ ಆಸ್ತಿ 18.71 ಕೋಟಿ ರೂಪಾಯಿ ಆಗಿದ್ದು, ಕಳೆದ ವರ್ಷ 11.54 ಕೋಟಿ ರೂಪಾಯಿ ಆಗಿತ್ತು.
ಸತತ 8ನೇ ವರ್ಷ ಲೋಕೇಶ್ ಅವರು ಸುದ್ದಿಗೋಷ್ಠಿ ನಡೆಸಿ ಕುಟುಂಬದ ಆಸ್ತಿ ಮೌಲ್ಯ ಘೋಷಿಸಿಕೊಳ್ಳುತ್ತಿದ್ದಾರೆ.