Advertisement

ಛಂದೋ ಸಾಹಿತ್ಯ ಪುನರುಜ್ಜೀವನ ಅಗತ್ಯ: ವಿ.ಬಿ. 

02:25 PM Dec 28, 2017 | |

ಕಾಸರಗೋಡು: ಹಳೆಗನ್ನಡ ಛಂದಸ್ಸುಗಳಾದ ಕಂದ, ವೃತ್ತಗಳಲ್ಲಿ ಇತ್ತೀಚೆಗೆ ಯಾರೂ ಸಾಹಿತ್ಯ ರಚನೆ ಮಾಡುತ್ತಿಲ್ಲ. ಹಳೆ ಸಾಹಿತ್ಯ ಸಂಪತ್ತನ್ನು ಮೂಲೆಗುಂಪಾಗಲು ಬಿಡದೆ ಅದರಲ್ಲಿ ವ್ಯವಸಾಯಮಾಡಿ, ರಕ್ಷಿಸಿ ಪೋಷಿಸಿ ಕೊಂಡುಬರುವ ಅಗತ್ಯ ವಿದೆ. ಈ ನಿಟ್ಟಿನಲ್ಲಿ ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕವು ಹಮ್ಮಿಕೊಂಡ ಹಳೆಗನ್ನಡ ಸಾಹಿತ್ಯ ರಚನಾ ತರಬೇತಿ ಶಿಬಿರವು ಫಲಪ್ರದವಾಗಲಿ ಎಂದು ವೇದಿಕೆಯ ಅಧ್ಯಕ್ಷರಾದ ವಿ.ಬಿ. ಕುಳಮರ್ವ ಹೇಳಿದರು.

Advertisement

ಕಾಸರಗೋಡು ಟ್ಯುಟೋರಿಯಲ್‌ ಕಾಲೇಜಿನ ಎಂ. ಗಂಗಾಧರ ಭಟ್‌ ವೇದಿಕೆ ಯಲ್ಲಿ  ಸಿರಿಗನ್ನಡ ವೇದಿಕೆಯ ವತಿಯಿಂದ  ವ್ಯವಸ್ಥೆಗೊಳಿಸಿದ ಈ ವರ್ಷದ ಎಂಬತ್ತೆಂಟನೇ ಕಾರ್ಯವಾಗಿ ಒಂದು ದಿನದ  ಉಚಿತ    ಹಳೆಗನ್ನಡ  ಸಾಹಿತ್ಯ ರಚನಾ   ಕಮ್ಮಟವನ್ನು   ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು    ಗಮಕ   ಕಲಾಪರಿಷತ್ತಿನ ಅಧ್ಯಕ್ಷ ತೆಕ್ಕೆಕರೆ ಶಂಕರನಾರಾಯಣ ಭಟ್ಟರು ಉದ್ಘಾಟಿಸಿ ಸೇರಿದ ಶಿಬಿರಾರ್ಥಿಗಳಲ್ಲಿ ಇದರ ಸಂಪೂರ್ಣ ಪ್ರಯೋಜನ ಪಡೆದು ಕೊಳ್ಳಬೇಕೆಂದು ಸೂಚನೆಯಿತ್ತರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿ ಸಿದ ಸಾಹಿತಿ, ಕವಿ ಕುಳಮರ್ವ ಅವರು ಕಂದಪದ್ಯ ಭಾಮಿನಿ ಷಟ³ದಿ ಮೊದಲಾದ ಛಂದೋ ವಿಭಾಗಗಳಲ್ಲಿ ಸುಲಲಿತವಾಗಿ ಕವನ ರಚನೆಯ ವಿಧಾನ ವನ್ನು ಸೋದಾಹರಣೆಯೊಂದಿಗೆ ಆಶುಕವನವನ್ನು ರಚನೆಮಾಡಿ ತರಬೇತಿಯನ್ನಿತ್ತರು.

ಕಾಸರಗೋಡು ಸರಕಾರಿ ಕಾಲೇಜಿನ ದ್ವಿತೀಯ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ಪದವಿ ವಿದ್ಯಾರ್ಥಿಗಳಲ್ಲದೆ ಕೆಲವು ಜನ ಹಿರಿಯರೂ ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು. ಗಮಕ ಕಲಾವಿದೆ ಶ್ರದ್ಧಾ ಭಟ್‌ ಪ್ರಾರ್ಥನೆಗೈದರು. ಸಿರಿಗನ್ನಡ ವೇದಿಕೆ ಕಾಸರಗೋಡು ಘಟಕದ ಮಹಿಳಾಧ್ಯಕ್ಷೆ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಸ್ವಾಗತಿಸಿದರು. ಶಿಬಿರದ ಪ್ರಾಯೋಜಕಿ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾ ಲಕ್ಷ್ಮೀ ಕುಳಮರ್ವ ಮುಂದಿನ ದಿನಗಳಲ್ಲಿ ಇಂತಹ ಶಿಬಿರ ಗಳನ್ನು ಸರಣಿ ಕಾರ್ಯಕ್ರಮವಾಗಿ ಹಮ್ಮಿಕೊಳ್ಳುವ ಯೋಜನೆಯನ್ನು ತಿಳಿಸಿದರು.

ಚುಟುಕು ಸಾಹಿತಿ ಕಕ್ಕೆಪ್ಪಾಡಿ ಶಂಕರ ನಾರಾಯಣಭಟ್‌, ಏತಡ್ಕ ನರಸಿಂಹ ಭಟ್‌, ಕಲ್ಲಕಟ್ಟ ಶಾಲಾ ಮುಖ್ಯಶಿಕ್ಷಕ ಶ್ಯಾಮಪ್ರಸಾದ ಕುಳಮರ್ವ, ನಿವೃತ್ತ ಸಂಸ್ಕೃತ ಶಿಕ್ಷಕ ಡಾ| ಸದಾಶಿವ ಭಟ್‌ ಮೊದಲಾದವರು ಶುಭಾಶಂಸನೆಗೈದರು. ಶಿಬಿರಾರ್ಥಿಗಳು ಕಂದಪದ್ಯ ಹಾಗೂ ಷಟ³ದಿಗಳಲ್ಲಿ ತಮ್ಮ ಸ್ವರಚನೆ ಮಂಡಿಸಿ ದರು. ಸ್ನೇಹರಂಗದ ಅಧ್ಯಕ್ಷ ಬಾಲಕೃಷ್ಣ ಬಿ. ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next