Advertisement

Chandrayaan 3: ಚಂದಿರನಿಗೆ ಮೂರೇ ಗೇಣು…

12:11 AM Aug 23, 2023 | Team Udayavani |

ಸದಾ ಭಾರತೀಯರ ಬೆರಗುಗಣ್ಣಿನಲ್ಲಿದ್ದ ಚಂದಮಾಮ ಇನ್ನು ನಮಗೆ ಎಟುಕಲು ಮೂರೇ ಗೇಣು! ಬುಧವಾರ ಸಂಜೆ ರವಿ ಆಗಸದ ಅಂಚಿಗೆ ಜಾರುತ್ತಿರುವಂತೆಯೇ ದೇಶದ ಕನಸಿನ ಶಶಿ ಮೂಡುವನು. ಶಶಾಂಕನ ನೆಲದಲ್ಲಿ ವಿಕ್ರಮ ಹೆಜ್ಜೆ ಊರುವ ಕ್ಷಣವನ್ನು ಇಡೀ ಜಗತ್ತೇ ಕಾತರದ ಕಂಗಳಿಂದ ಕಾಯುತ್ತಿದೆ…

Advertisement

ಆ 1,139 ಸೆಕೆಂಡುಗಳು!

ಬುಧವಾರ ಸಂಜೆ 5.30 ಸಮೀಪಿಸುತ್ತಿ ರುವಂತೆಯೇ ಭಾರತದ ಕನಸಿನ ಚಂದ್ರ ಯಾನ-3 ತನ್ನ ಕೊನೆಯ ಹಂತವನ್ನು ಪ್ರವೇಶಿಸುತ್ತದೆ. ಚಂದ್ರನಿಂದ ಸುಮಾರು 750 ಕಿ.ಮೀ. ದೂರದಲ್ಲಿ ಇರುವ ಲ್ಯಾಂಡರ್‌ ಮಾಡ್ನೂಲ್‌ ಮೆಲ್ಲಮೆಲ್ಲನೆ ಕೆಳಗಿಳಿಯಲು ಆರಂಭಿಸುತ್ತದೆ. ಆ ಕೊನೆಯ 1,139 ಸೆಕೆಂಡ್‌ಗಳು ಅತ್ಯಂತ ನಿರ್ಣಾಯಕ. ಈ ಅವಧಿಯಲ್ಲಿ ಲ್ಯಾಂಡರ್‌ ಮಾಡ್ನೂಲನ್ನು ಚಂದ್ರನ ನೆಲದಿಂದ 25 ಕಿ.ಮೀ. ಎತ್ತರಕ್ಕೆ ಇಳಿಸಬೇಕಾಗುತ್ತದೆ. ಮೊದಲಿಗೆ ಲ್ಯಾಂಡರ್‌ ಮಾಡ್ನೂಲ್‌ನ ವೇಗವನ್ನು ಪ್ರತೀ ಸೆಕೆಂಡಿಗೆ 1,600 ಮೀಟರ್‌ಗಳಿಗೆ ಇಳಿಸಿ, ಇನ್ನೇನು ಚಂದಿರನನ್ನು ಮುಟ್ಟಬೇಕು ಎನ್ನುವ ಹೊತ್ತಿಗೆ ವೇಗವನ್ನು ಸೆಕೆಂಡಿಗೆ 60 ಮೀಟರ್‌ಗಳಿಗೆ ತಗ್ಗಿಸಲಾಗುತ್ತದೆ.

ಅಷ್ಟರಲ್ಲಿ ಅದರಲ್ಲಿ ಇರುವ ಲ್ಯಾಂಡರ್‌ ಪೊಸಿಶನ್‌ ಡಿಟೆಕ್ಷನ್‌ ಕೆಮರಾ ಚಕಚಕನೆ ಚಂದಿರನ ಮೇಲ್ಮೆ„ಯನ್ನು ಅವಲೋಕಿಸಿ, ಕ್ಲಿಕ್ಕಿಸಿ ಇಳಿಯಲು ಯಾವ ಸ್ಥಳ ಸೂಕ್ತ ಎಂದು ಪರಿಶೀಲಿಸುತ್ತದೆ. ಅದು ಸೆಕೆಂಡ್‌ಗಳ ಆಟ. ಆಗ ಉಳಿದಿರುವುದು 73 ಸೆಕೆಂಡ್‌ ಮಾತ್ರ. ಅದರೊಳಗೆ ಇಳಿಯುವ ಸ್ಥಳವನ್ನು ಅಂತಿಮಗೊಳಿಸಬೇಕು. ಎಲ್ಲವೂ ಸರಿ ಇದೆ ಎಂಬ ಸಂದೇಶ ರವಾನೆಯಾದ ಕೂಡಲೇ ವಿಕ್ರಮ್‌ ಲ್ಯಾಂಡರ್‌ ಹೆಜ್ಜೆ ಊರುತ್ತದೆ. ಅನಂತರ ರೋವರ್‌ ಪ್ರಗ್ಯಾನ್‌ ಹೊರಬಿದ್ದು, ಚಂದ್ರನ ಮೇಲೆ ಸಂಚರಿಸಿ ವಿವಿಧ ಅಧ್ಯಯನಗಳನ್ನು ಆರಂಭಿಸಲಿದೆ.

ಎಲ್ಲೆಲ್ಲಿ ನೇರ ಪ್ರಸಾರ?

Advertisement

//www.isro.gov.in ಹೋಂ ಪೇಜ್‌, ಇಸ್ರೋದ ಯೂಟ್ಯೂಬ್‌ ಚಾನೆಲ್‌, ಫೇಸ್‌ಬುಕ್‌ ಪೇಜ್‌ನಲ್ಲಿ ಸಂಜೆ 5.20ರಿಂದ ಸಾಫ್ಟ್ಲ್ಯಾಂಡಿಂಗ್‌ ನೇರ ಪ್ರಸಾರ ವೀಕ್ಷಿಸಬಹುದು. ದೂರದರ್ಶನದಲ್ಲೂ ನೇರ ಪ್ರಸಾರ ಇರಲಿದೆ.

ಪ್ರಧಾನಿ ಮೋದಿಯೂ ಭಾಗಿ

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಬುಧವಾರ ಸಂಜೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಇಸ್ರೋದೊಂದಿಗೆ ಸಂಪರ್ಕ ಸಾಧಿಸಿ, ಚಂದ್ರಯಾನದ ಸಾಫ್ಟ್ ಲ್ಯಾಂಡಿಂಗ್‌ಗೆ ಸಾಕ್ಷಿಯಾಗಲಿದ್ದಾರೆ.

ಲ್ಯಾಂಡರ್‌-ರೋವರ್‌ ಏನು ಮಾಡುತ್ತದೆ?

l           ಲ್ಯಾಂಡರ್‌ ಮತ್ತು ರೋವರ್‌ಗಳನ್ನು ಚಂದ್ರನಲ್ಲಿಗೆ ಹೊತ್ತೂಯ್ಯುವುದು ಮಾತ್ರ ಪ್ರೊಪಲ್ಶನ್‌ ಮಾಡ್ನೂಲ್‌ನ ಕೆಲಸ. ಇದು ಚಂದ್ರನ ನೆಲದಲ್ಲಿ ಇಳಿಯುವುದಿಲ್ಲ.

l           ಪ್ರೊಪಲ್ಶನ್‌ ಮಾಡ್ನೂಲ್‌ನಿಂದ ಆ. 18ರಂದು ಬೇರ್ಪಟ್ಟಿರುವ ಲ್ಯಾಂಡರ್‌ ಮತ್ತು ರೋವರ್‌ ಹೊಂದಿರುವ ಲ್ಯಾಂಡರ್‌ ಮಾಡ್ನೂಲ್‌ ಸ್ವಸಾಮರ್ಥ್ಯದಿಂದ ಚಂದ್ರನ ಮೇಲೆ ಇಳಿಯುತ್ತದೆ.

l           ವಿಕ್ರಮ್‌ ಲ್ಯಾಂಡರ್‌ ತಾನು ಇಳಿದಲ್ಲಿಯೇ ಇರುತ್ತದೆ. ವಿಕ್ರಮನೊಳಗಿಂದ ಹೊರಗೆ ಬರುವ ಪ್ರಗ್ಯಾನ್‌ ರೋವರ್‌ ಚಂದ್ರನ ನೆಲದಲ್ಲಿ ಸಂಚರಿಸುತ್ತ ಅಧ್ಯಯನ ಆರಂಭಿಸುತ್ತದೆ.

ಸದ್ಯದವರೆಗೆ ಎಲ್ಲವೂ ಸುಗಮ

ಚಂದ್ರಯಾನ-3 ಮಂಗಳವಾರ ಶಶಾಂಕನ ಮೇಲ್ಮೆ„ಯಿಂದ 70 ಕಿ.ಮೀ. ದೂರದಲ್ಲಿತ್ತು. ಬುಧವಾರವೇನಾದರೂ ಪ್ರತಿಕೂಲ ಪರಿಸ್ಥಿತಿ ಉಂಟಾದರೆ ಲ್ಯಾಂಡಿಂಗ್‌ ಅನ್ನು ಆ. 27ಕ್ಕೆ ಮುಂದೂಡಲಾಗುವುದು ಎಂದು ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next