Advertisement

ಚಾಂದಿನಿ ಬಾರ್ ಚಿತ್ರ ವಿಮರ್ಶೆ: ಬಾರ್‌ ನೊಳಗೆ ಬದುಕು ಕಂಡವರು!

10:45 AM Apr 22, 2023 | Team Udayavani |

ಬಾರ್‌ ಎಂದ ಕೂಡಲೇ ಅದೆಷ್ಟೋ ಮಂದಿ ಮೂಗು ಮುರಿಯುವುದುಂಟು. ಕುಡುಕರ ಪಾಲಿಗೆ ಅಡ್ಡೆ ಎಂದೇ ಕರೆಸಿಕೊಳ್ಳುವ ಈ ಬಾರ್‌, ಕುಡುಕರಲ್ಲದ ಅನೇಕರ ಜೀವನಕ್ಕೆ ತಿರುವು ಕೊಡುವ ಜಾಗವಾಗಿಯೂ ಮಾರ್ಪಾಡಾಗಬಹುದು. ಬಾರ್‌ ಎಂದರೆ ಕೇವಲ ಬದುಕನ್ನು ಬರ್ಬಾದ್‌ ಮಾಡುವ ಜಾಗವಲ್ಲ, ಅಲ್ಲೂ ಬದುಕು ಬಂಗಾರ ಮಾಡಿಕೊಳ್ಳಬಹುದು ಎಂಬ ವಿಷಯವನ್ನು ಹೇಳಿರುವ ಸಿನಿಮಾವೇ “ಚಾಂದಿನಿ ಬಾರ್‌’

Advertisement

ಸಿನಿಮಾದ ಹೆಸರೇ ಹೇಳುವಂತೆ, ಬಾರ್‌ ಒಂದನ್ನು ಹಿನ್ನೆಲೆಯಾಗಿಟ್ಟುಕೊಂಡು “ಚಾಂದಿನಿ ಬಾರ್‌’ ಸಿನಿಮಾದ ಕಥೆ ಸಾಗುತ್ತದೆ. ಬಾರ್‌ಗೆ ಬರುವ ವಿಭಿನ್ನ, ವಿಚಿತ್ರ ಮತ್ತು ವಿಕ್ಷಿಪ್ತ ವ್ಯಕ್ತಿಗಳು, ಅವರ ಸುಖ-ದುಃಖ, ನೋವು-ನಲಿವುಗಳ ಸುತ್ತ “ಚಾಂದಿನಿ ಬಾರ್‌’ ಸಿನಿಮಾದ ಕಥೆ ಸಾಗು ತ್ತದೆ. ಪ್ರತಿಪಾತ್ರಕ್ಕೂ ಅದರದ್ದೇ ಆದ ಹಿನ್ನೆಲೆಯ ಜೊತೆ ಮತ್ತೂಂದು ಪಾತ್ರದ ಜೊತೆಗೆ ನಂಟು ಬೆಳೆಯುತ್ತ ಸಿನಿಮಾವನ್ನು ನವಿರಾಗಿ ಕಟ್ಟಿಕೊಟ್ಟಿ ದ್ದಾರೆ ನಾಯಕ ನಟ ಕಂ ನಿರ್ದೇಶಕ ರಾಘವೇಂದ್ರ ಕುಮಾರ್‌. ಕಥೆಯಲ್ಲಿ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿ ನಿರೂ ಪಣೆಗೆ ಇನ್ನಷ್ಟು ವೇಗ ನೀಡಿದ್ದರೆ, ಪ್ರೇಕ್ಷಕರಿಗೆ “ಚಾಂದಿನಿ ಬಾರ್‌’ನಲ್ಲಿ ಇನ್ನಷ್ಟು “ಕಿಕ್‌’ ಸಿಗುವ ಸಾಧ್ಯತೆಯಿತ್ತು.

ಅದನ್ನು ಹೊರತುಪಡಿಸಿದರೆ, ಹೊಸಬರಾದರೂ ಬಹುತೇಕ ಪ್ರತಿಭೆಗಳು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಮೆಚ್ಚುಗೆ ಪಡೆದುಕೊಳ್ಳುತ್ತಾರೆ. ಮೈಸೂರಿನ ಸೊಗಡು, ಬಹುತೇಕ ರಂಗಪ್ರತಿಭೆಗಳ ನೈಜ ಅಭಿನಯ, ಸಹಜ ನಿರೂಪಣೆ ಸಿನಿಮಾದ ಅಂದವನ್ನು ಹೆಚ್ಚಿಸಿದೆ. ಸಿನಿಮಾದ ಛಾಯಾಗ್ರಹಣ, ಸಂಕಲನ ಗಮನ ಸೆಳೆಯುವಂತಿದೆ.

ಚಿತ್ರದ ಹಿನ್ನೆಲೆ ಸಂಗೀತದ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು. ಕೆಲ ಒಪ್ಪಬಹುದಾದ ತಪ್ಪುಗಳನ್ನು ಬದಿಗಿಟ್ಟು ಹೇಳುವುದಾದರೆ, “ಚಾಂದಿನಿ ಬಾರ್‌’ ಒಮ್ಮೆ ಬೆನ್ನುತಟ್ಟಿ ಪ್ರೋತ್ಸಾಹಿಸಬಹುದಾದ ಹೊಸಬರ ಸಿನಿಮಾ ಎನ್ನಲು ಅಡ್ಡಿಯಿಲ್ಲ.

 ಜಿ.ಎಸ್‌.ಕಾರ್ತಿಕ ಸುಧನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next