Advertisement
ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಈ ಅಪರೂಪದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಕೊಡುಗೆ ನೀಡಿದ ಮಹನೀಯರ ಸಮ್ಮಿಲನಕ್ಕೆ ವೇದಿಕೆಯಾಗಿತ್ತು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಸಾಧಕರನ್ನು ಆತ್ಮೀಯವಾಗಿ ಗೌರವಿಸಿದರು.
Related Articles
Advertisement
ನಟ ಉಪೇಂದ್ರ ಮಾತನಾಡಿ, “ಜೀವನದಲ್ಲಿ ಮತ್ತೊಬ್ಬರನ್ನು ಅನುಸರಿಸದೆ, ಸ್ವಂತಿಕೆ ಉಳಿಸಿಕೊಳ್ಳಬೇಕು. ಆ ಸ್ವಂತಿಕೆಯ ಹೊಸತನಕ್ಕೆ ನಾಂದಿ ಆಗಲಿದೆ. ಮಹಾನ್ ಸಾಧಕರೊಂದಿಗೆ ಪ್ರಶಸ್ತಿ ಸ್ವೀಕರಿಸುತ್ತಿರುವುದು ಖುಷಿ ಅನಿಸುತ್ತಿದೆ’ ಎಂದರು.
ಪ್ರಶಸ್ತಿ ತೀರ್ಪುಗಾರ ತಂಡದ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಹೀಗೆ ಸನ್ಮಾನಿಸುವುದು ಮಾದರಿ ಮತ್ತು ಪ್ರೋತ್ಸಾಹದಾಯಕವಾಗಿದೆ. ಈ ಗೌರವವು ಸಾಧಕರ ಜವಾಬ್ದಾರಿಗಳನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.ಚಾಂಪಿಯನ್ಸ್ ಆಫ್ ಚೇಂಜ್ ಪ್ರಶಸ್ತಿಯ ಸಂಸ್ಥಾಪಕ ಹಾಗೂ ವಕೀಲ ನಂದನ್ ಝಾ, ಚಾಂಪಿಯನ್ಸ್ ಆಫ್ ಚೇಂಜ್ ಪ್ರಶಸ್ತಿಗಳ ಪೋಷಕ ಶ್ಯಾಮ್ ಜಾಜು ಮತ್ತಿತರರು ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃತರು
ಸಮಾಜಸೇವೆ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಪರಸರವಾದಿ ತುಳಸಿಗೌಡ, ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ಸಂಸದ ತೇಜಸ್ವಿ ಸೂರ್ಯ, ನಟಿ ಖುಷ್ಬೂ ಯಾದವ್, ಉದ್ಯಮಿಗಳಾದ ಬಿಪಿನ್ ದಯಾಳ್, ಮಯಾಂಕ್ ಗೋಯಲ್, ಉಪೇಂದ್ರರಾವ್ ಕೊಳ್ಳು, ಬಿಪಿನ್ ಚಂದ್ರ, ಡಾ.ಸೋಮದತ್ತಸಿಂಗ್, ರಾಜೇಶ್ ರೆಡ್ಡಿ ಶಿವಶಂಕರ್. ಸಂಸ್ಕೃತಿ: ಜಾನಪದ ಕಲಾವಿದೆ ಮಂಜಮ್ಮ ಜೋಗತಿ, ನಟರಾದ ಡಾ.ವಿಷ್ಣುವರ್ಧನ್ (ಮರಣೋತ್ತರ), ಉಪೇಂದ್ರ, ಡಾ.ವಿ. ರವಿಚಂದ್ರನ್. ವಿಜ್ಞಾನ ಮತ್ತು ನಾವೀನ್ಯತೆ: ವಿಜ್ಞಾನಿ ಪ್ರೊ.ಸಿ.ಎನ್.ಆರ್. ರಾವ್, ನಿಖೀಲ್ ಪಾಲ್. ಆವಿಷ್ಕಾರ ಮತ್ತು ಕೌಶಲ್ಯ ಅಭಿವೃದ್ಧಿ: ಡಾ.ರಾಜಾ ವಿಜಯ್ ಕುಮಾರ್, ಡಾ.ಡೈಸಿ ಬಾಗಿc.
ಸಾಮಾಜಿಕ ಕಾರ್ಯಕರ್ತ: ಬಿ. ರಾಮಚಂದ್ರ
ಕ್ರೀಡೆ: ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ರಾಜೇಶ್ವರಿ ಗಾಯಕವಾಡ, ಸೋಮಜೀತ್‌ಸಿಂಗ್.