ದುಬಾೖ: ಆಸ್ಟ್ರೇಲಿಯದ ಪ್ರಧಾನ ವೇಗಿ ಮಿಚೆಲ್ ಸ್ಟಾರ್ಕ್ ಫೈನಲ್ ಪಂದ್ಯದ ಅತ್ಯಂತ ದುಬಾರಿ ಬೌಲರ್ ಎಂಬ ಅವಮಾನಕ್ಕೆ ಸಿಲುಕ ಬೇಕಾಯಿತು. ಆದರೇನಂತೆ, ಅವರೀಗ ವಿಶ್ವ ಚಾಂಪಿಯನ್ ತಂಡದ ಸದಸ್ಯ!
ಇಲ್ಲಿ ಇನ್ನೊಂದು ಸ್ವಾರಸ್ಯಕರ ಸಂಗತಿ ಇದೆ. ಮಿಚೆಲ್ ಸ್ಟಾರ್ಕ್ ಮತ್ತು ಅವರ ಪತ್ನಿ ಅಲಿಸ್ಸಾ ಹೀಲಿ “ವಿಶ್ವ ಚಾಂಪಿಯನ್ ದಂಪತಿ’ ಎಂಬ ಅಪರೂಪದ ಹಿರಿಮೆಗೆ ಪಾತ್ರರಾಗಿದ್ದಾರೆ. ಕಪ್ ಎತ್ತಿ ಹೀಡಿದ ಸ್ಟಾರ್ಕ್-ಅಲಿಸ್ಸಾ ಜೋಡಿಯ ಚಿತ್ರ ಎಲ್ಲೆಡೆ ಹರಿದಾಡುತ್ತಿದೆ.
ಆಸ್ಟ್ರೇಲಿಯದ ಪುರುಷರ ತಂಡ ಟಿ20 ವಿಶ್ವಕಪ್ ಎತ್ತಲು 14 ವರ್ಷ ಕಾಯಬೇಕಾಯಿತು. ಆದರೆ ಕಾಂಗರೂ ನಾಡಿನ ವನಿತಾ ತಂಡ ಈಗಾಗಲೇ ದಾಖಲೆ 5 ಸಲ ಚುಟುಕು ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿರುವುದನ್ನು ಮರೆಯುವಂತಿಲ್ಲ!
ಇದನ್ನೂ ಓದಿ:ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ಗಾಂಧಿ ಪ್ರತಿಮೆ ಧ್ವಂಸ
ಕೀಪರ್ ಕಂ ಓಪನರ್ ಅಲಿಸ್ಸಾ ಹೀಲಿ ಈ ಎಲ್ಲ ಸಂದರ್ಭಗಳಲ್ಲೂ ಆಸ್ಟ್ರೇಲಿಯ ತಂಡದ ಸದಸ್ಯೆ ಆಗಿದ್ದರೆಂಬುದು ಉಲ್ಲೇಖನೀಯ. ಜತೆಗೆ 2013ರ ವನಿತಾ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿಯೂ ಹೌದು.
ಮಿಚೆಲ್ ಸ್ಟಾರ್ಕ್ 2015ರ ಏಕ ದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ನಾಗಿದ್ದಾರೆ. “ಕಪ್’ ಲೆಕ್ಕಾಚಾರದಲ್ಲಿ ಸ್ಟಾರ್ಕ್‌ಗಿಂತ ಪತ್ನಿ ಅಲಿಸ್ಸಾ ಹೀಲಿ ಅವರೇ ಮುಂದಿರುವುದು ವಿಶೇಷ.