Advertisement

ಚಮೋಲಿ ದುರಂತಕ್ಕೆ ವಿಕಿರಣ ಕಾರಣ? ರೈನಿ ಗ್ರಾಮಸ್ಥರ ಅನುಮಾನ

01:43 AM Feb 10, 2021 | Team Udayavani |

ಡೆಹ್ರಾಡೂನ್‌/ಜೋಶಿಮಠ: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ದುರಂತಕ್ಕೆ 1965ರಲ್ಲಿ ಪತ್ತೆಯಾಗಿದ್ದ ವಿಕಿರಣಶೀಲ ಸಾಧನವೇ ಕಾರಣವಾಗಿರಬಹುದು ಎಂದು ರೈನಿ ಗ್ರಾಮಸ್ಥರು ಈಗ ಸಂಶಯ ವ್ಯಕ್ತಪಡಿಸತೊಡಗಿದ್ದಾರೆ.

Advertisement

ಚೀನದ ಮೇಲೆ ನಿಗಾ ಇರಿಸಲು ಅಮೆರಿಕದ ಸಿಐಎ ಮತ್ತು ಕೇಂದ್ರ ಸರಕಾರದ ಇಂಟೆಲಿಜೆನ್ಸ್‌ ಬ್ಯೂರೋ ಜಂಟಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಿದ್ದವು. ಅದಕ್ಕಾಗಿ ಕಾಂಚನಜುಂಗಾ ಪರ್ವತದಲ್ಲಿ ವಿಕಿರಣಶೀಲ ಉಪಕರಣವೊಂದನ್ನು ಇರಿಸಲು ತೀರ್ಮಾನಿಸಲಾಗಿತ್ತು. ಪರ್ವತ ಏರಿದ ಜಂಟಿ ತಂಡ ಆ ಉಪಕರಣವನ್ನು ಪರ್ವತದಲ್ಲಿ ಇರಿಸಿ ಬಂದಿತ್ತು.

ಘಟನೆ ಸಂಭವಿಸಿದ ದಿನ ರೈನಿ ಗ್ರಾಮದ ಜನರಿಗೆ ಗಾಳಿಯ ಮೂಲಕ ಕಟು ವಾಸನೆಯ ಅನುಭವ ಉಂಟಾಗಿತ್ತು. ಅದರಿಂದಾಗಿ ಉಸಿರಾಡಲೂ ಕಷ್ಟವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ವಿಕಿರಣ ಹೊರಸೂಸುವ ವಸ್ತುವೇ ಕಾರಣ ಎಂದಿದ್ದಾರೆ.

31ಕ್ಕೆ ಏರಿಕೆ
ಅಸುನೀಗಿದವರ ಸಂಖ್ಯೆ 31ಕ್ಕೆ ಏರಿದೆ. ತಪೋವನದ ಎನ್‌ಟಿಪಿಸಿ ಸುರಂಗದಲ್ಲಿ ಮಣ್ಣು, ಕೆಸರನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ತೆಗೆದು ಸಿಲುಕಿರುವವರಿಗಾಗಿ ಶೋಧ ಮುಂದುವರಿದಿದೆ. 2.5 ಕಿ.ಮೀ. ಉದ್ದದ ಸುರಂಗದಲ್ಲಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದೆ. ಒಟ್ಟು 175 ಮಂದಿ ನಾಪತ್ತೆಯಾಗಿದ್ದಾರೆ.

ಗ್ರಾಮಗಳಿಗೆ ಪರಿಹಾರ
ಪ್ರವಾಹದಿಂದ ಸಂಪರ್ಕ ಕಡಿದುಕೊಂಡ 13 ಗ್ರಾಮಗಳಿಗೆ ಹೆಲಿಕಾಪ್ಟರ್‌ ಮೂಲಕ 100ಕ್ಕೂ ಅಧಿಕ ಪಡಿತರ ಕಿಟ್‌ಗಳನ್ನು ವಿತರಿಸಲಾಗಿದೆ. ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌ ಹಾನಿಗೆ ಒಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

Advertisement

ಯುದ್ಧದೋಪಾದಿ ರಕ್ಷಣೆ
ಯುದ್ಧದೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯ ನಡೆಯುತ್ತಿದೆ. 450ಕ್ಕೂ ಅಧಿಕ ಮಂದಿ ಯೋಧರು ರಕ್ಷಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಸಂಸತ್‌ನಲ್ಲಿ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next