Advertisement

ಕೋವಿಡ್ ತಡೆಗಾಗಿ ಔಷಧ ಸಿಂಪಡಣೆ

02:51 PM Apr 22, 2021 | Team Udayavani |

ಬೇತಮಂಗಲ: ಕೋವಿಡ್ ಹೆಚ್ಚುತ್ತಿರುವ ಹಿನ್ನಲೆ ಗ್ರಾಮದ ಗ್ರಾಪಂ ಮತ್ತುಸಮುದಾಯ ಆರೋಗ್ಯ ಕೇಂದ್ರದಿಂದ ಔಷಧಿ ಸಿಂಪಡನೆ ಮಾಡಲಾಯಿತು. ಪಟ್ಟಣದ ಬಸ್‌ ನಿಲ್ದಾಣ, ಪ್ರಮುಖ ರಸ್ತೆಗಳು, ಗ್ರಾಪಂ ಮತ್ತು ಸರ್ಕಾರಿ ಆಸ್ಪತ್ರೆ ಇತರೆ ಸರ್ಕಾರಿ ಕಟ್ಟಡಗಳು, ಹೆಚ್ಚು ಜನರಿರುವ ಕಡೆಗಳಲ್ಲಿ ರೋಗ ನಿರೋಧಕ ಶಕ್ತಿ ಔಷಧಿ ಸಿಂಪಡನೆ ಮಾಡಲಾಯಿತು.

Advertisement

ಪೊಲೀಸರಿಂದ ದಂಡ: ಸಾರ್ವಜನಿಕರಿಗೆಪ್ರ ತಿನಿತ್ಯ ಮಾಸ್ಕ್ ಧರಿಸುವುದು ಮತ್ತು ಸರ್ಕಾರದ ಸುತ್ತೋಲೆಯಂತೆ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಪ್ರಯೋಜನವಾಗದ ಕಾರಣ ಬೈಕ್‌ ಸವಾರರು, ಬಸ್‌ ನಿಲಾœಣ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ಧರಿಸದ ವ್ಯಕ್ತಿಗಳಿಗೆ ಪೊಲೀಸ್‌ ಸಿಬ್ಬಂದಿ ಎಚ್ಚರಿಕೆ ನೀಡಿ, ದಂಡ ವಸೂಲಿ ಮಾಡುತ್ತಿದ್ದಾರೆ.

ಲಸಿಕೆ ಹಾಕಿಕೊಳ್ಳಲು ಹಿಂದೇಟು: 45ವರ್ಷ ಮೇಲ್ಪಟ್ಟವರು ಮೊದಲು ಕೊರೊನಾಲಸಿಕೆ ಪಡೆದುಕೊಳ್ಳಲು ಸರ್ಕಾರ ಸೂಚನೆನೀಡಿದ್ದು, ಗ್ರಾಮದ ಆಸ್ಪತ್ರೆಯಲ್ಲಿ ಬೆರಳೆಣಿಕೆ ಮಂದಿ ಮಾತ್ರ ಲಸಿಕೆ ಹಾಕಿಕೊಳ್ಳುತ್ತಿದ್ದಾರೆ.ಇತ್ತೀಚಿಗೆ ಗ್ರಾಪಂ ಮತ್ತು ಗ್ರಾಮಮಟ್ಟದಲ್ಲೇ ಲಸಿಕೆ ನೀಡುತ್ತಿರುವುದರಿಂದ ಸಾರ್ವಜನಿಕರು ಉತ್ಸಾಹ ತೋರಿದ್ದಾರೆ.

ಗ್ರಾಪಂ ಅಧ್ಯಕ್ಷೆ ಮಮತಾ ಗಣೇಶ್‌,ಉಪಾಧ್ಯಕ್ಷ ನಂದೀಶ್‌, ಡಾ.ವಿಶ್ವನಾಥ ರೆಡ್ಡಿ,ಆರೋಗ್ಯ ನಿರೀಕ್ಷಕ ಕುಮಾರ್‌,ಮುಖಂಡರಾದ ಧರಣಿ ಹಾಗೂ ಗ್ರಾಪಂಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next