Advertisement
ಆ ಜಾಗಕ್ಕೆ ಸಂಬಂಧಿಸಿದ ಖಾತಾ ಮಾಡಿಕೊಡುವಂತೆ ಕೋರಿ ಸಲ್ಲಿಸಿದ್ದ ವಕ್ಫ್ ಮಂಡಳಿಯ ಅರ್ಜಿಯನ್ನು ವಜಾಗೊಳಿಸಿರುವ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್, ಮೈದಾನವು ಕಂದಾಯ ಇಲಾಖೆಗೆ ಸೇರಿದೆ ಎಂದು ಶನಿವಾರ ಆದೇಶ ಹೊರಡಿಸಿದ್ದಾರೆ. ವಕ್ಫ್ ಮಂಡಳಿಯು ಈ ಮೈದಾನದ ಮೇಲೆ ಹಕ್ಕು ಸ್ಥಾಪಿಸಬೇಕಾದ್ದಲ್ಲಿ ಕಂದಾಯ ಇಲಾಖೆಯೊಂದಿಗೆ ವ್ಯವಹರಿಸಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಈ ಮೈದಾನವು ಬೆಂಗಳೂರು ದಕ್ಷಿಣ ತಾಲೂಕು ಗುಟ್ಟಹಳ್ಳಿಯ ಸರ್ವೆ ನಂಬರ್ 40ರ ಭಾಗಶಃ ಆಸ್ತಿಯಾಗಿದೆ. ಚಾಮರಾಜಪೇಟೆ ಬಡಾವಣೆಯಾದಾಗ ಇದು ನಗರ ವ್ಯಾಪ್ತಿಗೆ ಸೇರಿದೆ ಮತ್ತು ಚೆಕ್ಕುಬಂದಿಯ ಬಗ್ಗೆ ವಿವಾದಗಳಿಲ್ಲ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಮೈದಾನದಲ್ಲಿ ಪ್ರಾರ್ಥನೆ ಕುರಿತು ಮಾತ್ರ ವಾದಗಳು ನಡೆದಿವೆ. 1964ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಮುಸ್ಲಿಮರು ಮೈದಾನದಲ್ಲಿ ಸಾಂದರ್ಭಿಕ ಸಾಮೂಹಿಕ ಪ್ರಾರ್ಥನೆ ಹಕ್ಕು ಮಾತ್ರ ಪಡೆದಿದ್ದಾರೆಯೇ ಹೊರತು ಮಾಲಕತ್ವವಲ್ಲ. ಮೈದಾನ ಕುರಿತು ಕೋರ್ಟ್‌ನಲ್ಲಿ ಮುಸ್ಲಿಮರು ಪ್ರಾರ್ಥನಾ ಹಕ್ಕು ಮಾತ್ರ ಮಂಡಿಸಿದ್ದಾರೆ. ಮಾಲಕತ್ವದ ಹಕ್ಕು ಮಂಡಿಸಿಲ್ಲ. ಸುಪ್ರೀಂ ತೀರ್ಪಿನ ಪ್ರಕಾರ ಮೈಸೂರು ಲ್ಯಾಂಡ್ ರೆವಿನ್ಯೂ ಕೋಡ್ 36ರ ಅನ್ವಯ ಈ ಮೈದಾನವು ಸರಕಾರದ ಸ್ವತ್ತು ಎಂದು ಪರಿಗಣಿಸಬಹುದು ಎಂದು ಹೇಳಲಾಗಿದೆ
Related Articles
Advertisement