Advertisement

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

03:36 AM Jan 05, 2025 | Team Udayavani |

ಚಾಮರಾಜನಗರ: ಯಳಂದೂರು ತಾಲೂಕಿನ ಅಗರ ಗ್ರಾಮದ ಲಿಂಗಾಯಿತ ಬಡಾವಣೆಯ ಮಠದ ಬೀದಿಯಲ್ಲಿ ವಾಸವಾಗಿರುವ ವೀರಣ್ಣ, ಗೌರಮ್ಮ ಹಾಗೂ ಇವರ ಮಗ ವಿ. ಸುರೇಶ ಅವರ ಕುಟುಂಬಕ್ಕೆ ಹಾಕಿರುವ ಬಹಿಷ್ಕಾರಕ್ಕೆ ಸಂಬಂಧಿಸಿ ಜ. 4ರಂದು “ಉದಯವಾಣಿ’ಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಶನಿವಾರ ಗ್ರಾಮಕ್ಕೆ ದೌಡಾಯಿಸಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದರು.

Advertisement

ಈ ಕುಟುಂಬ ಪರಿಶಿಷ್ಟ ಪಂಗಡದ ನಾಯಕ ಜನಾಂಗದವರಿಗೆ ಮನೆ ಬಾಡಿಗೆಗೆ ನೀಡಿದ್ದು, ಅಲ್ಲಿಂದಾಚೆ ಇವರ ಕುಟುಂಬವನ್ನು ಲಿಂಗಾಯಿತ ಜನಾಂಗದವರು ಸೇರುವ ಧಾರ್ಮಿಕ ಸಭೆ ಸಮಾರಂಭಗಳು ಹಾಗೂ ದೇಗುಲಕ್ಕೆ ಬಾರದಂತೆ ತಡೆಯೊಡ್ಡುತ್ತಿದ್ದಾರೆ ಎಂದು ಈ ಕುಟುಂಬದ ಸದಸ್ಯ ವಿ. ಸುರೇಶ್‌ ಆರೋಪಿಸಿದ್ದರು.

ಈ ಬಗ್ಗೆ ಉದಯವಾಣಿಯಲ್ಲಿ “ಸವರ್ಣೀಯರ ಕುಟುಂಬಕ್ಕೆ ಸವರ್ಣೀಯರಿಂದ ಬಹಿಷ್ಕಾರ!’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಗ್ರಾಮಕ್ಕೆ ದೌಡಾಯಿಸಿದ ತಹಶೀಲ್ದಾರ್‌ ಜಯಪ್ರಕಾಶ್‌, ಪಿಎಸ್‌ಐ ಕರಿಬಸಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಗ್ರಾಮಸ್ಥರ ಸಭೆ ನಡೆಸಿದರು.

ಯಾವುದೋ ಹಳೆಯ ದ್ವೇಷದಿಂದ ಹೀಗಾಗಿದೆ. ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿದಿದೆ ಎಂದು ತಹಶೀಲ್ದಾರ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next