ಚಾಮರಾಜನಗರ: ಕರ್ನಾಟಕ ಗೋಹತ್ಯೆ ತಡೆ ಮತ್ತುಜಾನುವಾರು ಸಂರಕ್ಷಣೆ ಕಾಯ್ದೆ ಜಾರಿ ಸಂಬಂಧಪೂರಕವಾಗಿ ಗೋಹತ್ಯೆ ತಡೆ ಮತ್ತು ಜಾನುವಾರುಸಂರಕ್ಷಣೆಗಾಗಿ ಉದ್ದೇಶಿಸಲಾಗಿರುವ ಗೋ ಶಾಲೆಯನ್ನು ಶೀಘ್ರವಾಗಿ ಆರಂಭಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ,ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತುಸಂರಕ್ಷಣೆ ಅಧಿನಿಯಮ 2020 ಅನುಷ್ಠಾನಗೊಳಿಸುವಕುರಿತು ಗೋಶಾಲೆ ಸ್ಥಾಪನೆ ಸಂಬಂಧ ನಡೆದ ಜಿಲ್ಲಾಪ್ರಾಣಿ ದಯಾ ಸಂಘದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿಮಾತನಾಡಿದರು.
ಪ್ರಕ್ರಿಯೆ ಪೂರ್ಣಗೊಳಿಸಿ: ಜಿಲ್ಲೆಯಲ್ಲಿ ಈಗಾಗಲೇಒಂದು ಗೋಶಾಲೆ ನಿರ್ಮಾಣಕ್ಕೆ ಭೂಮಿಗುರುತಿಸಲಾಗಿದೆ. ಹಂತ ಹಂತವಾಗಿ ತಾಲೂಕುಮಟ್ಟದಲ್ಲಿಯೂ ಗೋಶಾಲೆ ಆರಂಭಿಸಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಪ್ರಸ್ತಾಪಿಸಲಾಗಿರುವಗೋಶಾಲೆ ತೆರೆಯಲು ಅವಶ್ಯವಿರುವ ಪ್ರಕ್ರಿಯೆಯನ್ನುತ್ವರಿತವಾಗಿ ಪೂರ್ಣಗೊಳಿಸಬೇಕೆಂದು ತಿಳಿಸಿದರು.
ಗೋಶಾಲೆಗಳ ಬಲವರ್ಧನೆ: ಪ್ರಸ್ತುತ ಜಿಲ್ಲೆಯಲ್ಲಿನೋಂದಾಯಿತವಾಗಿರುವ ಗೋಶಾಲೆಗಳಬಲವರ್ಧನೆಗೂ ಅವಕಾಶವಿದೆ. ಇದರಿಂದಜಾನುವಾರು ಪೋಷಣೆ ಮಾಡಬಹುದಾಗಿದೆ. ಈನಿಟ್ಟಿನಲ್ಲಿಯೂ ಸೂಕ್ತ ಕ್ರಮ ನಿಯಮಾನುಸಾರತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಅಕ್ರಮ ಕಂಡು ಬಂದರೆ ಪ್ರಕರಣ ದಾಖಲಿಸಿ:ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತುಸಂರಕ್ಷಣಾ ಅಧಿನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಜಿಲ್ಲೆಯ ಗಡಿ ಭಾಗದಲ್ಲಿ ವಿಶೇಷಕಣ್ಗಾವಲು ಇರಿಸಿ ಅನಧಿಕೃತ ಜಾನುವಾರು ಸಾಗಾಣಿಕೆಯಾಗದಂತೆ ನೋಡಿಕೊಳ್ಳ ಬೇಕು. ಯಾವುದೇಅಕ್ರಮ ಕಂಡುಬಂದಲ್ಲಿ ಪ್ರಕರಣ ದಾಖಲಿಸಬೇಕುಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಕರ್ನಾಟಕ ರಾಜ್ಯ ಪ್ರಾಣಿ ದಯಾ ಮಂಡಳಿಪ್ರಾದೇಶಿಕ ಅಧ್ಯಕ್ಷ ಡಾ. ಎಸ್.ಕೆ. ವಿಠಲ್,ಪಶುಸಂಗೋಪನೆ ಇಲಾಖೆ ಉಪನಿರ್ದೇಶಕಡಾ.ಸುರೇಶ್, ಜಿಲ್ಲಾ ನಗರಾಭಿವೃದ್ಧಿ ಕೋಶದಯೋಜನಾ ನಿರ್ದೇಶಕ ಕೆ.ಸುರೇಶ್, ನಗರಸಭೆಆಯುಕ್ತ ಕರಿಬಸವಯ್ಯ, ಪೊಲೀಸ್ ಇನ್ಸ್‌ಪೆಕ್ಟರ್‌ಮಹೇಶ್, ಪಶುಸಂಗೋಪನೆ ಇಲಾಖೆ ತಾಲೂಕುಸಹಾಯಕ ನಿರ್ದೇಶಕರು, ಇತರೆ ಅಧಿಕಾರಿಗಳುಸಭೆಯಲ್ಲಿ ಇದ್ದರು.