Advertisement

ಅಪರೂಪದ ಪ್ರತಿಮೆ ಇಂದು ಅನಾವರಣ

02:19 PM Aug 18, 2021 | Team Udayavani |

ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮದಲ್ಲಿ ವಿನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್‌ ಪುತ್ಥಳಿ ಬುಧವಾರ ಲೋಕರ್ಪಣೆಗೊಳ್ಳಲಿದೆ.ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ9.9.ಅಡಿ ಎತ್ತರದ ಈ ಪ್ರತಿಮೆಯನ್ನು 4.3 ಅಡಿ ಎತ್ತರದ ಪೀಠದಲ್ಲಿ ನಿರ್ಮಿಸಲಾಗಿದೆ.

Advertisement

ಇದಕ್ಕೆ 5 ಲಕ್ಷ ರೂ. ವೆಚ್ಚವಾಗಿದ್ದು, ಇದಕ್ಕಾಗಿ ಶಾಸಕ ಎನ್‌.ಮಹೇಶ್‌ ತಮ್ಮಸ್ವಂತ ಹಣ ನೀಡಿದ್ದಾರೆ.ದ.ಭಾರತದಲ್ಲೇ ಮೊದಲ ಪ್ರತಿಮೆ: ಅಂಬೇಡ್ಕರ್‌ಕುರ್ಚಿಯ ಮೇಲೆ ಕುಳಿತಿರುವ ಈ ಪ್ರತಿಮೆಅಪರೂಪದ್ದಾಗಿದೆ. ದೆಹಲಿಯ ಅಂಬೇಡ್ಕರ್‌ಇಂಟರ್‌ ನ್ಯಾಷನಲ್‌ನಲ್ಲಿ ಇರುವ ಭಂಗಿಯಲ್ಲಿಇದನ್ನು ರೂಪಿಸಲಾಗಿದೆ.

ಫೈಬರ್‌ನಲ್ಲಿ ರೂಪಿತಗೊಂಡಿರುವ ಈ ಪ್ರತಿಮೆಯನ್ನು ನೆರೆಯಆಂಧ್ರಪ್ರದೇಶದ ಶಿಲ್ಪಿಗಳು ನಿರ್ಮಿಸಿದ್ದಾರೆ.ಪುತ್ಥಳಿ ಸುತ್ತಲೂ ಕಟ್ಟಡ ಪ್ರಾಂಗಣ, ವಿದ್ಯುತ್‌ದೀಪಗಳು, ಪಾರ್ಕ್‌ಮತ್ತಿತರ ಸೌಲಭ್ಯಕಲ್ಪಿಸಲುಗ್ರಾಮಸ್ಥರ ನೆರವಿನಿಂದ 10 ಲಕ್ಷ ರೂ.ಸೇರಿದಂತೆ ಒಟ್ಟು 15 ಲಕ್ಷ ರೂ.ವ್ಯಯಿಸಲಾಗಿದೆ ಎಂದು ಸಂಘದ ಅಧ್ಯಕ್ಷರವಿಚಂದ್ರ ಮಾಹಿತಿ ನೀಡಿದರು.

ಬುಧವಾರ ಬೆಳಗ್ಗೆ10 ಗಂಟೆಗೆ ಪುತ್ಥಳಿಅನಾವರಣ ಕಾರ್ಯಕ್ರಮ ನಡೆಯಲಿದ್ದುಮನೋರಖೀVತ, ಬೋಧಿರತ್ನ, ಬುದ್ಧರತ್ನಬಂತೆಜಿಗಳು, ಜ್ಞಾನಪ್ರಕಾಶ್‌ ಸ್ವಾಮೀಜಿ, ಸಂಸದವಿ.ಶ್ರೀನಿವಾಸ್‌ ಪ್ರಸಾದ್‌, ಶಾಸಕ ಎನ್‌.ಮಹೇಶ್‌, ಮಾಜಿ ಸಂಸದರು, ಶಾಸಕರು,ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next