Advertisement

ಉಮ್ಮತ್ತೂರು ವನ್ಯಜೀವಿ ಧಾಮದಲ್ಲಿ ಕೃಷ್ಣಮೃಗಕ್ಕೆ ಕುತ್ತು

06:26 PM Jul 05, 2021 | Team Udayavani |

ಚಾಮರಾಜನಗರ: ತಾಲೂಕಿನ ಉಮ್ಮತ್ತೂರುಕೃಷ್ಣಮೃಗ ವನ್ಯಜೀವಿಧಾಮ ಹಾಗೂ ಕೆಲ್ಲಂಬಳ್ಳಿಗುಡ್ಡಗಳು ಕುರುಚಲು ಹುಲ್ಲಿನ ಪ್ರದೇಶಗಳಾಗಿದ್ದು,ಕೃಷ್ಣಮೃಗಗಳ ಆವಾಸ ಸ್ಥಾನಗಳಾಗಿವೆ. ಈ ಗುಡ್ಡಗಳಲ್ಲಿಕಳೆದ ಕೆಲವು ತಿಂಗಳಿಂದ ಕೃಷ್ಣಮೃಗಗಳನ್ನು ಮಾಂಸಕ್ಕಾಗಿ ಬೇಟೆಯಾಡಲಾಗುತ್ತಿದೆ.

Advertisement

ತಾಲೂಕಿನ ಸಂತೆಮರಹಳ್ಳಿ ಸಮೀಪ ಇರುವಉಮ್ಮತ್ತೂರು ಗ್ರಾಮದಲ್ಲಿ ತಿರುಮಲ್ಲೇಶ್ವರ ಬೆಟ್ಟಹಾಗೂ ಬಸವನಬೆಟ್ಟ ಎಂಬ ಗುಡ್ಡವಿದ್ದು, ಕುರುಚಲುಕಾಡಿನ ಪ್ರದೇಶವಿದೆ. ಇಲ್ಲಿ ಹುಲ್ಲುಗಾವಲುಇರುವುದರಿಂದ ಕೃಷ್ಣಮೃಗಗಳ ಸಂತತಿ ವೃದ್ಧಿಸಿದೆ.ಹೀಗಾಗಿ ಅರಣ್ಯ ಇಲಾಖೆ 2016-17ನೇ ಸಾಲಿನಲ್ಲಿಈ ಗುಡ್ಡವನ್ನುಕೃಷ್ಣಮೃಗಧಾಮವನ್ನಾಗಿ ಘೋಷಿಸಿದೆ.

ಇದೇ ಬಗೆಯಲ್ಲಿ ಕೆಲ್ಲಂಬಳ್ಳಿ ಗುಡ್ಡ ಪ್ರದೇಶದಲ್ಲೂಕೃಷ್ಣಮೃಗ ಹಾಗೂ ಚುಕ್ಕಿ ಜಿಂಕೆಗಳುಕಂಡು ಬಂದಿವೆ.ವಾಹನಗಳಲ್ಲಿ ಸಾಗಾಟ: ಕಳೆದ ವರ್ಷದ ಲಾಕ್‌ಡೌನ್‌ ಹಾಗೂ ಇದೀಗ ಕಳೆದ 2 ತಿಂಗಳಿಂದ ಇದ್ದಲಾಕ್‌ಡೌನ್‌ ಸಂದರ್ಭದಲ್ಲಿ ವಾಹನ, ಜನ ಸಂಚಾರಇಲ್ಲದ ಕಾರಣಕ್ಕೆ ಕೃಷ್ಣಮೃಗ, ಜಿಂಕೆಗಳು ಗುಡ್ಡವಲ್ಲದೇರಸ್ತೆ ದಾಟಿ ಸ್ವತ್ಛಂದವಾಗಿ ಓಡಾಡುತ್ತಿವೆ.

ಈ ಸಂದರ್ಭಬಳಸಿ ಬೇರೆ ಕಡೆಯಿಂದ ಬಂದ ದುಷ Rರ್ಮಿಗಳು ಅವುಗಳನ್ನು ಬೇಟೆಯಾಡಿ ವಾಹನಗಳಲ್ಲಿ ಸಾಗಣೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಉಮ್ಮತ್ತೂರು ಗುಡ್ಡವನ್ನು ಕೃಷ್ಣಮೃಗ ವನ್ಯಧಾಮವನ್ನಾಗಿ ರಾಜ್ಯ ಸರ್ಕಾರ ಘೊಷಣೆ ಮಾಡಿದೆ. ಅದುಘೋಷಣೆಗೆ ಸೀಮಿತವಾಗಿದೆ. ಇಲ್ಲಿನ ವನ್ಯಜೀವಿಗಳರಕ್ಷಣೆಗೆ ಸೂಕ್ತ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ.ಕಳ್ಳಬೇಟೆ ತಡೆ ಶಿಬಿರ ಸ್ಥಾಪಿಸಿಲ್ಲ. ಸರ್ಕಾರದ ಈನಿರ್ಲಕ್ಷ್ಯವೇ ಇದೀಗ ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳಿಗೆ ಕಂಟಕವಾಗಿ ಪರಿಣಮಿಸಿದೆ. ಸಿಬ್ಬಂದಿ ಇಲ್ಲ: ಜಿಲ್ಲೆಯಲ್ಲಿ ಬಂಡೀಪುರ,ಬಿಳಿಗಿರಿರಂಗನಬೆಟ್ಟ ಹುಲಿ ರಕ್ಷಿತ ಅರಣ್ಯ, ಮಲೆಮಹದೇಶ್ವರ ವನ್ಯಜೀವಿ ಧಾಮಗಳಿವೆ.

ಇವುಗಳಲ್ಲಿವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಎಲ್ಲಾಕ್ರಮಗಳನ್ನೂ ಕೈಗೊಂಡಿದೆ. ಆದರೆ, ವನ್ಯಜೀವಿವಲಯಗಳಿಂದಾಚೆ ಇರುವ ಪ್ರದೇಶಗಳಲ್ಲಿರುವಕುರುಚಲು ಅರಣ್ಯ ಪ್ರದೇಶದಲ್ಲಿ, ಕೃಷ್ಣಮೃಗ, ಜಿಂಕೆ,ನವಿಲುಗಳ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಿಲ್ಲ.

Advertisement

ಹೀಗಾಗಿ ಕೃಷ್ಣಮೃಗಗಳ ಬೇಟೆಗಾರರಿಗೆ ಅನುಕೂಲವಾಗಿದೆಎನ್ನುತ್ತಾರೆ ಸ್ಥಳೀಯ ನಿವಾಸಿಗಳು.ಸಂಕೋಚ ಸ್ವಭಾವದಕೃಷ್ಣಮೃಗಗಳು ಸಮತಟ್ಟಾದಹುಲ್ಲುಗಾವಲು ಹೆಚ್ಚಾಗಿರುವ ಪ್ರದೇಶವನ್ನು ತಮ್ಮಆವಾಸ ಸ್ಥಾನವನ್ನಾಗಿ ಮಾಡಿಕೊಳ್ಳುತ್ತವೆ.

ಹೀಗಾಗಿ ಉಮ್ಮತ್ತೂರು ಹಾಗೂ ಕೆಲ್ಲಂಬಳ್ಳಿ ಗುಡ್ಡಗಳು ಅವುಗಳವಾಸಕ್ಕೆ ಸೂಕ್ತವಾಗಿವೆ. ಉಮ್ಮತ್ತೂರು ಅರಣ್ಯದಲ್ಲಿಕ್ರಮೇಣ ಇವುಗಳ ಸಂಖ್ಯೆ ಹೆಚ್ಚುತ್ತಿದ್ದು, ಈಚೆಗೆಕೆಲ್ಲಂಬಳ್ಳಿ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವಕೈಗಾರಿಕಾ ಪ್ರದೇಶದ ನಿರ್ಜನ ಸ್ಥಳಗಳಲ್ಲೂ ಕಂಡುಬರುತ್ತಿವೆ. ಹೀಗಾಗಿ ಅರಣ್ಯ ಇಲಾಖೆ ಇವುಗಳರಕ್ಷಣೆಗೆ ಮುಂದಾಗಬೇಕಾಗಿದೆ. ಹೆಚ್ಚಿನ ಸಿಬ್ಬಂದಿಯನ್ನು ಪಾಳಿ ವ್ಯವಸ್ಥೆಯಲ್ಲಿ ಇಲ್ಲಿಗೆ ನಿಯೋಜಿಸಿ ಬೇಟೆತಡೆಯಬೇಕಾಗಿದೆ. ಅಲ್ಲದೇ ಗಸ್ತು ನಿಯೋಜಿಸಿದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸಬೇಕಾಗಿದೆಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next