Advertisement

ಅರಣ್ಯದಲ್ಲಿ ಅಕ್ರಮವಾಗಿ ಮಾಕಳಿ ಬೇರು ಸಂಗ್ರಹಿಸುತಿದ್ದ 6 ಮಂದಿ ಬಂಧನ

05:54 PM Aug 25, 2020 | sudhir |

ಹನೂರು( ಚಾಮರಾಜನಗರ): ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಮಾಕಳಿ ಬೇರು ಸಂಗ್ರಹಿಸುತ್ತಿದ್ದ 2 ಮಹಿಳೆಯರು, 4 ಪುರುಷರು ಸೇರಿ ಒಟ್ಟು 6 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸುವಲ್ಲಿ ಕಾವೇರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

Advertisement

ತಾಲೂಕಿನ ಆಲಂಬಾಡಿ ಗ್ರಾಮದ ಕುಟ್ಟಿ, ಬಿಳಿಗುಂಡ್ಲುವಿನ ಅರುಳ್, ಚಾರ್ಲಿಸ್, ಬಾಲ, ಆರೋಗ್ಯಮೇರಿ ಮತ್ತು ತೆರೆಸಾ ಎಂಬುವರೇ ಬಂಧಿತ ಆರೋಪಿಗಳಾಗಿದ್ದು, ಈ 6 ಜನರ ತಂಡ ಕಾವೇರಿ ವನ್ಯಜೀವಿ ವಲಯ ಕೌದಳ್ಳಿ ವಿಭಾಗದ ಬಿಜ್ಜಲಾನೆ ಗಸ್ತುವಿನ ಎರಮೋಡ್ ಎಂಬುವಲ್ಲಿ ಅಕ್ರಮವಾಗಿ ಮಾಕಳಿ ಬೇರನ್ನು ಸಂಗ್ರಹಿಸುತ್ತಿದ್ದರು. ಈ ಸಂಬಂಧ ದೊರೆತ ಮಾಹಿತಿ ಮೇರೆಗೆ ಡಿಎಫ್‍ಓ ರಮೇಶ್‍ಕುಮಾರ್ ಅವರ ಮಾರ್ಗದರ್ಶನದಲ್ಲಿ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿ 6 ಜರನ್ನು ಬಂಧಿಸಿ ಬಂಧಿತರಿಂದ 2 ಚೀಲದಲ್ಲಿ ಅಂಗ್ರಹಿಸಿದ್ದ 35 ಕೆ.ಜಿ ಮಾಕಳಿ ಬೇರು ಮತ್ತು2 ಉರುಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ದಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿ ಕನಕರಾಜ, ಅರಣ್ಯ ರಕ್ಷಕ ಮಲ್ಲಿಕಾರ್ಜುನ ಈರಪ್ಪ, ಮಂಜುನಾಥ ಬಿಜ್ಜರಗಿ, ಪಿ.ಸಿ.ಪಿ ನೌಕರರಾದ ಮಹದೇವ, ಚಿಕ್ಕನಾಗಶೆಟ್ಟಿ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next