Advertisement

ಕಾಲೇಜು, ಹಾಸ್ಟೆಲ್‌ನಲ್ಲಿ ಅನುಚಿತ ವರ್ತಿಸಿದರೆ ಕ್ರಮ

12:12 PM Apr 02, 2021 | Team Udayavani |

ಚಾಮರಾಜನಗರ: ಕಾಲೇಜು, ಹಾಸ್ಟೆಲ್‌ ಆವರಣದಲ್ಲಿ ಅನುಚಿತ ವರ್ತನೆಗಳಿಗೆ ಅವಕಾಶವಾಗದಂತೆ ವಿದ್ಯಾರ್ಥಿಗಳು ಶಿಸ್ತಿನಿಂದಇರುವಂತೆ ಆಡಳಿತ ಮಂಡಳಿ, ಉಪನ್ಯಾಸಕ ವರ್ಗನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಗಂಭೀರ ಕ್ರಮಗಳಿಗೆ ಮುಂದಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಎಚ್ಚರಿಕೆ ನೀಡಿದರು.

Advertisement

ನಗರದ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ನಡುವಿನ ಅನುಚಿತ ವರ್ತನೆ ಪ್ರಕರಣ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಭೆ ನಡೆಸಿದ ಅವರು, ವೈದ್ಯಕೀಯ ಕಾಲೇಜಿನಲ್ಲಿ ಸೌಹಾರ್ದಕ್ಕೆ ಧಕ್ಕೆ ತರುವ ಯಾವುದೇ ಘಟನೆಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು. ಆಡಳಿತ ಮಂಡಳಿ, ಹಾಸ್ಟೆಲ್‌ ವಾರ್ಡನ್‌ಗಳು, ವಿದ್ಯಾರ್ಥಿಗಳ ಹಿತ ರಕ್ಷಣೆ ಬಗ್ಗೆಯೂ ಹೆಚ್ಚು ಗಮನಹರಿಸಬೇಕು. ವ್ಯಾಸಂಗ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದಲ್ಲಿ ನಡೆಯಲು ಉತ್ತೇಜಿಸಿ ಆತ್ಮವಿಶ್ವಾಸ ಮೂಡಿಸಬೇಕು. ಯಾವುದೇ ಕಾರಣಕ್ಕೂ ಅಶಿಸ್ತಿನ ವಾತಾವರಣ ಇರುವುದನ್ನು ಸಹಿಸಲಾಗುವುದಿಲ್ಲ. ವಿದ್ಯಾರ್ಥಿಗಳ ಅನುಚಿತವಾಗಿ ಕಿರಿಯರೊಂದಿಗೆ ವರ್ತಿಸದಂತೆ ನೋಡಿಕೊಳ್ಳಬೇಕೆಂದರು.

ಕಾಲೇಜಿನಲ್ಲಿ ಆಂತರಿಕ ಶಿಸ್ತು ಸಮಿತಿ ಕ್ರಿಯಾಶೀಲವಾಗಿರಬೇಕು. ನಿಗದಿತ ಅವಧಿಯೊಳಗೆ ಸಭೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಯಾವುದೇತೊಂದರೆ ಬಾರದಂತೆ ಕ್ರಮವಹಿಸಬೇಕು.ಯಾವುದಾದರೂ ಸಮಸ್ಯೆ ಕಂಡು ಬಂದರೆ ಆರಂಭದಲ್ಲೇ ಪರಿಶೀಲಿಸಿ ತಿಳಿವಳಿಕೆ ನೀಡಬೇಕು.ಮುಖ್ಯ ಆಡಳಿತ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ತಿಳಿಸಿದರು.

ಪೋಷಕರ ಸಭೆ ನಡೆಸಬೇಕು, ವಿದ್ಯಾರ್ಥಿಗಳ ನಡುವೆ ಉತ್ತಮ ಸೌಹಾರ್ದ ಸಂಬಂಧ ಬೆಳೆಸುವನಿಟ್ಟಿನಲ್ಲಿ ಕಾಲೇಜು ಚಟುವಟಿಕೆಗಳು ನಡೆಯಬೇಕು. ವಿದ್ಯಾರ್ಥಿಗಳ ಹಿತರಕ್ಷಣಾ ಸಂಘ, ಪೋಷಕರನ್ನುವಿಶ್ವಾಸಕ್ಕೆ ತೆಗೆದುಕೊಂಡು ಶೈಕ್ಷಣಿಕ ಚಟುವಟಿಕೆಗಳಿಗೆಪ್ರೋತ್ಸಾಹಿಸಬೇಕು. ಇತರೆ ಯಾವುದೇ ಅನಗತ್ಯಸಮಸ್ಯೆಗಳಿಗೆ ಅವಕಾಶವಾಗದಂತೆ ನಿಗಾ ವಹಿಸಬೇಕು ಎಂದರು.

ವಿದ್ಯಾರ್ಥಿಗಳ ಕ್ಷೇಮ ಪಾಲನೆಗೆ ಬೋಧಕ ವರ್ಗ, ಸಂಬಂಧಪಟ್ಟ ಅಧಿಕಾರಿಗಳು ಅತ್ಯಂತ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು.ನಿರ್ಲಕ್ಷ್ಯ ಮಾಡುವಂತಿಲ್ಲ. ಕಾಲೇಜು, ಹಾಸ್ಟೆಲ್‌ ಗಳಲ್ಲಿ ವಿದ್ಯಾರ್ಥಿಗಳ ಹಿತ ಕಾಪಾಡುವಜವಾಬ್ದಾರಿಯಲ್ಲಿ ಲೋಪ ಕಂಡುಬರಬಾರದು ಎಂದು ಸೂಚಿಸಿದರು.

Advertisement

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ವೈದ್ಯಕೀಯ ಕಾಲೇಜಿನ ಡೀನ್‌ ಡಾ. ಸಂಜೀವ್‌, ಡಾ.ಶ್ರೀನಿವಾಸ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next