Advertisement

ಚಾಮರಾಜನಗರ : 99 ಮಂದಿಗೆ ಕೋವಿಡ್ ಸೋಂಕು ದೃಢ: 100ಕ್ಕೇರಿದ ಒಟ್ಟು ಸಾವಿನ ಸಂಖ್ಯೆ

06:25 PM Oct 07, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ 99 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 116 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ 100ಕ್ಕೇರಿದೆ.

Advertisement

ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ 55 ವರ್ಷದ ವ್ಯಕ್ತಿ ಅ.5ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಅ.6ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಒಟ್ಟು 4647 ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದರಲ್ಲಿ 3765 ಮಂದಿ ಗುಣಮುಖರಾಗಿದ್ದಾರೆ. 782 ಸಕ್ರಿಯ ಪ್ರಕರಣಗಳಿವೆ. 100 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 38 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 315 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಬುಧವಾರ ಒಟ್ಟು 1147 ಮಾದರಿಗಳನ್ನು ಪರೀಕ್ಷಿಸಲಾಗಿತ್ತು.

ಇದನ್ನೂ ಓದಿ:ಸಾರಿಗೆ ಬಸ್ಸುಗಳಲ್ಲಿ ಅಪಘಾತ ಮುನ್ಸೂಚನೆಗೆ ಆಧುನಿಕ ವ್ಯವಸ್ಥೆ ಜಾರಿ: ಡಿಸಿಎಂ ಸವದಿ

ಇಂದಿನ ಪ್ರಕರಣಗಳು: 99
ಇಂದು ಗುಣಮುಖ: 116
ಒಟ್ಟು ಗುಣಮುಖ: 3765
ಇಂದಿನ ಸಾವು: 01
ಒಟ್ಟು ಸಾವು: 100
ಸಕ್ರಿಯ ಪ್ರಕರಣಗಳು: 782
ಒಟ್ಟು ಸೋಂಕಿತರು: 4647

Advertisement
Advertisement

Udayavani is now on Telegram. Click here to join our channel and stay updated with the latest news.

Next