ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್19 ನಿಂದ ಶನಿವಾರ ಮೂವರು ಮೃತಪಟ್ಟಿದ್ದಾರೆ. 38 ಮಂದಿಗೆ ಸೋಂಕು ದೃಢಪಟ್ಟಿದೆ. 27 ಮಂದಿ ಗುಣಮುಖರಾಗಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ 70 ವರ್ಷದ ವೃದ್ಧರು, ಚಾಮರಾಜನಗರ ಸಮೀಪದ ಮೂಡ್ಲುಪುರ ಗ್ರಾಮದ 60 ವರ್ಷದ ವೃದ್ಧರು ಹಾಗೂ ಕೊಳ್ಳೇಗಾಲ ತಾಲೂಕಿನ ಹೊಸೂರು ಗ್ರಾಮದ 70 ವರ್ಷದ ವೃದ್ಧರು ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 2619 ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ 2048 ಮಂದಿ ಗುಣಮುಖರಾಗಿದ್ದಾರೆ. 518 ಸಕ್ರಿಯ ಪ್ರಕರಣಗಳಿವೆ. ಒಟ್ಟು 53 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 12 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 149 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.
1225ರಲ್ಲಿ 38 ಪ್ರಕರಣಗಳಷ್ಟೇ ಪಾಸಿಟಿವ್: ಶನಿವಾರ ಒಟ್ಟು 1225 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ದಿನವೊಂದರಲ್ಲಿ ಒಂದು ಸಾವಿರಕ್ಕೂ ಮೀರಿ ಮಾದರಿಗಳ ಪರೀಕ್ಷೆ ನಡೆದಿರುವುದು ಇದೇ ಪ್ರಥಮ. ಇಷ್ಟೊಂದು ಪರೀಕ್ಷೆಗಳಾಗಿಯೂ 38 ಪ್ರಕರಣಗಳಷ್ಟೇ ಪಾಸಿಟಿವ್ ಆಗಿರುವುದು ವಿಶೇಷ. 1188 ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿದೆ.
ಚಾಮರಾಜನಗರ ತಾಲೂಕಿನಿಂದ 20, ಕೊಳ್ಳೇಗಾಲ ತಾಲೂಕಿನಿಂದ 11, ಗುಂಡ್ಲುಪೇಟೆ ತಾಲೂಕಿನಿಂದ 07 ಪ್ರಕರಣಗಳು ವರದಿಯಾಗಿವೆ. ಯಳಂದೂರು ಮತ್ತು ಹನೂರು ತಾಲೂಕಿನಿಂದ ಯಾವುದೇ ಪ್ರಕರಣ ವರದಿಯಾಗಿಲ್ಲ.
ಇಂದಿನ ಪ್ರಕರಣಗಳು –
38
ಇಂದು ಗುಣಮುಖ –
27
ಒಟ್ಟು ಗುಣಮುಖ –
2048
ಇಂದಿನ ಸಾವು –
03
ಒಟ್ಟು ಸಾವು –
53
ಸಕ್ರಿಯ ಪ್ರಕರಣಗಳು –
518
ಒಟ್ಟು ಸೋಂಕಿತರು –
2619