Advertisement
ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರಮಹಾಸ್ವಾಮೀಜಿ ಅವರು ಆನ್‌ಲೈನ್ ಮೂಲಕ ಕಾರ್ಯಕ್ರಮದ ಉದ್ಘಾಟಿಸಿ ಆಶೀರ್ವಚನ ನೀಡಿದರು. 9 ಕೋಟಿ ರೂ.ವೆಚ್ಚದ ತೆಂಗು ಸಂಸ್ಕರಣ ಘಟಕ ಉದ್ಘಾಟಿಸಿ ಮಾತನಾಡಿದ ಸಚಿವ ಎಸ್. ಸುರೇಶ್‌ಕುಮಾರ್, ಘಟಕವು ರೈತರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನಾವು ಎಲ್ಲರಿಗಾಗಿ ಎಲ್ಲರೂ ನಮಗಾಗಿ ಎಂಬ ಸಹಕಾರ ತತ್ವವನ್ನು ಅನುಸರಿಸಿದಾಗ ಅಭಿವೃದ್ಧಿ ಸಾಧ್ಯ ಎಂದರು.
Related Articles
Advertisement
ಸುವರ್ಣ ಕಲ್ಪತರು ಬ್ರಾಂಡ್ ನೇಮ್ : ಈ ತೆಂಗಿನ ಪುಡಿಗೆ ಸುವರ್ಣ ಕಲ್ಪತರು ಎಂಬ ಬ್ರಾಂಡ್ ನೇಮ್ ನೀಡಲಾಗಿದೆ. ಈಗಾಗಲೇ ಎಫ್ಎಸ್‌ಎಸ್‌ಎಐ ಪ್ರಮಾಣ ಪಡೆದಿದೆ. 1 ಕೆ.ಜಿ. ಪ್ಯಾಕ್‌ಗೆ225 ರೂ. ಹಾಗೂ ಅರ್ಧ ಕೆ.ಜಿ. ಪ್ಯಾಕ್‌ಗೆ 120 ರೂ. ದರ ನಿಗದಿ ಮಾಡಲಾಗಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಮಹೇಶ ಪ್ರಭು,ಪ್ಲಾಂಟ್‌ಎಂಜಿನಿಯರ್‌ಚಂದ್ರಶೇಖರ್ ತಿಳಿಸಿದರು. ತೆಂಗಿನಕಾಯಿ ಪುಡಿಯನ್ನು ಬಿಸ್ಕೆಟ್ ಕಾರ್ಖಾನೆಗಳು, ಬೇಕರಿಗಳು, ಗೃಹೋಪಯೋಗಿ ರೀಟೇಲ್‌ಗೆ ಸಗಟು ಮಾರಾಟ ಮಾಡಲಾಗುತ್ತದೆ. ರೀಟೇಲ್ ಪ್ಯಾಕನ್ನು ಮಾಲ್‌ಗಳಿಗೆ, ದಿನಸಿ ಅಂಗಡಿಗಳಿಗೆ, ಇ ಕಾಮರ್ಸ್ ಗೆ ಮಾರಾಟಕ್ಕೆ ನೀಡಲಾಗುತ್ತದೆ. ಈ ತೆಂಗಿನಪುಡಿಯನ್ನು ಐಸ್‌ಕ್ರೀಂ, ಬಿಸ್ಕೆಟ್ಸ್, ಚಾಕಲೇಟ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಚಟ್ನಿ ಪುಡಿ, ಕುಕೀಸ್ ಗಳಲ್ಲಿ ಬಳಸುತ್ತಾರೆ. ಬೇಕರಿ ಪದಾರ್ಥಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ತೆಂಗಿನ ಪುಡಿ ತಯಾರಿಕೆ ಹೇಗೆ? : ತೆಂಗು ಸಂಸ್ಕರಣಾ ಘಟಕದಲ್ಲಿ ತೆಂಗಿನ ಕಾಯಿಯಿಂದ ತೆಂಗಿನಪುಡಿಯನ್ನು ತಯಾರಿಸಿ ಮಾರುಕಟ್ಟೆಗೆಕಳುಹಿಸಲಾಗುತ್ತದೆ.ರೈತರು ಸಿಪ್ಪೆ ಸುಲಿದು ಘಟಕಕ್ಕೆ ಜುಟ್ಟು ರಹಿತ ತೆಂಗಿನಕಾಯಿ ಮಾರುತ್ತಾರೆ. ಅದನ್ನು ವೇಬ್ರಿಜ್‌ನಲ್ಲಿ ತೂಕ ಮಾಡಲಾಗುತ್ತದೆ. ಬಲಿತ ಕಾಯಿಯನ್ನುಕೊಳ್ಳಲಾಗುತ್ತದೆ. ಎಳಸುಇದ್ದರೆ ವಾಪಸ್ ನೀಡಲಾಗುತ್ತದೆ. ಈ ತೆಂಗಿನಕಾಯಿಯನ್ನುಕನಿಷ್ಠ5 ರಿಂದ 7 ದಿನ ಸಂಗ್ರಹಿಸಲಾಗುತ್ತದೆ. ಯಂತ್ರದ ಸಹಾಯದಿಂದಕರಟ ತೆಗೆಯಲಾಗುತ್ತದೆ. ಚಾಕುವಿನಿಂದಕಂದು ಬಣ್ಣದ ಟೆಸ್ಟಾ (ಸಿಪ್ಪೆ)ತೆಗೆಯಲಾಗುತ್ತದೆ. ಬಳಿಕಕಾಯಿಯನ್ನು ತಣ್ಣೀರಿನಲ್ಲಿ ಸ್ವಚ್ಛಗೊಳಿಸಲಾಗುವುದು. ಕೊಳೆತಕಾಯಿಯಿದ್ದರೆ ತೆಗೆಯಲಾಗುವುದು.ಮಷಿನ್‌ನಲ್ಲಿ ಬಳಿಕ ತುಂಡು ತುಂಡು ಮಾಡಲಾಗುತ್ತದೆ. ಮತ್ತೆ ಸ್ವಚ್ಛಗೊಳಿಸ ಲಾಗುವುದು. ಪಿನ್‌ಮಿಲ್‌ನಲ್ಲಿಕಾಯಿಯನ್ನು ಹಸಿ ತುರಿ ಮಾಡಲಾಗುತ್ತದೆ. ಹಸಿ ತುರಿ ಡ್ರೈಯರ್‌ಗೆ ಹೋಗುತ್ತದೆ. ಡ್ರೈಯರ್‌ನಿಂದ ತೇವಾಂಶ ತೆಗೆಯಲಾಗುತ್ತದೆ. ಅದು ಒಣತುರಿ ಮಾಡುತ್ತದೆ. ಈ ಒಣತುರಿಯನ್ನು ಮತ್ತೆ ಬೇಕಾದ ಆಕಾರಕ್ಕೆ ಗ್ರೇಡಿಂಗ್ ಮಾಡಲಾಗುತ್ತದೆ. ನಂತರ25ಕೆ.ಜಿ. ಪ್ಯಾಕ್‌ಮಾಡಲಾಗುವುದು.1 ಕೆ.ಜಿ., ಅರ್ಧ ಕೆ.ಜಿ. ಪ್ಯಾಕ್ ಮಾಡಲಾಗುವುದು. ಈ ಪುಡಿಯನ್ನು 6 ತಿಂಗಳಕಾಲ ಬಳಸಬಹುದು.