ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 44 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 17 ಮಂದಿ ಗುಣಮುಖರಾಗಿದ್ದಾರೆ. ಓರ್ವ ವೃದ್ಧರು ಮೃತಪಟ್ಟಿದ್ದಾರೆ.
ಗುಂಡ್ಲುಪೇಟೆ ತಾಲೂಕಿನಿಂದ 14, ಚಾಮರಾಜನಗರ ತಾಲೂಕಿನಿಂದ 12, ಕೊಳ್ಳೇಗಾಲ ತಾಲೂಕಿನಿಂದ 16 ಮತ್ತು ಯಳಂದೂರು ತಾಲೂಕಿನಿಂದ 02 ಪ್ರಕರಣಗಳು ವರದಿಯಾಗಿವೆ.
ಕೊಳ್ಳೇಗಾಲ ಪಟ್ಟಣದ 79 ವರ್ಷದ ವೃದ್ಧರು ಸೆ.9ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸೆ.11ರಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಪ್ರಸ್ತುತ 551 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೆ 2879 ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ 2268 ಮಂದಿ ಗುಣಮುಖರಾಗಿದ್ದಾರೆ. 61 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಐಸಿಯುನಲ್ಲಿ 32 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 162 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.
ಇಂದಿನ ಪ್ರಕರಣಗಳು-44
ಇಂದು ಗುಣಮುಖ-17
ಒಟ್ಟು ಗುಣಮುಖ-2268
ಇಂದಿನ ಸಾವು-01
ಒಟ್ಟು ಸಾವು-61
ಸಕ್ರಿಯ ಪ್ರಕರಣಗಳು-551
ಒಟ್ಟು ಸೋಂಕಿತರು-2879