ಹುಬ್ಬಳ್ಳಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್‌ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದ ಕಿಚ್ಚ ಸುದೀಪ್ ಕೊನೆಗೂ ಮಂಗಳವಾರ ಮೌನ ಮುರಿದ್ದಿದ್ದು, ತೀಕ್ಷ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರು ಸುತ್ತುವರಿದು ದರ್ಶನ್ ಟ್ವೀಟ್ ಬಗ್ಗೆ ಪ್ರಶ್ನಿಸಿದಾಗ “I would respect.If he respect me” ನನಗೆ ಮಾರ್ಯಾದೆ ನೀಡಿದರೆ ನಾನೂ ಮರ್ಯಾದೆ ಕೊಡ್ತೇನೆ.ಎಂದು ಒಂದೇ ವಾಕ್ಯದಲ್ಲಿ ಉತ್ತರ ನೀಡಿರುವುದಾಗಿ ವರದಿಯಾಗಿದೆ.
“ನಾವಿಬ್ಬರು ಇನ್ನು ಮುಂದೆ ಸ್ನೇಹಿತರಲ್ಲ, ಒಂದೇ ಚಿತ್ರರಂಗದಲ್ಲಿ ಕೆಲಸಮಾಡುವ ಇಬ್ಬರು ನಟರು ಅಷ್ಟೇ . ಎಂದು ದರ್ಶನ್ ಸುದೀಪ್ ವಿರುದ್ಧ ಟ್ವೀಟ್ ಮಾಡಿದ್ದರು. ಆ ಬಳಿಕ ಮಾಧ್ಯಮಗಳಲ್ಲಿ , ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಯಾಗಿತ್ತು.