Advertisement

Fitness Challenge : ಕೊಹ್ಲಿ ಸವಾಲು ಸ್ವೀಕರಿಸಿದ ಪ್ರಧಾನಿ ಮೋದಿ! 

12:31 PM May 24, 2018 | Team Udayavani |

ಹೊಸದಿಲ್ಲಿ: ‘ಹಮ್‌ ಫಿಟ್‌ ತೋ ಇಂಡಿಯಾ ಫಿಟ್‌’ ಎಂಬ ಧ್ಯೇಯ ವಾಕ್ಯದಡಿ ಕೇಂದ್ರ ಕೇಂದ್ರ ಮಾಹಿತ ತಂತ್ರಜ್ಞಾನ , ಯುವಜನ ಮತ್ತು ಕ್ರೀಡಾಸಚಿವ ರಾಜ್ಯವರ್ಧನ ಸಿಂಗ್‌ ರಾಠೋಡ್‌ ಅವರ ಫಿಟ್‌ನೆಸ್‌ ಚಾಲೆಂಜ್‌ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ. 

Advertisement

ಪ್ರಧಾನಿ ನರೆಂದ್ರ ಮೋದಿ ಅವರು ಗುರುವಾರ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಸವಾಲನ್ನು ಸ್ವೀಕರಿಸಿದ್ದು ಶೀಘ್ರದಲ್ಲಿ ನನ್ನ ಫಿಟ್‌ನೆಸ್‌ ವಿಡಿಯೋವನ್ನು ಹಂಚಿಕೊಳ್ಳುತ್ತೇನೆ ಎಂದಿದ್ದಾರೆ. 

ಸಚಿವ ರಾಠೊಡ್‌ ಅವರು ಕೊಹ್ಲಿ, ನಟ ಹೃತಿಕ್‌ ರೋಷನ್‌ ಮತ್ತು ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹವಾಲ್‌ ಅವರಿಗೆ ಸವಾಲು ಹಾಕಿದ್ದರು. 

ಸವಾಲು ಸ್ವೀಕರಿಸಿದ್ದ ಕೊಹ್ಲಿ ಮುಂದುವರಿದು ಕ್ರಿಕೆಟಿಗ ಧೋನಿ, ಪ್ರಧಾನಿ ಮೋದಿ ಮತ್ತು ಪತ್ನಿ ಅನುಷ್ಕಾಗೆ ಸವಾಲು ಹಾಕಿದ್ದರು. 

ಪ್ರಧಾನಿ ಅವರು ಸವಾಲು ಸ್ವೀಕರಿಸಿದ ಬೆನ್ನಲ್ಲೇ  ಸಚಿವ ರಾಠೋಡ್‌ ಅವರು ಟ್ವೀಟ್‌ ಮಾಡಿ ಸೂಪರ್‌..ಪ್ರಧಾನಿ ಕೊಹ್ಲಿ ಅವರ ಸವಾಲು ಸ್ವೀಕರಿಸಿದ್ದಾರೆ. ಇದು ಇಂಡಿಯಾ ಫಿಟ್‌ ಎನ್ನುವ ಕುರಿತು  ಪ್ರಧಾನಿಯವರ ನಂಬಿಕೆ ಎಂದು ಬರೆದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next