Advertisement
ಮಂಗಳವಾರ ಆಸ್ಪತ್ರೆಯ ಸಭಾಂಗಣದಲ್ಲಿ ಕೇಕ್ ಕತ್ತರಿಸುವ ಮೂಲಕ ಶುಶ್ರೂಷಕಿಯರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಶುಶ್ರೂಷಕಿಯರು ಪ್ರಾಮಾಣಿಕತೆಯಿಂದ ರೋಗಿಗಳ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ವೈದ್ಯರು ಕೇವಲ ರೋಗಿಗಳಿಗೆ ಅವರ ರೋಗದ ಬಗ್ಗೆ ಮಾಹಿತಿ ನೀಡಿ ಔಷಧ ನೀಡುತ್ತಾರೆ. ಆದರೆ ಶುಶ್ರೂಷಕಿಯರು ಹಾಗಲ್ಲ. ಔಷಧ ಸೇವಿಸುವ ಸಮಯ ಮತ್ತು ವಿಧಾನವನ್ನು ತಿಳಿಸುವುದಲ್ಲದೆ ಎಚ್ಚರಿಕೆಯಿಂದ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಾರೆ ಎಂದು ಶ್ಲಾಘಿಸಿದರು. ಮಕ್ಕಳ ತಜ್ಞ ಡಾ| ಜಿ. ತಿಪ್ಪೇಸ್ವಾಮಿ ಮಾತನಾಡಿ, ಶುಶ್ರೂಷಕಿಯರು ಆರೋಗ್ಯ ಇಲಾಖೆಯ ಅವಿಭಾಜ್ಯ ಅಂಗ. ಕೇವಲ ರೋಗಿಗಳ ಯೋಗಕ್ಷೇಮವಲ್ಲದೆ ವೈದ್ಯರ ಮಾರ್ಗದರ್ಶನವನ್ನೂ ಪಾಲಿಸಬೇಕಾಗುತ್ತದೆ. ಎಂತಹ ಸಂದರ್ಭದಲ್ಲೂ ವಿಚಲಿತರಾಗದೆ ರೋಗಿಗಳಿಗೆ ಧೈರ್ಯ ತುಂಬುತ್ತಾರೆ ಎಂದರು.
Advertisement
ಶುಶ್ರೂಷಕಿಯರ ಪಾತ್ರ ಮಹತ್ವದ್ದು: ಡಾ|ಬಸವರಾಜು
06:15 PM May 13, 2020 | Team Udayavani |