Advertisement

Chaitra Kundapur ಪ್ರಕರಣ; ಸಾಲುಮರದ ತಿಮ್ಮಕ್ಕನ ಸರಕಾರಿ ಕಾರು ದುರ್ಬಳಕೆ?

11:38 PM Sep 17, 2023 | Team Udayavani |

ಬೆಂಗಳೂರು/ ಬೇಲೂರು: ಉದ್ಯಮಿಗೆ 5 ಕೋಟಿ ರೂ. ವಂಚಿಸಿದ ಆರೋಪ ಹೊತ್ತಿರುವ ಚೈತ್ರಾ ಕುಂದಾಪುರ, ಸಾಲುಮರದ ತಿಮ್ಮಕ್ಕರಿಗೆ ನೀಡಿದ ಸಚಿವ ದರ್ಜೆ ಸ್ಥಾನಮಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

Advertisement

ಬಿಜೆಪಿ ಕೇಂದ್ರ ಚುನಾವಣ ಸಮಿತಿ ಸದಸ್ಯನ ಪಾತ್ರ ಮಾಡಿದ್ದ ಚನ್ನಾ ನಾಯ್ಕ ಬಳಸಿದ್ದ ಕಾರು ಸಾಲುಮರದ ತಿಮ್ಮಕ್ಕನಿಗೆ ಸೇರಿದ್ದು ಎಂದು ಹೇಳಲಾಗಿದೆ. ಕುಮಾರಕೃಪಾ ಗೆಸ್ಟ್‌ ಹೌಸ್‌ಗೆ ಪ್ರವೇಶಿಸಲು ತಿಮ್ಮಕ್ಕ ಅವರ ಕಾರು ಬಳಸಲಾಗಿದೆ ಹಾಗೂ ದೂರುದಾರ ಗೋವಿಂದ ಬಾಬು ಪೂಜಾರಿಯನ್ನು ನಂಬಿಸಲೂ ಈ ಕೆಲಸ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಆರೋಪಿ ಗಗನ್‌ ಕಡೂರು ಹಾಗೂ ಸಾಲುಮರದ ತಿಮ್ಮಕ್ಕನ ಪುತ್ರ ಉಮೇಶ್‌ ಆತ್ಮೀಯರಾಗಿದ್ದರು. ಉಮೇಶ್‌ ಸಾಲುಮರದ ತಿಮ್ಮಕ್ಕನ ಜತೆ ಗಗನ್‌ ಕಡೂರು ಮದುವೆಗೆ ಹೋಗಿದ್ದರು. ಹೀಗಾಗಿ ಉಮೇಶ್‌ ಜತೆಗಿನ ಸ್ನೇಹವನ್ನು ಗಗನ್‌ ದುರ್ಬಳಕೆ ಮಾಡಿಕೊಂಡಿದ್ದಾನೆ. ವಿಧಾನಸೌಧದಲ್ಲಿ ತಿಮ್ಮಕ್ಕರಿಗೆ ನೀಡಿರುವ ಕೊಠಡಿಯ ನವೀಕರಣದ ಜವಾಬ್ದಾರಿಯನ್ನು ಗಗನ್‌ ಕಡೂರು ಹೊತ್ತುಕೊಂಡಿದ್ದ ಎಂದೂ ಹೇಳಲಾಗುತ್ತಿದೆ. ಆದರೆ ಅದನ್ನು ತಿಮ್ಮಕ್ಕರ ದತ್ತುಪುತ್ರ ಉಮೇಶ್‌ ಅವರು ತಳ್ಳಿ ಹಾಕಿದ್ದಾರೆ.

ನಮಗೆ ಸಂಬಂಧ ಇಲ್ಲ: ತಿಮ್ಮಕ್ಕ
ಈ ಬೆನ್ನಲ್ಲೇ ಸಾಲುಮರದ ತಿಮ್ಮಕ್ಕ ಹಾಸನದ ಬೇಲೂರಿನ ಬಳ್ಳೂರಿನಲ್ಲಿ ದತ್ತುಪುತ್ರ ಉಮೇಶ್‌ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ, ಗೋವಿಂದ ಬಾಬು ಪೂಜಾರಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಗಗನ್‌ ಕಡೂರು ಮತ್ತು ನಮಗೆ ಯಾವುದೇ ಸಂಬಂಧವಿಲ್ಲ. ಟೀವಿಯಲ್ಲಿ ನಮ್ಮ ಬಗ್ಗೆ ಏನೇನೋ ಬರುತ್ತಿದೆ. ನಾವು ಗಿಡ ನೆಡುತ್ತಾ, ಹೇಗೋ ಜೀವನ ನಡೆಸುತ್ತಿದ್ದೇವೆ. ಸರಕಾರಕ್ಕೆ ಹೆದರಿ ಬದುಕುವ ಜನ ಎಂದು ಹೇಳಿದರು.
ಉಮೇಶ್‌ ಮಾತನಾಡಿ, ನಾವು ಗಗನ್‌ ಕಡೂರು ಮದುವೆಗೆ ಹೋಗಿದ್ದು ನಿಜ. ಅವರು ಭಾರತೀಯ ಅಯ್ಯಪ್ಪ ಸೇವಾ ಸಮಿತಿ ಸದಸ್ಯರಾಗಿದ್ದು, ನಾನು ಅದರ ಅಧ್ಯಕ್ಷ. ಗಗನ್‌, ತಿಮ್ಮಕ್ಕ ಅವರ ಕಾರು ದುರ್ಬಳಕೆ ಮಾಡಿಕೊಂಡಿರುವ, ವಿಧಾನಸೌಧದ ಕೊಠಡಿಯನ್ನು ನವೀಕರಿಸಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಪರಿಶೀಲಿಸಿ ಸುದ್ದಿ ಮಾಡಬೇಕು. ಅದು ಸತ್ಯಕ್ಕೆ ದೂರವಾಗಿದೆ ಎಂದರು.

ದೇಶದಲ್ಲಿ ತಿಮ್ಮಕ್ಕ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಹೀಗಾಗಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ, ಮದುವೆಗೆ ಕರೆಯುತ್ತಾರೆ. ಪ್ರೀತಿಯಿಂದ ಕರೆದಾಗ ಹೋಗ ಬೇಕಾಗುತ್ತದೆ. ಅದೇ ರೀತಿ ಗಗನ್‌ ಮದುವೆಗೂ ಹೋಗಿದ್ದೇವೆ ಅಷ್ಟೆ. ಅವರು ತಪ್ಪು ಮಾಡಿದ್ದರೆ ಶಿಕ್ಷೆ ಯಾಗಲಿ. ಅದರಲ್ಲಿ ನಮ್ಮ ಹೆಸರು ಪ್ರಸ್ತಾವಿಸಿರುವುದು ಬಹಳ ತಪ್ಪು ಎಂದು ಹೇಳಿದರು.

Advertisement

ಇನ್ನು ತಿಮ್ಮಕ್ಕ ಅವರ ಕೊಠಡಿಯನ್ನು ನವೀಕರಣ ಮಾಡಲು ಗಗನ್‌ ಯಾರು? ಕೊಠಡಿಯನ್ನು ಸರಕಾರ ನವೀಕರಿಸಿ ಕೊಡುತ್ತದೆ. ಗಗನ್‌ ತಿಮ್ಮಕ್ಕ ಅವರ ಕಾರನ್ನು ಬಳಸಿದ್ದರೆ ಅದಕ್ಕೆ ದಾಖಲೆ ಕೊಡಿ. ನಾವು ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಹೊರತು ಸಮಾಜಕ್ಕೆ ದ್ರೋಹ, ಅಘಾತವಾಗುವಂತಹ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next