ಕನ್ನಡ ಚಿತ್ರರಂಗದಲ್ಲಿ ಹೊಸಥರದ ಸಿನಿಮಾಗಳು ಮತ್ತು ಬೋಲ್ಡ್ ಎನಿಸುವಂಥ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ನಟಿ ಚೈತ್ರಾ ಜೆ. ಆಚಾರ್ (Chaithra J Achar). ಸದ್ಯ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ಚೈತ್ರಾ ಜೆ. ಆಚಾರ್ ಈಗ ಕನ್ನಡದ ಜೊತೆಗೆ ತಮಿಳು ಚಿತ್ರರಂಗದಲ್ಲೂ ಬಿಝಿಯಾಗುವ ಲಕ್ಷಣ ತೋರುತ್ತಿದ್ದಾರೆ.
ಇತ್ತೀಚೆಗಷ್ಟೇ ತಮಿಳಿನ ಶಶಿಕುಮಾರ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಚೈತ್ರಾಗೆ ಈಗ ಮತ್ತೂಂದು ಬಿಗ್ ಆಫರ್ ತಮಿಳಿನಿಂದಲೇ ಸಿಕ್ಕಿದೆ. ಅದು ತಮಿಳು ನಟ ಸಿದ್ಧಾರ್ಥ್ (Siddharth) ನಾಯಕರಾಗಿರುವ ಸಿನಿಮಾ. ಸಿದ್ಧಾರ್ಥ್ ಅವರ 40ನೇ ಸಿನಿಮಾಕ್ಕೆ ಚೈತ್ರಾ ನಾಯಕಿಯಾಗಿದ್ದಾರೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.
ರಾಜ್ ಬಿ ಶೆಟ್ಟಿಯ “ಟೋಬಿ’ ಸಿನಿಮಾದಲ್ಲಿ ಚೈತ್ರಾ ಮಾಡಿದ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. “ಟೋಬಿ’ ಮತ್ತು “ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗಳ ನಂತರ ಈಗ ಒಂದರ ಹಿಂದೊಂದು ಒಳ್ಳೆಯ ಪಾತ್ರಗಳು ಮತ್ತು ಸಿನಿಮಾಗಳು ಕೂಡ ನನ್ನನ್ನು ಹುಡುಕಿಕೊಂಡು ಬರುತ್ತಿದೆ. ಇತ್ತೀಚೆಗೆ ನಾನು ಅಭಿನಯಿಸಿದ್ದ “ಬ್ಲಿಂಕ್’ ಸಿನಿಮಾಕ್ಕೆ ಕೂಡ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ನಟಿಯಾಗಿ ನನ್ನನ್ನು ಪ್ರೇಕ್ಷಕರು ಗುರುತಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನನ್ನ ಕೆಲಸ ನನಗೆ ಒಳ್ಳೆಯ ಹೆಸರು, ಐಡೆಂಟಿಟಿ ಎರಡನ್ನೂ ತಂದುಕೊಡುತ್ತಿದೆ. ಮುಂದೆ ಇನ್ನಷ್ಟು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡು, ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಎಂಬ ಜವಾಬ್ದಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ಚೈತ್ರಾ