Advertisement

ಸುರಕ್ಷತಾ ಪರೀಕ್ಷೆ ಗೆ ಕೃತಕ ಕಾಲುಗಳನ್ನು ತೆಗೆಯಬೇಕಿಲ್ಲ

09:30 AM Oct 14, 2017 | Karthik A |

ಹೊಸದಿಲ್ಲಿ: ಅಂಗವಿಕಲರಿಗೆ ರಿಲೀಫ್ ನೀಡುವ ಕ್ರಮವೊಂದರಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್), ಕೃತಕ ಕಾಲುಗಳನ್ನು ಹೊಂದಿದವರು ಪರೀಕ್ಷೆಗೆ ಅವುಗಳನ್ನು ಬಿಚ್ಚಿ ತಪಾಸಣೆಗೆ ಒಳಪಡಬೇಕಿಲ್ಲ ಎಂದು ಹೇಳಿದೆ.

Advertisement

ಈವರೆಗೆ ಸುರಕ್ಷತಾ ಪರೀಕ್ಷೆ ವೇಳೆ ಕೃತಕ ಕಾಲು ತೆಗೆದು ಎಕ್ಸ್‌ ರೇ ಮಶೀನ್‌ನೊಳಗೆ ಹಾಕುವಂತೆ ಹೇಳಲಾಗುತ್ತಿತ್ತು. ಅಲ್ಲದೇ ವೀಲ್‌ ಚೇರ್‌ಗಳನ್ನೂ ಎಕ್ಸ್‌ ರೇಯಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. ಇದು ಅಂಗವಿಕಲರಿಗೆ ಅವಮಾನ ಮಾಡುವಂತಿದ್ದು, ಇದರ ವಿರುದ್ಧ ಆಕ್ಷೇಪಗಳು ವ್ಯಕ್ತವಾಗಿದ್ದವು. ಇನ್ನು ಮುಂದೆ ಈ ಕ್ರಮ ಕೈಬಿಡಲು ನಿರ್ಧರಿಸಲಾಗಿದೆ. ಬದಲಿಗೆ ಕೈನಲ್ಲೇ ಹಿಡಿವ ಸ್ಫೋಟಕ ಪತ್ತೆ ಸಾಧನ (ಇಟಿಡಿ) ಮೂಲಕ ಅಪರೂಪದ ಪ್ರಕರಣಗಳಲ್ಲಿ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next