Advertisement

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಅವೈಜ್ಞಾನಿಕ 

12:30 AM Sep 29, 2018 | |

ಇತ್ತೀಚೆಗೆ ನಡೆದ ಎಲ್ಲ ಸ್ಥಳೀಯ ಚುನಾವಣೆಗಳು ಪಕ್ಷಾಧರಿತವಾಗಿಯೇ ನಡೆದಿದೆ ಮಾತ್ರವಲ್ಲ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳ ಸಂಖ್ಯಾ ಬಲವನ್ನು ಕೂಡಾ ಪಕ್ಷಾಧರಿತವಾಗಿಯೇ ಲೆಕ್ಕ ಹಾಕಿದ್ದೇವೆ. ಹಾಗೆನ್ನುವಾಗ ಚುನಾವಣೆ ಮುಗಿದ ನಂತರ ಅಧ್ಯಕ್ಷರ, ಉಪಾಧ್ಯಕ್ಷರ ಹುದ್ದೆಗಳನ್ನು ಮೀಸಲಾತಿ ಅನ್ವಯ ತುಂಬಿಸುವುದಾದರೆ ಈ ಸಂಖ್ಯಾಬಲದ ಲೆಕ್ಕಚಾರಗಳಿಗೆ ಎಲ್ಲಿದೆ ಗೌರವ? ಸ್ಥಳೀಯ ಸಂಸ್ಥೆಗಳ ಆಡಳಿತದ ಮುಖ್ಯ ಉದ್ದೇಶವೇ ಪಕ್ಷಾತೀತವಾಗಿ, ಸಹಕಾರಿ ತತ್ವದಲ್ಲಿ, ಸೌಹಾರ್ದತೆಯಲ್ಲಿ ಚುನಾವಣೆ ನಡೆದು, ಮೀಸಲಾತಿ ಅನ್ವಯ ಅಧ್ಯಕ್ಷರ, ಉಪಾಧ್ಯಕ್ಷರ ಸ್ಥಾನ ತುಂಬಬೇಕು ಅನ್ನುವುದು ಇದರ ಮೂಲ ಉದ್ದೇಶ. ಆದರೆ ಇಲ್ಲಿ ಇದಾವ ತತ್ವಗಳನ್ನು ನಾವು ಪಾಲಿಸಿಕೊಂಡು ಬಂದಿಲ್ಲ, ಬರುವುದಿಲ್ಲ.

Advertisement

ಸ್ಥಳೀಯ ಆಡಳಿತ ಸಂಸ್ಥೆಗಳಾದ ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌, ನಗರಸಭೆಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸುವಾಗ ಮೀಸಲಾತಿ ಅನ್ವಯಿಸುವುದು ತೀರಾ ಅಸಂಸದೀಯ, ಅವೈಜ್ಞಾನಿಕ ಕ್ರಮ. ಇಡೀ ದೇಶದ ಸರಕಾರಿ ವ್ಯವಸ್ಥೆಯನ್ನು ಸಂಸದೀಯ ಮಾದರಿಯಲ್ಲಿಯೇ ರೂಪಿಸಿರುವ ನಾವು ಸ್ಥಳೀಯ ಸಂಸ್ಥೆಗಳ ಮಟ್ಟಿಗೆ ಅಮೆರಿಕದ ಅಧ್ಯಕ್ಷೀಯ ಮಾದರಿಯನ್ನು ಅನುಸರಿಸುತ್ತಿದ್ದೇವೆ ಅನ್ನುವುದು ವೇದ್ಯವಾಗುತ್ತಿದೆ. 

ಇತ್ತೀಚೆಗೆ ನಡೆದ ಎಲ್ಲ ಸ್ಥಳೀಯ ಚುನಾವಣೆಗಳು ಪಕ್ಷಾಧರಿತವಾಗಿಯೇ ನಡೆದಿದೆ ಮಾತ್ರವಲ್ಲ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳ ಸಂಖ್ಯಾಬಲವನ್ನು ಕೂಡಾ ಪಕ್ಷಾಧರಿತವಾಗಿಯೇ ಲೆಕ್ಕ ಹಾಕಿದ್ದೇವೆ. ಹಾಗೆನ್ನುವಾಗ ಚುನಾವಣೆ ಮುಗಿದ ನಂತರ ಅಧ್ಯಕ್ಷರ, ಉಪಾಧ್ಯಕ್ಷರ ಹುದ್ದೆಗಳನ್ನು ಮೀಸಲಾತಿ ಅನ್ವಯ ತುಂಬಿಸುವುದಾದರೆ ಈ ಸಂಖ್ಯಾಬಲದ ಲೆಕ್ಕಚಾರಗಳಿಗೆ ಎಲ್ಲಿದೆ ಗೌರವ? ಸ್ಥಳೀಯ ಸಂಸ್ಥೆಗಳ ಆಡಳಿತದ ಮುಖ್ಯ ಉದ್ದೇಶವೇ ಪಕ್ಷಾತೀತವಾಗಿ, ಸಹಕಾರಿ ತತ್ವದಲ್ಲಿ, ಸೌಹಾರ್ದತೆಯಲ್ಲಿ ಚುನಾವಣೆ ನಡೆದು, ಮೀಸಲಾತಿ ಅನ್ವಯ ಅಧ್ಯಕ್ಷರ, ಉಪಾಧ್ಯಕ್ಷರ ಸ್ಥಾನ ತುಂಬಬೇಕು ಅನ್ನುವುದು ಇದರ ಮೂಲ ಉದ್ದೇಶ. ಆದರೆ ಇಲ್ಲಿ ಇದಾವ ತತ್ವಗಳನ್ನು ನಾವು ಪಾಲಿಸಿಕೊಂಡು ಬಂದಿಲ್ಲ, ಬರುವುದಿಲ್ಲ. ಹಾಗೆನ್ನುವಾಗ ಇಂತಹ ಸಂಘರ್ಷಪೂರ್ಣ ರಾಜಕೀಯ ಸ್ಥಿತಿಯಲ್ಲಿ ಸ್ಥಳೀಯ ಸಂಸ್ಥೆಗಳು ಆರೋಗ್ಯಪೂರ್ಣವಾಗಿ ಕೆಲಸ ನಿರ್ವಹಿಸಲು ಹೇಗೆ ಸಾಧ್ಯ?
ಇಂದು ಅದೆಷ್ಟೊ ಸ್ಥಳೀಯ ಸಂಸ್ಥೆಗಳಲ್ಲಿ ಬಹುಮತಗಳಿಸಿದ ಪಕ್ಷಗಳಿಗೆ ಅಧ್ಯಕ್ಷ ಸ್ಥಾನವೂ ಇಲ್ಲ, ಉಪಾಧ್ಯಕ್ಷರ ಸ್ಥಾನವೂ ಇಲ್ಲ. ಕೆಲವೇ ಸ್ಥಾನಗಳನ್ನು ಗಳಿಸಿರುವಂತಹ ಪಕ್ಷದ ಅಭ್ಯರ್ಥಿಗಳಿಗೆ ಈ ಸ್ಥಾನ ಲಭಿಸಿರುವ ಉದಾಹರಣೆಗಳು ಸಾಕಷ್ಟಿವೆ. ಈ ರೀತಿಯ ಮೀಸಲಾತಿ ಅನ್ವಯಿಸಿ ಅಧ್ಯಕ್ಷರನ್ನೋ, ಉಪಾಧ್ಯಕ್ಷರನ್ನೋ ಆಯ್ಕೆ ಮಾಡಿದಾಗ ಉಂಟಾಗುವ ಸಮಸ್ಯೆಗಳು ಹಲವಾರು. 

ಸಂಸದೀಯ ಸರಕಾರವೆಂದಾಗ ಬಹುಮತಗಳಿಸಿದ ಪಕ್ಷದವರೇ ಸರಕಾರ ರಚನೆ ಮಾಡಬೇಕು. ಅವರಲ್ಲಿಯೇ ಯಾರಾದರೊಬ್ಬರು ಪ್ರಧಾನಿಯೋ, ಮುಖ್ಯಮಂತ್ರಿಯಾಗಬೇಕು ಅನ್ನುವುದು ಸಂಸದೀಯ ಪದ್ಧತಿಯ ಸಾಮಾನ್ಯ ನಿಯಮ. ಇದರಿಂದಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸುಲಭವಾಗುತ್ತದೆ. ಆದರೆ ಇಲ್ಲಿನ ವಿಪರ್ಯಾಸವೆಂದರೆ ಕಡಿಮೆ ಸಂಖ್ಯೆಯನ್ನು ಹೊಂದಿರುವ ಪಕ್ಷದ ಪ್ರತಿನಿಧಿಗಳು ಸರಕಾರ ಕಟ್ಟುವುದು. ಬಹುಮತಗಳಿಸಿದ ಬಣದವರು ವಿಪಕ್ಷದಲ್ಲಿ ಕುಳಿತು ಕೊಳ್ಳುವುದು. ಈ ರೀತಿಯಲ್ಲಿ ರಚನೆಯಾದ ಅಧ್ಯಕ್ಷನಿಗೆ ಅಧಿಕಾರ ನಡೆದಲು ಸಾಧ್ಯವೇ? ಬಹುಮತದಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯಗಳ ಸ್ಥಿತಿಗತಿಯೇನು? ಮಾತ್ರವಲ್ಲ ಯಾವುದೇ ಅಭಿವೃದ್ಧಿ ಕಾರ್ಯತ್ವರಿತ ರೀತಿಯಲ್ಲಿ ನಡೆಸಲು ಸಾಧ್ಯವೇ? 

ಇಲ್ಲಿ ಹುಟ್ಟಿಕೊಳ್ಳುವ ಇನ್ನೊಂದು ಸೋಜಿಗದ ಪ್ರಶ್ನೆ ಅಂದರೆ ಯಾವುದೇ ಒಬ್ಬ ಅಧ್ಯಕ್ಷ/ಉಪಾಧ್ಯಕ್ಷ ಅಸಂವಿಧಾನಿಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ, ಆಡಳಿತ ನಡೆಸುವಲ್ಲಿ ಸಂಪೂರ್ಣ ಸೋತಿದ್ದಾನೆ ಅನ್ನುವುದು ಸಾಬೀತಾದರೂ ಕೂಡಾ ಅಂಥವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವೇ ಇಲ್ಲ. ಏಕೆಂದರೆ ಇಲ್ಲಿ ವಿಶ್ವಾಸ, ಅವಿಶ್ವಾಸದ ಪ್ರಶ್ನೆ ಹುಟ್ಟಿಕೊಳ್ಳುವುದೇ ಇಲ್ಲ. ತಾನು ಅಧಿಕಾರ ಸ್ವೀಕರಿಸಿರುವುದು ನಿಮ್ಮೆಲ್ಲರ ವಿಶ್ವಾಸಮತದಿಂದಲ್ಲ, ಬದಲಾಗಿ ಮೀಸಲಾತಿ ನಿಯಮದ ಪ್ರಕಾರ. ಹಾಗೆನ್ನುವಾಗ ಇಂತಹ ಅಧ್ಯಕ್ಷರನ್ನಾಗಲಿ, ಉಪಾಧ್ಯಕ್ಷರನ್ನಾಗಲಿ ಅಧಿಕಾರದಿಂದ ಕೆಳಗಿಳಿಸಲು ಹೇಗೆ ಸಾಧ್ಯ? ಇಂತಹ ಸಮಸ್ಯೆ ಈ ಹಿಂದೆ ಉಡುಪಿ ಜಿಲ್ಲಾ ವ್ಯಾಪ್ತಿಯ ಒಂದು ಗ್ರಾಮ ಪಂಚಾಯತ್‌ನಲ್ಲಿ ಎದುರಾಗಿತ್ತು. ಒಟ್ಟಿನಲ್ಲಿ ವಿಶ್ವಾಸ, ಅವಿಶ್ವಾಸ ಪ್ರಶ್ನೆ ಬಿಡಿ, ಎಲ್ಲಿಯವರೆಗೆ ಅಂದರೆ ಅಧ್ಯಕ್ಷನಾದವನಿಗೆ ಸರಿಯಾಗಿ ಶ್ವಾಸವೂ ತೆಗೆಯಲಾಗದ ಪರಿಸ್ಥಿತಿ ಇಂತಹ ಸ್ಥಳೀಯ ಸಂಸ್ಥೆಗಳಲ್ಲಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ. 

Advertisement

ಇಲ್ಲಿ ಹುಟ್ಟಿಕೊಳ್ಳುವ ಇನ್ನೊಂದು ಅವೈಜ್ಞಾನಿಕ ಅಂಶವೆಂದರೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ , ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ಚುನಾವಣಾ ಪೂರ್ವದಲ್ಲಿ ಪ್ರಕಟಿಸಬೇಕು. ಚುನಾವಣಾ ಫ‌ಲಿತಾಂಶ ಬಂದ ಮೇಲೆ ಪ್ರಕಟಿಸುವುದು ಅತ್ಯಂತ ಅಪಕ್ವವಾದ ತೀರ್ಮಾನ ಅನ್ನುವುದರಲ್ಲಿ ಎರಡು ಮಾತಿಲ್ಲ. ಆಡಳಿತರೂಢ ರಾಜ್ಯ ಸರಕಾರ ತನ್ನ ಲಾಭಕ್ಕಾಗಿ ಮೀಸಲಾತಿಯನ್ನು ಬದಲಾಯಿಸುವ, ಪ್ರಕಟಿಸುವ ಸಂದರ್ಭವೂ ಇದೆ. ಮಾತ್ರವಲ್ಲ ಇಂತಹ ಮೀಸಲಾತಿ ಘೋಷಣೆಯ ಮೇಲೆ ಜನರಿಗೆ ನಂಬಿಕೆ ಹುಟ್ಟಲು ಕಷ್ಟಸಾಧ್ಯ ಅನ್ನುವುದು ಇತ್ತೀಚಿನ ವಿದ್ಯಮಾನಗಳಿಂದ ಕಂಡುಬಂದಿದೆ. ಉಡುಪಿ ಜಿಲ್ಲಾ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಅತ್ಯಂತ ಪ್ರಸಿದ್ಧ ಗ್ರಾಮ ಪಂಚಾಯತ್‌ ಅಧ್ಯಕ್ಷರ ಮೀಸಲಾತಿ ಹಲವು ವರ್ಷಗಳಿಂದ ಬದಲಾಗದೇ ಇರುವುದನ್ನು ಗಮನಿಸಿದರೆ ಈ ಮೀಸಲಾತಿ ವ್ಯವಸ್ಥೆಯನ್ನು ಯಾವ ರೀತಿಯಲ್ಲಿ ಸರಕಾರ ನಿಯಂತ್ರಿಸಬಹುದು ಅನ್ನುವುದಕ್ಕೆ ಜೀವಂತ ನಿದರ್ಶನ ಕಾಣಸಿಗುತ್ತದೆ. 

ಅಂತೂ ಜನರ ಬಯಕೆ ಅಂದರೆ ಸದಸ್ಯರ ಆಯ್ಕೆಯಲ್ಲಿ ಮೀಸಲಾತಿ ಇರಲಿ ತೊಂದರೆ ಇಲ್ಲ, ಏಕೆಂದರೆ ಇಲ್ಲಿ ಎಲ್ಲ ವರ್ಗದವರಿಗೂ ರಾಜಕೀಯ ಅವಕಾಶ ಸಿಗುವುದಕ್ಕೆ ಪ್ರೇರಣೆಯಾಗುತ್ತದೆ. ಆದರೆ ಅಧ್ಯಕ್ಷರ, ಉಪಾಧ್ಯಕ್ಷರ ಹುದ್ದೆ ಚುನಾವಣಾ ನಂತರವೂ ಪ್ರತಿ ಸ್ಥಳೀಯ ಸಂಸ್ಥೆಗಳ ಸದನದಲ್ಲಿ ನಿರ್ಣಯಿಸಿ ಆಯ್ಕೆ ಮಾಡಿಕೊಳ್ಳುವುದು ಸಂಸದೀಯ ವ್ಯವಸ್ಥೆಯ ಆರೋಗ್ಯಪೂರ್ಣ ದೃಷ್ಟಿಯಿಂದ ಹೆಚ್ಚು ಹಿತಕರ. 

ಸಂವಿಧಾನಕ್ಕೆ 73ನೇ ಮತ್ತು 74ನೇ ತಿದ್ದುಪಡಿ ತರುವುದರ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡಿರುವುದರ ಹಿಂದಿರುವ ಆಶಯವೆಂದರೆ “ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರಜಾಪ್ರಭುತ್ವದ ತೊಟ್ಟಿಲು’ ಅನ್ನುವುದನ್ನು ನಾವು 
ಮರೆಯುವಂತಿಲ್ಲ. 

ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next