Advertisement

IPL 2024; ಹೊಸ ಭಾರತೀಯ ದಾಖಲೆ ಬರೆದ ಯುಜುವೇಂದ್ರ ಚಾಹಲ್

09:19 PM May 07, 2024 | Team Udayavani |

ಹೊಸದಿಲ್ಲಿ: ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್‌ನ ಯುಜುವೇಂದ್ರ ಚಾಹಲ್ ಹೊಸ ದಾಖಲೆ ಬರೆದಿದ್ದಾರೆ.

Advertisement

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಅವರ ವಿಕೆಟ್ ಪಡೆದ ಚಹಾಲ್ ಅವರು ಟಿ20 ಕ್ರಿಕೆಟ್ ನಲ್ಲಿ 350 ವಿಕೆಟ್‌ಗಳನ್ನು ಕಬಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅವರು ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್‌ ನಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಅತಿ ಹೆಚ್ಚು ಟಿ20 ವಿಕೆಟ್‌ ಪಡೆದ ಭಾರತೀಯರ ಪಟ್ಟಿಯಲ್ಲಿ ಪಿಯೂಷ್ ಚಾವ್ಲಾ (310) ಎರಡನೇ ಸ್ಥಾನದಲ್ಲಿದ್ದರೆ, ರವಿಚಂದ್ರನ್ ಅಶ್ವಿನ್ 303 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಚಹಾಲ್ ಐಪಿಎಲ್‌ ನಲ್ಲಿ 201 ವಿಕೆಟ್‌ಗಳನ್ನು ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 96 ವಿಕೆಟ್‌ಗಳನ್ನು ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next