Advertisement

ಡಬ್ಬಿಂಗ್‌ ಮುಗಿಸಿದ ಚಡ್ಡಿದೋಸ್ತ್ ಗಳು

03:58 PM Oct 23, 2020 | Suhan S |

“ಸೆವೆನ್‌ ರಾಜ್‌ ಆರ್ಟ್ಸ್’ ಬ್ಯಾನರ್‌ನಲ್ಲಿ ರೆಡ್‌ ಆ್ಯಂಡ್‌ ವೈಟ್‌ ಸೆವೆನ್‌ ರಾಜ್‌ ನಿರ್ಮಿಸುತ್ತಿರುವ, “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರದ ಡಬ್ಬಿಂಗ್‌ ಕೆಲಸ ಇತ್ತೀಚೆಗೆ ಪೂರ್ಣಗೊಂಡಿದೆ.

Advertisement

ಚಿತ್ರದಲ್ಲಿ ಆಸ್ಕರ್‌ ಕೃಷ್ಣ, ಲೋಕೇಂದ್ರ ಸೂರ್ಯ. ಮಲಯಾಳಿ ಚೆಲುವೆ ಗೌರಿ ನಾಯರ್‌, ಸೆವೆನ್‌ ರಾಜ್‌ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕೋವಿಡ್ ಲಾಕ್‌ಡೌನ್‌ ಸಡಿಲವಾಗುತ್ತಿದ್ದಂತೆ, ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದ ಚಿತ್ರತಂಡ ಆ ನಂತರ ಪೋಸ್ಟ್‌ ಪೊ›ಡಕ್ಷನ್‌ ಕೆಲಸಗಳಲ್ಲಿ ನಿರತವಾಗಿತ್ತು. ಸದ್ಯ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರದ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು, ಆದಷ್ಟು ಬೇಗ ಚಿತ್ರವನ್ನು ಸೆನ್ಸಾರ್‌ ಮುಂದೆ ಕಳುಹಿಸುವ ಯೋಚನೆಯಲ್ಲಿದೆ ಚಿತ್ರತಂಡ.

ಅನಂತ್‌ ಆರ್ಯನ್‌ ಸಂಗೀತ ಸಂಯೋಜನೆಯ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸುºಟ್ಟ’ ಚಿತ್ರದ ಹಾಡುಗಳಿಗೆ ರಾಜೇಶ್‌ ಕೃಷ್ಣನ್‌, ಅನುರಾಧ ಭಟ್‌ ಮೊದಲಾದ ಗಾಯಕರು ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಗಗನ್‌ ಕುಮಾರ್‌ ಛಾಯಾಗ್ರಹಣ, ಮರಿಸ್ವಾಮಿ ಸಂಕಲನವಿದೆ. ಅಕುಲ್‌ ನೃತ್ಯ ಹಾಗೂ ವೈಲೆಂಟು ಸಾಹಸ ನಿರ್ದೇಶನ ಮಾಡಿದ್ದಾರೆ. ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ವರ್ಷಾಂತ್ಯಕ್ಕೆ ಅಥವಾ ಹೊಸವರ್ಷಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next