Advertisement
ಚಳ್ಳಕೆರೆ ಗೋವಿಂದಪ್ಪ ಕೃಷ್ಣಸ್ವಾಮಿ ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿ ಅನನ್ಯ, ಅನುಪಮ ಸೇವೆ ಸಲ್ಲಿಸಿದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಒಳಗೊಂಡಂತೆ ಅನೇಕ ಕಲಾವಿದರನ್ನು ಬೆಳಕಿಗೆ ತಂದವರು ಎಂದರು. ಉತ್ತಮ ಶಿಕ್ಷಣ ಸಿಕ್ಕಾಗ ಸಾಧನೆಯ ಹಾದಿಯಲ್ಲಿ ಅತ್ಯುನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂಬುದಕ್ಕೆ ಸಿ.ಜಿ. ಕೃಷ್ಣಸ್ವಾಮಿ ಸಾಕ್ಷಿ.
Related Articles
Advertisement
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ ಟಿ.ಪಿ. ಕೈಲಾಸಂ ನೆನಪಿನ ರಂಗಮಂದಿರದಲ್ಲಿ ನಿರಂತರವಾಗಿ 150 ದಿನಗಳ ಕಾಲ ನಾಟಕ ಪ್ರದರ್ಶನ ನೀಡಿದ ಕೀರ್ತಿ ಸಿಜಿಕೆಗೆ ಸಲ್ಲುತ್ತದೆ. ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿ ಅದೊಂದು ಅಪೂರ್ವವಾದ ದಾಖಲೆ. ವೃತ್ತಿ ರಂಗಭೂಮಿಯಲ್ಲಿ 100, 150 ದಿನ ಮಾತ್ರವಲ್ಲ 1 ವರ್ಷದವರೆಗೆ ನಿರಂತರ ನಾಟಕ ಪ್ರದರ್ಶಿಸಿರುವ ನೂರಾರು ಉದಾಹರಣೆ ಇವೆ.
ಆದರೆ, ಅವು ಯಾವುವು ದಾಖಲೆ ಆಗುವುದೇ ಇಲ್ಲ ಎಂದು ವಿಷಾದಿಸಿದರು. ತಮ್ಮ ಸ್ವಂತ ಶಕ್ತಿಯಿಂದ ಬೆಳೆದ ಸಿಜಿಕೆ ರಂಗಭೂಮಿ ಬಗ್ಗೆ ಅಪಾರ ಭಕ್ತಿ ಮತ್ತು ಶ್ರದ್ಧೆ ಹೊಂದಿದ್ದರು. ಸಮಯಕ್ಕೆ ಅತಿ ಹೆಚ್ಚಿನ ಮಹತ್ವ ನೀಡುತ್ತಿದ್ದರು. ನಾಟಕ ನೋಡುವುದಕ್ಕೆ ಐದು ನಿಮಿಷ ತಡವಾಗಿ ಹೋಗಿದ್ದ ನನಗೆ ನಾಟಕ ನೋಡಲಿಕ್ಕೆ ಅವಕಾಶ ನೀಡರಲಿಲ್ಲ ಎಂದು ಸ್ಮರಿಸಿದರು.
ಸಿಜಿಕೆ ಕನ್ನಡ ನಾಡಿನಲ್ಲಿ ಬೀದಿನಾಟಕಗಳ ಇತಿಹಾಸಕ್ಕೆ ಮುನ್ನುಡಿ ಬರೆದವರು. ಅವರ ಬೆಲ್ಜಿ… ಬೀದಿನಾಟಕ ಪ್ರದರ್ಶನವಾಗದೇ ಇರುವ ಸ್ಥಳವೇ ಇಲ್ಲ. ಅಂತಹ ಮಹಾನ್ ಕಲಾವಿದನ ಸ್ಮರಣೆ ಮಾಡುವ ಜೊತೆಗೆಗ್ರಾಮೀಣ ಕಲಾವಿದರಿಗೆ ಪ್ರಶಸ್ತಿ ನೀಡುತ್ತಿರುವ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಕಾರ್ಯ ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.
ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರು ಬಸವಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಂಗಕರ್ಮಿ ಬಸವರಾಜ ಐರಣಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎನ್. ಶಿವಕುಮಾರ್, ಕೆ.ಎನ್. ಹನುಮಂತಪ್ಪ ಇತರರು ಇದ್ದರು. ಎ. ಸೂರೇಗೌಡರಿಗೆ ಸಿ.ಜಿ.ಕೆ., ಕೆ.ಎಂ. ಕೊಟ್ರಯ್ಯ ಅವರಿಗೆ ಗ್ರಾಮೀಣ ರಂಗಚೇತನ, ಕತ್ತಿಗೆ ಬಸಮ್ಮ ಅವರಿಗೆ ಜಾನಪದ ಹಿರಿಯಜ್ಜಿ, ಸ್ಫೂರ್ತಿ ಸಂಘದ ಎಂ. ಬಸವರಾಜ್‌ಗೆ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುಬಾನ್ ಎಚ್. ದಾಫ್, ಸದಾನಂದ್, ಎನ್. ಸೋಮಣ್ಣರನ್ನು ಸನ್ಮಾನಿಸಲಾಯಿತು. ಎನ್.ಎಸ್. ರಾಜು ಸ್ವಾಗತಿಸಿದರು. ಸಾರಥಿಯ ಬಿ. ಹನುಮಂತಾಚಾರಿ ಮತ್ತು ಸಂಗಡಿಗರು. ಕರಿಬಂಟನ ಕಾಳಗ… ಬಯಲಾಟ ಪ್ರದರ್ಶಿಸಿದರು.