Advertisement

 ಹೊಸತನ್ನು ಹೊತ್ತು ತಂದ ರಂಗೋತ್ಸವ

04:30 PM Apr 21, 2018 | Team Udayavani |

ಸಿ.ಜಿ.ಕೆ. ರಂಗೋತ್ಸವ ಅಂದ್ರೆ ಬೆಂಗಳೂರಿನ ರಂಗಪ್ರಿಯರಿಗೊಂದು ಸುಗ್ಗಿ. ಇದೀಗ 5ನೇ ವರುಷದ ಸಿ.ಜಿ.ಕೆ. ರಂಗೋತ್ಸವಕ್ಕೆ ರಾಜಧಾನಿ ಸಜ್ಜಾಗಿದೆ. ಖ್ಯಾತ ರಂಗ ಸಂಘಟಕ, ನಿರ್ದೇಶಕ ಸಿ.ಜಿ. ಕೃಷ್ಣಸ್ವಾಮಿ ಅವರ ಕನಸಿನ ಕೂಸಾದ “ರಂಗ ನಿರಂತರ’ ಇದನ್ನು ಆಯೋಜಿಸುತ್ತಿದ್ದು, ಕನ್ನಡವೂ ಸೇರಿದಂತೆ ಇತರೆ ಭಾಷೆಗಳ ನಾಟಕಗಳು ಏ.28ರಿಂದ ಮೇ 4ರ ವರೆಗೆ ಪ್ರದರ್ಶನ ಕಾಣಲಿವೆ. 

Advertisement

  ಭಾರತೀಯ ರಂಗಭೂಮಿಯಲ್ಲಿನ ಹೊಚ್ಚ ಹೊಸ ಪ್ರಯೋಗಗಳು, ನಾಟಕಗಳು, ಚಾಣಾಕ್ಷ ನಿರ್ದೇಶಕರು, ಪ್ರತಿಭಾನ್ವಿತ ಕಲಾವಿದರು ಹಾಗೂ ತಂತ್ರಜ್ಞರನ್ನು ಕನ್ನಡಿಗರಿಗೆ ಕಳೆದ ನಾಲ್ಕು ವರ್ಷಗಳಿಂದ ಪರಿಚಯಿಸುತ್ತಿರುವ ಸಿ.ಜಿ.ಕೆ. ರಂಗೋತ್ಸವವು ಈ ಬಾರಿ ಅಪರೂಪದ ನಾಟಕಗಳೊಂದಿಗೆ ಹಲವು ವಿಶೇಷಗಳನ್ನು ಹೊತ್ತು ತಂದಿದೆ.
   ನಾಟಕಗಳಿಗೂ ಮುನ್ನ “ಚಿತ್ರಕೂಟ’ ಚಿಕ್ಕ ಸುರೇಶ್‌ ನೆನಪಿನಲ್ಲಿ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ನಾಟಕಗಳ ಪ್ರದರ್ಶನದೊಂದಿಗೆ, ರಂಗ ತಂಡಗಳೊಂದಿಗೆ ಸಂವಾದ, ರಂಗವಸಂತ- 50 ಯುವ ರಂಗಕರ್ಮಿಗಳ ಪರಿಚಯ ಮಾಲಿಕೆ, ಕಥಾಪಡಸಾಲೆಗಳನ್ನು ಏರ್ಪಡಿಸಲಾಗಿದೆ.

  ಏ.28ರಂದು ಸಂ.7ಕ್ಕೆ ಅರುಣ್‌ ಸಾಗರ್‌ ಮತ್ತು ಗೆಳೆಯರು “ಬುರ್ರ ಬುಡುºಡಿಕೆ’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಂಗೋತ್ಸವದ ಅಧ್ಯಕ್ಷತೆಯನ್ನು ಡಾ.ಡಿ.ಕೆ. ಚೌಟ ವಹಿಸಲಿದ್ದಾರೆ. ರವೀಂದ್ರ ಕಲಾ ಕ್ಷೇತ್ರದಲ್ಲಿ ಕಾರ್ಯಕ್ರಮಗಳು ಜರುಗಲಿವೆ. 

         ಕಿರುಚಿತ್ರಗಳ ಪ್ರದರ್ಶನ
ಅ.ನ. ರಮೇಶ್‌ ವೇದಿಕೆ- ಏ.29ರಿಂದ ಮೇ 4, ಮಧ್ಯಾಹ್ನ 4.30ರಿಂದ 5ರ ವರೆಗೆ
         ಹೆಸರು      ನಿರ್ದೇಶಕರು
ಏ.29: ದಾಳಿ      ಮೇದಿನಿ ಕೆಳಮನೆ
ಏ.30: ಮೂರು ಬಣ್ಣಗಳು    ಬಾಲಾಜಿ ಮನೋಹರ್‌
ಮೇ 1: ವೈಟಿಂಗ್‌       ಬಿ.ಎಂ. ಗಿರಿರಾಜ್‌                                                                                                                                                                                                  (ಮಧ್ಯಾಹ್ನ 3ಕ್ಕೆ:    ಅನಲಾ      ಸಂಜ್ಯೋತಿ ವಿ.ಕೆ.
                      ಕಪ್ಪು ಕಲ್ಲಿನ ಶೈತಾನ       ಅನನ್ಯ ಕಾಸರವಳ್ಳಿ
                      ಅಮೂರ್ತ       ಅರವಿಂದ್‌ ಕುಪ್ಲಿಕರ್‌
                      ಫೈರ್‌ ಎಂಜಿನ್‌    ಉತ್ಥಾನ ಭಾರಿಘಾಟ್‌
 ಮೇ 2:    ನಿರ್ವಾಣ        ಮೌನೇಶ ಬಡಿಗೇರ್‌
ಮೇ 3: ಮಹಾಸಂಪರ್ಕ       ಸಂತೋಷ್‌ ಜಿ.
ಮೇ 4: ಕುರ್ಲಿ       ನಟೇಶ್‌ ಹೆಗಡೆ

ಉತ್ಸವ ನಾಟಕಗಳ ವಿವರ 
ಏ.29- ಅವ್ವೆ„ (ತಮಿಳು)
          ನಿರ್ದೇಶನ: ಎ. ಮಂಗೈ
          ರಚನೆ: ಇಂಕ್ವಿಲಾಬ್‌
          ತಂಡ: ಮರಪ್ಪಚ್ಚಿ, ಚೆನ್ನೈ
ಏ.30- ಶಿಖಂಡಿ (ಇಂಗ್ಲಿಷ್‌)
          ರಚನೆ- ನಿರ್ದೇಶನ: ಫ‌ಜಾ ಜಲಾಲಿ           ತಂಡ: ಫಾಟ್ಸ್‌ ದಿ ಆರ್ಟ್‌, ಮುಂಬೈ
ಮೇ 1 -  ಕಕೇಶಿಯನ್‌ ಚಾಕ್‌ಸರ್ಕಲ್‌ (ಕನ್ನಡ)
          ನಿರ್ದೇಶನ: ಚಂದ್ರಕೀರ್ತಿ ಬಿ.
          ರಚನೆ: ಬಟೋìಲ್ಟ್ ಬ್ರೆಕ್ಟ್
          ಅನುವಾದ: ಜಿ.ಎನ್‌. ರಂಗನಾಥ ರಾವ್‌
          ತಂಡ: ಥಿಯೇಟರ್‌ ಆರ್ಟಿಸ್ಟ್ರೀ, ಬೆಂಗಳೂರು
ಮೇ 2- ದಿ ಟ್ರಾನ್ಸ್‌ಪರೆಂಟ್‌ ಟ್ರಾಪ್‌ (ಮರಾಠಿ)
         ನಿರ್ದೇಶನ: ಶ್ರೀಕಾಂತ್‌ ಭೀಡೆ
         ತಂಡ: ದ್ಯಾಸ್‌, ಪುಣೆ
ಮೇ 3- ಕೋಡ್‌ ರೆಡ್‌ (ಬೆಂಗಾಲಿ)
         ರಚನೆ/ ನಿರ್ದೇಶನ: ಡಾ.. ಇಂದುದಿಪ ಸಿನ್ಹ
         ತಂಡ: ಪ್ರಾಜೆಕ್ಟ್ ಪ್ರೋಮೊಥಿಯೇಸ್‌, ಕೋಲ್ಕತ್ತಾ
ಮೇ 4- ಮಹಾಭಾರತ (ಹಿಂದಿ, ಇಂಗ್ಲಿಷ್‌, ಕನ್ನಡ)
         ರಚನೆ/ ನಿರ್ದೇಶನ: ಅನುರೂಪ ರಾಯ್‌
         ತಂಡ: ಕರ್‌ಕಥಾ  ಪೊಪೆಟ್‌ ಆರ್ಟ್ಸ್ ಟ್ರಸ್ಟ್‌, ನವದೆಹಲಿ

Advertisement
Advertisement

Udayavani is now on Telegram. Click here to join our channel and stay updated with the latest news.

Next