ಬಳ್ಳಾರಿ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿರೋಧಿಸಿ ಕ್ಯಾಂಪಸ್ ಪ್ರಂಟ್ ಯೂನಿಯನ್ ವಿದ್ಯಾರ್ಥಿ ಸಂಘಟನೆ ನಗರದಲ್ಲಿ ಉನ್ನತ ಶಿಕ್ಷಣ ಸಚಿವರ ವಿರುದ್ದ ಗುರುವಾರ ಪ್ರತಿಭಟನಾ ಧರಣಿ ನಡೆಸಿದರು.
ನಗರದ ಹೊರ ವಲಯದ ಬಿಐಟಿಎಂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎನ್ ಇಪಿ ಶಿಕ್ಷಣ ಕುರಿತ ಕಾರ್ಯಾಗಾರಕ್ಕೆ ಆಗಮಿಸಿದ್ದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ವಿರುದ್ದ ವಿದ್ಯಾರ್ಥಿಗಳು ಇನ್ಕಿಲಾಬ್ ಜಿಂದಾಬಾದ್, ಎನ್ ಇಪಿ ಶಿಕ್ಷಣ ನೀತಿಯನ್ನು ರದ್ದುಗೊಳಿಸುವಂತೆ ವಿವಿಧ ಘೋಷಣೆ ಕೂಗಿ ಒತ್ತಾಯಿಸಿದರು.
ಇದನ್ನೂ ಓದಿ:‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ
ವಿದ್ಯಾರ್ಥಿ ಸಂಘಟನೆಗಳ ಜೊತೆ ಚರ್ಚಿಸದೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವುದು ಸರಿಯಲ್ಲ ಎಂದರು. ಈ ವೇಳೆ ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಕೋರಿದರೂ ಕೇಳದ ಪ್ರತಿಭಟನಾ ನಿರತರನ್ನು ಕೊನೆಗೆ ಪೊಲೀಸರು ಬಂಧಿಸಿ ಕಾಲೇಜಿನ ಎರಡು ಬಸ್ ಗಳಲ್ಲಿ ತುಂಬಿಕೊಂಡು ಕರೆದೊಯ್ದರು.