ವರೆಗೆ ಅವಕಾಶವಿದೆ ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿ¨ªಾರೆ.
Advertisement
ಅಭ್ಯರ್ಥಿಗಳು ತಮ್ಮ ಐಚ್ಛಿಕಗಳನ್ನು ಬದಲಿಸಲು ಅಥವಾ ಪರಿಷ್ಕರಿಸಲು ಆ.11ರ ಬೆಳಗ್ಗೆ 8ರಿಂದ ಆ.14ರ ಬೆಳಗ್ಗೆ 11 ಗಂಟೆ ವರೆಗೆ ಅವಕಾಶ ಇರಲಿದೆ. ಇದಕ್ಕೂ ಮೊದಲು ಆ.11ರಂದು ಬೆಳಗ್ಗೆ 6 ಗಂಟೆಗೆ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗುವುದು. ಬಳಿಕ ಆ.16ರಂದು ಬೆಳಗ್ಗೆ 6 ಗಂಟೆಗೆ ಮೊದಲನೇ ಸುತ್ತಿನ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು. ಒಂದಕ್ಕಿಂತ ಹೆಚ್ಚು ಕೋರ್ಸುಗಳಿಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ಆದ್ಯತೆಗಳನ್ನು ಒಂದೇ ಪೋರ್ಟಲ್‌ನಲ್ಲಿ ದಾಖಲಿಸಬೇಕು. ಇದಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡ ವೀಡಿಯೋವನ್ನು ಪ್ರಾಧಿಕಾರದ ವೆಬ್‌ಸೈಟ್ //kea.kar.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ಹೇಳಿ¨ªಾರೆ.
ಆಯುರ್ವೇದ, ಯುನಾನಿ, ಹೋಮಿಯೋಪಥಿ, ಯೋಗ ಮತ್ತು ನ್ಯಾಚುರೋಪಥಿ ಹಾಗೂ ಬಿ.ಎಸ್ಸಿ. ಕೋರ್ಸುಗಳ ಸೀಟ್ ಮ್ಯಾಟ್ರಿಕ್ಸ್ ವಿವರವನ್ನು ಸರಕಾರ ನೀಡಿಲ್ಲ. ಈ ಕೋರ್ಸ್‌ಗಳ ಮಾಹಿತಿ ಬಂದ ಬಳಿಕ 2ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ತಿಳಿಸುವ ಸಾಧ್ಯತೆ ಇದೆ.