Advertisement
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಇಟಿ ರ್‍ಯಾಂಕ್ ಪಟ್ಟಿ ಬಿಡುಗಡೆ ಮಾಡಿ ಅವರು ಮಾತನಾಡಿದರು. 2020ಕ್ಕೆ ರಾಜ್ಯದಲ್ಲಿ ಆನ್‌ಲೈನ್ ಮೂಲಕವೇ ಸಿಇಟಿ ನಡೆಸಲಿದ್ದೇವೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಅಲ್ಲದೆ, ಮೂಲಸೌಕರ್ಯವನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇವೆ.
Related Articles
Advertisement
ಶುಲ್ಕ ನಿಗದಿ: ಎಂಜಿನಿಯರಿಂಗ್ ಶುಲ್ಕ ನಿಗದಿಯಾಗಿದೆ. ಶೇ.10ರಷ್ಟು ಏರಿಕೆ ಮಾಡಿದ್ದೇವೆ. ಇದಾಗಿಯೂ ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡದಂತೆ ಎಚ್ಚರಿಕೆಯ ಸಂದೇಶ ರವಾನಿಸಲಾಗುತ್ತದೆ.
ಶುಲ್ಕ ನಿಯಂತ್ರಣ ಸಮಿತಿ ರಚನೆಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯದ ತೀರ್ಪಿನ ನಂತರವೇ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹೆಚ್ಚುವರಿ ಶುಲ್ಕ ವಸೂಲಿ ನಿಯಂತ್ರಣ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಲಿದ್ದೇವೆ ಎಂದು ಸಚಿವ ಜಿ.ಟಿ.ದೇವೇಗೌಡ ವಿವರ ನೀಡಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಸುಮಾರು 260 ಕೋಟಿ ರೂ.ಗಳಿದ್ದು, ಅದರ ಸದುಪಯೋಗಕ್ಕಾಗಿ ಬೈಲಾದಲ್ಲಿ ಸಣ್ಣ ಬದಲಾವಣೆಯ ಅಗತ್ಯವಿದೆ. ಬೈಲಾ ಬದಲಾವಣೆಯನ್ನು ಆದಷ್ಟು ಬೇಗ ಮಾಡಿ, ಪ್ರಾಧಿಕಾರದಲ್ಲಿರುವ ಅನುದಾನವನ್ನು ರಾಜ್ಯದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಅಭಿವೃದ್ಧಿಗೆ ಬಳಸಲಾಗುತ್ತದೆ.-ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ.
ಸಿಇಟಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರ ವಿವರ
ಅಂಕ ಭೌತಶಾಸ್ತ್ರ ರಸಾಯಶಾಸ್ತ್ರ ಗಣಿತ ಜೀವಶಾಸ್ತ್ರ
60 0 1 1 38
59 1 4 1 166
58 3 10 7 310
57 8 21 6 547
56 8 25 5 842
55 16 27 5 1086 ರ್‍ಯಾಂಕ್ ವಿಜೇತರು
ಎಂಜಿನಿಯರಿಂಗ್
1. ಜೆಫಿನ್ ಬಿಜು-ಶ್ರೀ ಚೈತನ್ಯ ಟೆಕ್ನೊ ಕಾಲೇಜು ಮಾರತ್ತಹಳ್ಳಿ
2. ಆರ್. ಚಿನ್ಮಯ-ಎಕ್ಸ್‌ಫರ್ಟ್ ಪಿಯು ಕಾಲೇಜು ಮಂಗಳೂರು
3. ಸಾಯಿ ಸಾಕೇತಿಕ ಚಕುರಿ-ಶ್ರೀ ಚೈತನ್ಯ ಟೆಕ್ನೊ ಕಾಲೇಜು ರಾಮಮೂರ್ತಿ ನಗರ
4. ನಕುಲ ನಿರಾಜೆ-ನೆಹರು ಸ್ಮಾರಕ ವಿದ್ಯಾಲಯ ಬೆಂಗಳೂರು
5 ಸಮರ್ಥ ಮಯ್ಯ-ಎಕ್ಸ್‌ಫರ್ಟ್ ಪಿಯು ಕಾಲೇಜು ಮಂಗಳೂರು ಯೋಗ ಮತ್ತು ನ್ಯಾಚುರೋಪಥಿ
1. ಪಿ.ಮಹೇಶ್ ಆನಂದ್-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ಮಾರತ್ತಹಳ್ಳಿ
2. ವಿ.ವಾಸುದೇವ್-ಬೆಸ್ ಪಿಯು ಕಾಲೇಜು, ಮೈಸೂರು
3. ಉದಿತ್ ಮೋಹನ್-ನಾರಾಯಣ ಇ-ಟೆಕ್ನೊ ಸ್ಕೂಲ್, ಬೆಂಗಳೂರು
4. ಸುನಿಲ್ ಎಸ್.ಪಾಟೀಲ್- ವಿಷನ್ ಪಿಯು ಕಾಲೇಜು, ಬೆಂಗಳೂರು
5. ವರುಣ್ ರಾಘವೇಂದ್ರ ಐತಾಳ್-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ನಾಗರಬಾವಿ, ಬೆಂಗ ಳೂ ರು ಕೃಷಿ ವಿಜ್ಞಾನ
1. ಕೀರ್ತನಾ ಎಂ.ಅರುಣ್- ನ್ಯಾಷನಲ್ ಪಬ್ಲಿಕ್ ಸ್ಕೂಲ್, ರಾಜಾಜಿನಗರ, ಬೆಂಗ ಳೂ ರು
2. ಭುವನ್ ವಿ.ಬಿ-ಎಕ್ಸ್‌ಫರ್ಟ್ ಪಿಯು ಕಾಲೇಜು, ಮಂಗಳೂರು
3. ಶ್ರೀಕಾಂತ್ ಎಂ.ಎಲ್-ಮಾಸ್ಟರ್ ಪಿಯು ಕಾಲೇಜು, ಹಾಸನ
4. ಆರ್.ಶರಶ್ಚಂದ್ರ- ಶ್ರೀ ಅರವಿಂದೋ ಪಿಯು ಕಾಲೇಜು, ಶಿವಮೊಗ್ಗ
5. ಶ್ರೀಧರ್ ಎಂ- ಸೌಂದರ್ಯ ಪಿಯು ಕಾಲೇಜು, ಬೆಂಗಳೂರು ಪಶುವೈದ್ಯಕೀಯ
1. ಪಿ.ಮಹೇಶ್ ಆನಂದ್-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ಮಾರತ್ತಹಳ್ಳಿ, ಬೆಂಗಳೂರು
2. ಉದಿತ್ ಮೋಹನ್-ನಾರಾಯಣ ಇ-ಟೆಕ್ನೊ ಸ್ಕೂಲ್, ಬೆಂಗಳೂರು
3. ಬಿ.ವಿ.ಎಸ್.ಎನ್.ಸಾಯಿರಾಮ್-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ಮಾರತ್ತಹಳ್ಳಿ,ಬೆಂಗಳೂರು
4. ವಿ.ವಾಸುದೇವ್-ಬೆಸ್ ಪಿಯು ಕಾಲೇಜು, ಮೈಸೂರು
5. ಲಿಖೀತಾ ಎಸ್- ನಾರಾಯಣ ಪಿಯು ಕಾಲೇಜು, ಬೆಂಗಳೂರು ಫಾರ್ಮಸಿ
1. ಸಾಯಿ ಸಾಕೇತಿಕ ಚಕುರಿ-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ರಾಮಮೂರ್ತಿ ನಗರ. ಬೆಂಗಳೂರು
2. ಜೆಫಿನ್ ಬಿಜು-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ಮಾರತ್ತಹಳ್ಳಿ
3. ಆರ್. ಚಿನ್ಮಯ-ಎಕ್ಸ್‌ಫರ್ಟ್ ಪಿಯು ಕಾಲೇಜು, ಮಂಗಳೂರು
4. ನಕುಲ ನಿರಾಜೆ-ನೆಹರು ಸ್ಮಾರಕ ವಿದ್ಯಾಲಯ, ಬೆಂಗಳೂರು
5. ಪಿ.ಮಹೇಶ್ ಆನಂದ್-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ಮಾರತ್ತಹಳ್ಳಿ