ಕಟಪಾಡಿ: ವಿಶ್ವಬ್ರಾಹ್ಮಣ ಯುವ ಸಂಘಟನೆ ರಿ. ಕಾಪುವಿಧಾನ ಸಭಾ ಕ್ಷೇತ್ರದ ವತಿಯಿಂದ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಜರಗಿದ 3ನೇಯ ಶಾಸ್ತ್ರೋಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 11 ಜೋಡಿ ವಧು-ವರರು ರವಿವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಪುರೋಹಿತ ರವಿ ಆಚಾರ್ಯ ಬಂಟಕಲ್ಲು ಹಾಗೂ ಸುದರ್ಶನ ಪುರೋಹಿತ್ ಪಡುಬಿದ್ರಿ ಸಹಿತ ಸಮಾಜದ ಶ್ರೇಷ್ಠ ವೈದಿಕ ಮಹಾಶಯರ ಆಚಾರ್ಯತ್ವದಲ್ಲಿ ಶ್ರೀದೇವಳದ ಗರ್ಭಗುಡಿಯ ಹೊರ ಆವರಣದಲ್ಲಿ 11 ಜೋಡಿಗಳಿಗೆ ಪ್ರತ್ಯೇಕ ಮಂಟಪಗಳಲ್ಲಿ ವರನ ಸ್ವಾಗತದಿಂದ ಹಿಡಿದು ವಧುವನ್ನು ವರನ ಕಡೆಗೆ ಕಳುಹಿಸುವರೆಗೂ ಶಾಸ್ತ್ರೋಕ್ತವಾಗಿ ಪ್ರತ್ಯೇಕ ಇಬ್ಬರು ಪುರೋಹಿತರು ವಿವಾಹ ಸಮಾರಂಭವನ್ನು ನೆರವೇರಿಸಿದರು. ದಾನಿಗಳ ಸಹಕಾರದಿಂದ ಉಚಿತವಾಗಿ ಪಟ್ಟೆ ಸೀರೆ, ಬಂಗಾರದ ತಾಳಿ, ಪಟ್ಟೆ, ಶಾಲು, ಪೇಟ, ಬಾಸಿಂಗದೊಂದಿಗೆ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಜರಗಿದ ವಿವಾಹ ಸಮಾರಂಭದಲ್ಲಿ ಸುಮಾರು ಏಳು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡು ಆಶೀರ್ವದಿಸಿದರು.
ಪರಮ ಪೂಜ್ಯ ಜಗದ್ಗುರುಗಳಾದ ಅನಂತಶ್ರೀ ವಿಭೂಷಿತ ಕಟಪಾಡಿಯ ಶ್ರೀಮತ್ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹಾಗೂ ಹಾಸನ ಅರೆಮಾದನ ಹಳ್ಳಿ ಶ್ರೀ ಸುಜ್ಞಾನ ಪ್ರಭು ಪೀಠ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಉಪಸ್ಥಿತರಿದ್ದು, ನವ ದಂಪತಿಗಳನ್ನು ಆಶೀರ್ವದಿಸಿದರು.
ಈ ಸಂದರ್ಭ ವಿಶ್ವಬ್ರಾಹ್ಮಣ ಯುವ ಸಂಘಟನೆ ರಿ. ಕಾಪು ವಿಧಾನಸಭಾಕ್ಷೇತ್ರ ಇದರ ಅಧ್ಯಕ್ಷ ಸುಧಾಕರ ಆಚಾರ್ಯ ಬಿಳಿಯಾರು, ಗೌರವ ಅಧ್ಯಕ್ಷ ಸದಾಶಿವ ಆಚಾರ್ಯ ಪಡುಕುತ್ಯಾರು, ಮಹಾಪೋಷಕರಾದ ಅಲೆವೂರು ಯೋಗೀಶ್ ಆಚಾರ್ಯ, ವಿಶ್ವನಾಥ ಆಚಾರ್ಯ ಕರಂಬಳ್ಳಿ, ಸಂಚಾಲಕ ಮುರಳೀಧರ ಆಚಾರ್ಯ ಇನ್ನಂಜೆ, ಪ್ರಧಾನ ಕಾರ್ಯದರ್ಶಿ ರತ್ನಾಕರ ಕುರ್ಕಾಲು, ಕೋಶಾಧಿಕಾರಿ ಗಣೇಶ ಆಚಾರ್ಯ ಹೆಜಮಾಡಿ, ಜತೆ ಕಾರ್ಯದರ್ಶಿ ರಾಜೇಶ ಆಚಾರ್ಯ ಬಿಳಿಯಾರು, ಉಪಾಧ್ಯಕ್ಷರಾದ ವಿಜಯ ಆಚಾರ್ಯ ಪಡುಬಿದ್ರಿ, ರಾಜೇಶ್ ಆಚಾರ್ಯ ಮಂಚಕಲ್ಲು, ಯಜ್ಞನಾಥ ಆಚಾರ್ಯ ಹಿರೇಬೆಟ್ಟು, ಹರೀಶ್ ಆಚಾರ್ಯ ಕಳತ್ತೂರು, ಸತೀಶ್ ಆಚಾರ್ಯ ಪಡುಬಿದ್ರಿ, ವಲಯ ಅಧ್ಯಕ್ಷರಾದ ರತ್ನಾಕರ ಆಚಾರ್ಯ ಪಲಿಮಾರು, ದಿನೇಶ್ ಆಚಾರ್ಯ ಕಾಪು, ರತ್ನಾಕರ ಆಚಾರ್ಯ ಹಿರಿಯಡ್ಕ, ಗಣೇಶ್ ಆಚಾರ್ಯ ಮಂಚಕಲ್ಲು, ಕಾರ್ಯದರ್ಶಿಗಳಾದ ದಿನೇಶ್ ಆಚಾರ್ಯ ಎರ್ಮಾಳು, ಪ್ರಕಾಶ್ ಆಚಾರ್ಯ ಪಡುಬಿದ್ರಿ, ಪ್ರದೀಪ್ ಆಚಾರ್ಯ ಹಿರೇಬೆಟ್ಟು, ಪ್ರಶಾಂತ್ ಆಚಾರ್ಯ ಕುತ್ಯಾರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು, ಗಣ್ಯರಾದ ಮುಂಬಯಿ ದಹಿಸರ್ ಹೋಟೆಲ್ ಗೋಕುಲಾನಂದ ಪ್ರೈವೇಟ್ ಲಿ. ನ ಕೃಷ್ಣ ವಿ.ಆಚಾರ್ಯ, ರಾಜೀವಿ ಆಚಾರ್ಯ, ಮಂಗಳೂರು ಕೆನರಾ ಜುವೆಲ್ಲರ್‌ನ ಧನಂಜಯ ಪಾಲ್ಕೆ, ವಂದನಾ ಪಾಲ್ಕೆ , ಬೆಂಗಳೂರು ಗಾಂಧಿನಗರ ಹೋಟೆಲ್ ಅಕ್ಷಯ್ ಔರ ವಿಶ್ವನಾಥ್ ರಾವ್, ವೀಣಾ ವಿಶ್ವನಾಥ್ ರಾವ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.